ಕನ್ನಡಿಗ ಅನಿಲ್​ ಕುಂಬ್ಳೆ ಸಾಧನೆಯ ವಿಡಿಯೋ ಪ್ರಕಟಿಸಿ ಹಾಲ್​ ಆಫ್ ಫೇಮ್ ಸಂಭ್ರಮಿಸಿದ ಐಸಿಸಿ

anil kumble for web
Published on

ನವದೆಹಲಿ: ಭಾರತ ತಂಡದ ಮಾಜಿ ನಾಯಕ ಅನಿಲ್​ ಕುಂಬ್ಳೆ ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ತೋರಿದ ಸಾಧನೆಗೆ ಅಂತಾರಾಷ್ಟ್ರೀಯ ಕ್ರಿಕೆಟ್​ ಸಮಿತಿ (ಐಸಿಸಿ) 2015ರಲ್ಲೇ ಹಾಲ್​ ಆಫ್ ಫೇಮ್​ಗೆ ಸೇರ್ಪಡೆಗೊಳಿಸಿತು, ಇದೀಗ ಕನ್ನಡಿಗನ ಸಾಧನೆಯನ್ನು ಮೆಲುಕು ಹಾಕಿರುವ ಐಸಿಸಿ, ಅನಿಲ್​ ಕುಂಬ್ಳೆ ಸಾಧನೆ ಒಳಗೊಂಡ ವಿಡಿಯೋವೊಂದನ್ನು ಗುರುವಾರ ಬಿಡುಗಡೆಗೊಳಿಸಿದೆ. ಐಸಿಸಿ ತನ್ನ ಅಧಿಕೃತ ಇನ್​ಸ್ಟಾಗ್ರಾಂನಲ್ಲಿ ವಿಡಿಯೋ ಬಿಡುಗಡೆಗೊಳಿಸಿದೆ. ಅನಿಲ್​ ಕುಂಬ್ಳೆ ಟೆಸ್ಟ್​ ಕ್ರಿಕೆಟ್​ ಇತಿಹಾಸದಲ್ಲಿ ಅತಿಹೆಚ್ಚು ವಿಕೆಟ್​ ಕಬಳಿಸಿರುವ 3ನೇ ಬೌಲರ್​ ಎನಿಸಿಕೊಂಡಿದ್ದಾರೆ.

ಅನಿಲ್​ ಕುಂಬ್ಳೆ ಕುರಿತು ಶ್ರೀಲಂಕಾದ ಮಾಜಿ ನಾಯಕ ಕುಮಾರ ಸಂಗಕ್ಕರ ಹಾಗೂ ನ್ಯೂಜಿಲೆಂಡ್​ ಮಾಜಿ ನಾಯಕ ಸ್ಟೀನ್​ ಫ್ಲೆಮಿಂಗ್ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಅನಿಲ್​ ಕುಂಬ್ಳೆ ಎಷ್ಟೋ ದಿನಗಳ ಕಾಲ ನನ್ನ ನಿದ್ದೆ ಕಸಿದಿದ್ದಾರೆ. ಅನಿಲ್​ ಕುಂಬ್ಳೆ ಶೈಲಿಯಲ್ಲಿ ಬೌಲಿಂಗ್​ ಮಾಡುವುದು ತುಂಬಾ ಕಷ್ಟಕರ ಎಂದು ಸಂಗಕ್ಕರ ಹೇಳಿದ್ದಾರೆ. ಅನಿಲ್​ ಕುಂಬ್ಳೆ 132 ಟೆಸ್ಟ್​ ಪಂದ್ಯಗಳಿಂದ 619 ವಿಕೆಟ್​ ಕಬಳಿಸಿದ್ದು, 35 ಬಾರಿ 5 ವಿಕೆಟ್​ ಗೊಂಚಲು ಪಡೆದಿದ್ದಾರೆ. 271 ಏಕದಿನ ಪಂದ್ಯಗಳಿಂದ 337 ವಿಕೆಟ್​ ಪಡೆದಿದ್ದಾರೆ.

ಅನಿಲ್​ ಕುಂಬ್ಳೆ ಟೆಸ್ಟ್​ ಕ್ರಿಕೆಟ್​ನಲ್ಲಿ ಅತಿಹೆಚ್ಚು ವಿಕೆಟ್​ ಕಬಳಿಸಿದ ಮೂರನೇ ಬೌಲರ್​ ಎನಿಸಿದ್ದಾರೆ. ಶ್ರೀಲಂಕಾದ ಮುತ್ತಯ್ಯ ಮುರಳೀಧರನ್​ ಹಾಗೂ ಆಸ್ಟ್ರೆಲಿಯಾದ ಶೇನ್​ ವಾರ್ನೆ ಮೊದಲ ಎರಡು ಸ್ಥಾನದಲ್ಲಿದ್ದಾರೆ. ಅನಿಲ್​ ಕುಂಬ್ಳೆ ಅಲ್ಲದೆ, ನ್ಯೂಜಿಲೆಂಡ್​ ತಂಡದ ಮಾಜಿ ನಾಯಕ ಮಾಟಿರ್ನ್​ ಕ್ರೋವೆ ಸಾಧನೆಯ ಕುರಿತು ಮಾಹಿತಿ ಹಂಚಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net