More

    ಮಹಿಳಾ ಕ್ರಿಕೆಟರ್ ತಾಯಿಯ ಕೋವಿಡ್ ಚಿಕಿತ್ಸೆಗೆ ನೆರವಾದ ವಿರಾಟ್ ಕೊಹ್ಲಿ

    ನವದೆಹಲಿ: ಕರೊನಾ ಸೋಂಕಿನಿಂದ ಬಳಲುತ್ತಿರುವ ಅಮ್ಮನಿಗೆ ಸೂಕ್ತ ಚಿಕಿತ್ಸೆ ನೀಡಲು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ಭಾರತ ಮಹಿಳಾ ಕ್ರಿಕೆಟ್ ತಂಡದ ಮಾಜಿ ಆಟಗಾರ್ತಿ ಕೆಎಸ್ ಶ್ರವಂತಿ ನಾಯ್ಡು ಅವರಿಗೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಹಾಯಹಸ್ತ ಚಾಚಿದ್ದಾರೆ.

    ಭಾರತ ಪರ 4 ಏಕದಿನ ಮತ್ತು ಏಕೈಕ ಟೆಸ್ಟ್ ಆಡಿರುವ ಶ್ರವಂತಿ ಅವರಿಗೆ ಆರ್ಥಿಕ ನೆರವಿನ ಅಗತ್ಯವಿದೆ ಎಂಬ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ಕಳೆದ ಕೆಲದಿನಗಳಿಂದ ಹರಿದಾಡುತ್ತಿದ್ದವು. ಬಿಸಿಸಿಐ ಮತ್ತು ಹೈದರಾಬಾದ್ ಕ್ರಿಕೆಟ್ ಸಂಸ್ಥೆಗೂ ಅವರು ಆರ್ಥಿಕ ನೆರವಿನ ಮನವಿ ಸಲ್ಲಿಸಿದ್ದರು. ಅಮ್ಮನ ಜತೆಗೆ ಪಾಸಿಟಿವ್ ಆಗಿದ್ದ ಅಪ್ಪನ ಚಿಕಿತ್ಸೆಗಾಗಿ ಶ್ರವಂತಿ ಈಗಾಗಲೆ 16 ಲಕ್ಷ ರೂ. ವ್ಯಯಿಸಿ ಕೈ ಖಾಲಿ ಮಾಡಿಕೊಂಡಿದ್ದರು.

    ಇದನ್ನೂ ಓದಿ: ಕನ್ನಡತಿ ವೇದಾ ಬಳಿಕ ಮತ್ತೋರ್ವ ಮಹಿಳಾ ಕ್ರಿಕೆಟರ್ ತಾಯಿ ಕರೊನಾಗೆ ಬಲಿ

    ಶ್ರವಂತಿ ಸಂಕಷ್ಟದ ಸುದ್ದಿಯನ್ನು ಟೀಮ್ ಇಂಡಿಯಾದ ಫೀಲ್ಡಿಂಗ್ ಕೋಚ್ ಆರ್. ಶ್ರೀಧರ್ ಇತ್ತೀಚೆಗೆ ವಿರಾಟ್ ಕೊಹ್ಲಿ ಗಮನಕ್ಕೆ ತಂದಿದ್ದರು. ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ ಸ್ಪಂದಿಸಿದ್ದು, ಅವರ ಅಮ್ಮ ಎಸ್‌ಕೆ ಸುಮನ್ ಚಿಕಿತ್ಸೆಗಾಗಿ 6.77 ಲಕ್ಷ ರೂ. ನೀಡಿದ್ದಾರೆ. ಹೈದರಾಬಾದ್ ಕ್ರಿಕೆಟ್ ಸಂಸ್ಥೆಯೂ ಶ್ರವಂತಿ ಹೆತ್ತವರ ಚಿಕಿತ್ಸೆಗಾಗಿ 5 ಲಕ್ಷ ರೂ. ನೆರವು ನೀಡಿದೆ ಎನ್ನಲಾಗಿದೆ.

    ಈ ಮುನ್ನ, ಕರೊನಾದಿಂದ ಸಂಕಷ್ಟದಲ್ಲಿರುವವರ ನೆರವಿಗಾಗಿ ಪತ್ನಿ ಅನುಷ್ಕಾ ಶರ್ಮ ಜತೆಗೂಡಿ ನಿಧಿ ಸಂಗ್ರಹ ಅಭಿಯಾನ ಹಮ್ಮಿಕೊಂಡಿದ್ದ ವಿರಾಟ್ ಕೊಹ್ಲಿ ಸುಮಾರು 11 ಕೋಟಿ ರೂ. ಸಂಗ್ರಹಿಸಿದ್ದರು. ಈ ಪೈಕಿ 2 ಕೋಟಿ ರೂ.ಗಳನ್ನು ಕೊಹ್ಲಿ-ಅನುಷ್ಕಾ ದಂಪತಿಯೇ ನೀಡಿದ್ದರು.

    ಆ ಪಂದ್ಯದ ಬಳಿಕ ನನಗೆ ಮತ್ತು ಪತ್ನಿಗೆ ಜೀವ ಬೆದರಿಕೆ ಬಂದಿತ್ತು ಎಂದ ಫಾಫ್​ ಡು ಪ್ಲೆಸಿಸ್!

    VIDEO | ಕ್ರಿಕೆಟಿಗ ರಾಬಿನ್ ಉತ್ತಪ್ಪ ಡಾನ್ಸ್ ವಿಡಿಯೋ ವೈರಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts