More

    ಕನ್ನಡತಿ ವೇದಾ ಬಳಿಕ ಮತ್ತೋರ್ವ ಮಹಿಳಾ ಕ್ರಿಕೆಟರ್ ತಾಯಿ ಕರೊನಾಗೆ ಬಲಿ

    ನವದೆಹಲಿ: ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾಗಿರುವ ಭಾರತ ಮಹಿಳಾ ಕ್ರಿಕೆಟ್ ತಂಡದ ಬ್ಯಾಟುಗಾರ್ತಿ ಪ್ರಿಯಾ ಪೂನಿಯಾ ಅವರ ತಾಯಿ ಕರೊನಾ ಸೋಂಕಿನಿಂದ ನಿಧನ ಹೊಂದಿದ್ದಾರೆ. ಈ ಮುನ್ನ ಕರ್ನಾಟಕದ ಮಹಿಳಾ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ ಕೂಡ ಕರೊನಾದಿಂದಾಗಿ ತಾಯಿಯನ್ನು ಕಳೆದುಕೊಂಡಿದ್ದರು.

    24 ವರ್ಷದ ಪ್ರಿಯಾ ಪೂನಿಯಾ ಅಮ್ಮನ ಅಗಲಿಕೆಯ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ‘ಬಲಿಷ್ಠವಾಗಿರು ಎಂದು ನೀನು ಯಾಕೆ ಯಾವಾಗಲೂ ನನಗೆ ಹೇಳುತ್ತಿದ್ದೆ ಎಂಬುದು ಇಂದು ನನಗೆ ಅರ್ಥವಾಗುತ್ತಿದೆ. ಒಂದು ದಿನ ನಿನ್ನ ಅಗಲುವಿಕೆಯ ನೋವನ್ನು ಸಹಿಸಿಕೊಳ್ಳಲು ನಾನು ಶಕ್ತಳಾಗಿರಬೇಕೆಂದು ನಿನಗೆ ಗೊತ್ತಿತ್ತು. ಅಮ್ಮ ನಾನು ನಿನ್ನನ್ನು ಮಿಸ್ ಮಾಡಿಕೊಳ್ಳುತ್ತಿರುವೆ. ನೀನು ಯಾವಾಗಲೂ ನನ್ನ ಜತೆಗಿರುವೆ ಎಂಬುದು ಗೊತ್ತಿದೆ. ನನ್ನ ಮಾರ್ಗದರ್ಶಕಿ, ನನ್ನ ಅಮ್ಮ… ನಿನ್ನನ್ನು ಯಾವಾಗಲೂ ಪ್ರೀತಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.

    ಇದನ್ನೂ ಓದಿ: ಸುಶೀಲ್‌ಕುಮಾರ್ ಬಗ್ಗೆ ಮಾಹಿತಿ ನೀಡಿ, 1 ಲಕ್ಷ ರೂ. ಬಹುಮಾನ ಗೆಲ್ಲಿ!

    ಜತೆಗೆ ಈ ವೈರಸ್ ನಿಜಕ್ಕೂ ಅಪಾಯಕಾರಿಯಾದುದು. ದಯವಿಟ್ಟು ಎಲ್ಲರೂ ನಿಯಮಗಳನ್ನು ಪಾಲಿಸಿರಿ ಮತ್ತು ಮುನ್ನೆಚ್ಚರಿಕೆ ತೆಗೆದುಕೊಳ್ಳಿ ಎಂದು ಪ್ರಿಯಾ ಅಭಿಮಾನಿಗಳಿಗೆ ಹೇಳಿದ್ದಾರೆ. ಪ್ರಿಯಾ ಭಾರತ ಪರ ಇದುವರೆಗೆ 5 ಏಕದಿನ ಮತ್ತು 3 ಟಿ20 ಪಂದ್ಯಗಳನ್ನು ಆಡಿದ್ದಾರೆ. ಕರೊನಾ ಸೋಂಕಿನಿಂದಾಗಿ ಈ ಮುನ್ನ ಪುರುಷರ ಕ್ರಿಕೆಟಿಗರಾದ ಪೀಯುಷ್ ಚಾವ್ಲಾ, ಆರ್‌ಪಿ ಸಿಂಗ್, ಚೇತನ್ ಸಕಾರಿಯಾ ತಮ್ಮ ತಂದೆಯನ್ನು ಕಳೆದುಕೊಂಡಿದ್ದರು.

    ತೆಂಡುಲ್ಕರ್ ಪೋಸ್ಟರ್ ಹರಿದು ಹಾಕಿದ್ರು ಬಾಲಿವುಡ್ ನಟಿ ಹುಮಾ ಖುರೇಷಿ, ಮುಂದೇನಾಯ್ತು?

    ಆರ್​ಸಿಬಿ, ವಿರಾಟ್​ ಕೊಹ್ಲಿ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಚಸ್ಮಾ ಸುಂದರಿ ರಶ್ಮಿಕಾ ಮಂದಣ್ಣ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts