

ನವದೆಹಲಿ: ಟೀಮ್ ಇಂಡಿಯಾದ ವೇಗದ ಬೌಲರ್ಗಳಾದ ಮೊಹಮದ್ ಶಮಿ ಮತ್ತು ಟಿ. ನಟರಾಜನ್ ಕರೊನಾ ಲಸಿಕೆಯ ಮೊದಲ ಡೋಸ್ ಅನ್ನು ಗುರುವಾರ ತೆಗೆದುಕೊಂಡಿದ್ದಾರೆ. ಇಬ್ಬರೂ ಟ್ವಿಟರ್ನಲ್ಲಿ ಚಿತ್ರವನ್ನು ಪ್ರಕಟಿಸುವ ಮೂಲಕ ಈ ವಿಷಯವನ್ನು ತಿಳಿಸಿದ್ದಾರೆ.
ಇಂಗ್ಲೆಂಡ್ ಪ್ರವಾಸಕ್ಕೆ ಪೂರ್ವಭಾವಿಯಾಗಿ ಮುಂಬೈನಲ್ಲಿ ಹೋಟೆಲ್ ಕ್ವಾರಂಟೈನ್ನಲ್ಲಿರುವ ಮೊಹಮದ್ ಶಮಿ, ಅಲ್ಲೇ ಕರೊನಾ ಲಸಿಕೆ ತೆಗೆದುಕೊಂಡಂತಿದೆ. ನನ್ನ ಮೊದಲ ಡೋಸ್ ಹಾಕಿಸಿಕೊಂಡೆ. ಎಲ್ಲರೂ ಲಸಿಕೆ ಹಾಕಿಸಿಕೊಳ್ಳಿ ಎಂದು ಕೇಳಿಕೊಳ್ಳುವೆ ಎಂದು ಮೊಹಮದ್ ಶಮಿ ಟ್ವಿಟರ್ನಲ್ಲಿ ಬರೆದಿದ್ದಾರೆ. ಕ್ವಾರಂಟೈನ್ ವೇಳೆ ಬಿಸಿಸಿಐ, ಇದುವರೆಗೆ ಲಸಿಕೆ ಹಾಕಿಕೊಳ್ಳದ ಆಟಗಾರರಿಗೆ ಮೊದಲ ಡೋಸ್ ವ್ಯವಸ್ಥೆ ಮಾಡಿದೆ ಎನ್ನಲಾಗಿದೆ.
ಇನ್ನು ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಸನ್ರೈಸರ್ಸ್ ತಂಡದ ಎಡಗೈ ವೇಗಿ ಟಿ. ನಟರಾಜನ್, ಇವತ್ತು ಬೆಳಗ್ಗೆ ಕರೊನಾ ಲಸಿಕೆ ಹಾಕಿಸಿಕೊಂಡೆ. ಆರೋಗ್ಯ ಸಿಬ್ಬಂದಿಗೆ ಲಾಂತರ ಧನ್ಯವಾದಗಳು. ನಮ್ಮ ಜನರ ಜೀವಕ್ಕಾಗಿ ಅವರು ತಮ್ಮ ಪ್ರಾಣವನ್ನು ಪಣಕ್ಕಿಟ್ಟಿದ್ದಾರೆ. ಎಲ್ಲರೂ ಲಸಿಕೆ ಹಾಕಿಸಿಕೊಳ್ಳಿ ಎಂದು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ. ಟಿ. ನಟರಾಜನ್ ಜುಲೈನಲ್ಲಿ ಭಾರತದ 2ನೇ ಸ್ತರದ ತಂಡದೊಂದಿಗೆ ಶ್ರೀಲಂಕಾ ಪ್ರವಾಸಕ್ಕೆ ತೆರಳುವ ಸಾಧ್ಯತೆ ಇದೆ.