More

    PHOTO | ಟೀಮ್​ ಇಂಡಿಯಾ ಕ್ರಿಕೆಟಿಗರ ಅಭ್ಯಾಸಕ್ಕೆ ಹೊಸ ಕಿಟ್​

    ಮುಂಬೈ: ನ್ಯೂಜಿಲೆಂಡ್​ ವಿರುದ್ಧ ಜೂನ್​ 18ರಿಂದ ಸೌಥಾಂಪ್ಟನ್​ನಲ್ಲಿ ನಡೆಯಲಿರುವ ಪ್ರತಿಷ್ಠಿತ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್ ಫೈನಲ್​ ಪಂದ್ಯಕ್ಕೆ ಮುನ್ನ ಅಭ್ಯಾಸದ ವೇಳೆ ಟೀಮ್​ ಇಂಡಿಯಾ ಹೊಸ ಕಿಟ್​ನಲ್ಲಿ ಮಿಂಚಲಿದೆ. ಈ ಹೊಸ ಕಿಟ್​ನ ಝಲಕ್​ ಅನ್ನು ಕನ್ನಡಿಗ ಮಯಾಂಕ್​ ಅಗರ್ವಾಲ್​ ಸಾಮಾಜಿಕ ಜಾಲತಾಣದಲ್ಲಿ ಗುರುವಾರ ಹಂಚಿಕೊಂಡಿದ್ದಾರೆ.

    ಟೀಮ್​ ಇಂಡಿಯಾ ಸದ್ಯ ಮುಂಬೈನಲ್ಲಿ ಹೋಟೆಲ್​ ಕ್ವಾರಂಟೈನ್​ನಲ್ಲಿರುವ ನಡುವೆ ಮಯಾಂಕ್​ ಅಗರ್ವಾಲ್​, ತಿಳಿನೀಲಿ ಮತ್ತು ಕಡುನೀಲಿ ಬಣ್ಣದ ಈ ಹೊಸ ಕಿಟ್​ ಜೆಸಿರ್ಯನ್ನು ಪ್ರದಶಿರ್ಸಿದ್ದಾರೆ. ಇದರಲ್ಲಿ ಬಿಸಿಸಿಐ ಲಾಂಛನದ ಜತೆಗೆ ಪ್ರಾಯೋಜಕರಾದ ಬೈಜುಸ್​ ಮತ್ತು ಎಂಪಿಎಲ್​ ಲಾಂಛನವೂ ಇದೆ. ಸಿದ್ಧತೆಯು ಬಲಿಷ್ಠವಾಗಿ ಸಾಗುತ್ತಿದೆ. ಕಾತರವೂ ಹೆಚ್ಚಾಗುತ್ತಿದೆ ಎಂದು ಮಯಾಂಕ್​ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಹೊಸ ಕಿಟ್​ ಧರಿಸಿ ನೀಡಿರುವ ಪೋಸ್​ನ ಚಿತ್ರದೊಂದಿಗೆ ಬರೆದುಕೊಂಡಿದ್ದಾರೆ.

    ಇದನ್ನೂ ಓದಿ: ಕೊಹ್ಲಿ ನಂತರ ಭಾರತದ ನಾಯಕನಾಗಲಿರುವ ಆಟಗಾರನನ್ನು ಹೆಸರಿಸಿದ ಪಾಕ್​ ಕ್ರಿಕೆಟಿಗ!

    ಡಬ್ಲ್ಯುಟಿಸಿ ಫೈನಲ್​ ಪಂದ್ಯಕ್ಕೆ ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ಮಯಾಂಕ್​ ಅಗರ್ವಾಲ್​ ಆರಂಭಿಕರಾಗಿ ಕಣಕ್ಕಿಳಿಯಲು ಶುಭಮಾನ್​ ಗಿಲ್​ಗೆ ಸ್ಪರ್ಧೆಯೊಡ್ಡಲಿದ್ದಾರೆ. ಬಳಿಕ ಭಾರತ ತಂಡ ಆತಿಥೇಯ ಇಂಗ್ಲೆಂಡ್​ ವಿರುದ್ಧ 5 ಪಂದ್ಯಗಳ ಟೆಸ್ಟ್​ ಸರಣಿ ಆಡಲಿದ್ದು, ಅದರಲ್ಲೂ ಅವಕಾಶ ಪಡೆಯುವ ನಿರೀಕ್ಷೆಯನ್ನು ಮಯಾಂಕ್​ ಹೊಂದಿದ್ದಾರೆ.

    VIDEO | ಆರು ವರ್ಷದ ಬಾಲಕಿಯ ಬ್ಯಾಟಿಂಗ್​ ವಿಡಿಯೋ ವೈರಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts