

ಲಾಹೋರ್: ಭಾರತ ಹಾಗೂ ಪಾಕಿಸ್ತಾನ ನಡುವಿನ ಟಿ-20 ವಿಶ್ವಕಪ್ ಪಂದ್ಯ ಶುರುವಾಗುವುದಕ್ಕೆ ಕೆಲವೇ ಘಂಟೆಗಳು ಬಾಕಿ ಉಳಿದಿದ್ದು, ಹೈವೋಲ್ಟೇಜ್ ಕದನವನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದಾರೆ. ಭಾರತ ಹಾಗೂ ಪಾಕ್ ಪಂದ್ಯಕ್ಕೂ ಮುನ್ನ ಮಾಜಿ ಆಟಗಾರರು ಹೇಳಿಕೆ ಕೊಡುವುದು ಸಾಮಾನ್ಯ. ಅದೇ ರೀತಿ ಈಗ ಪಾಕಿಸ್ತಾನ ಮಾಹಿ ಆಟಗಾರ ಕಮ್ರಾನ್ ಅಕ್ಮಲ್ ನೀಡಿರುವ ಹೇಳಿಕೆ ಸಖತ್ ವೈರಲ್ ಆಗಿದೆ.
ಪಾಕ್ ಮಾಜಿ ಆಟಗಾರ ಕಮ್ರಾನ್ ಅಕ್ಮಲ್ ನೀನು ಟಿ20 ಮಾದರಿಯಲ್ಲಿ ನಂಬರ್ 01 ಎಂದು ಸಾಬೀತುಪಡಿಸಬೇಕೆಂದರೆ ಮೊದಲು ಪಾಕಿಸ್ತಾನದ ವಿರುದ್ಧ ಚೆನ್ನಾಗಿ ಆಡಿ ತೋರಿಸು ಎಂದು ಸವಾಲೆಸೆದಿದ್ದಾರೆ.
ಈ ಕುರಿತು ಮಾತನಾಡಿರುವ ಕಮ್ರಾನ್ ಅಕ್ಮಲ್, ನಾನು ನೋಡಿದಂತೆ ಐಸಿಸಿ ನಡೆಸುವ ಟೂರ್ನಮೆಂಟ್ಗಳಲ್ಲಿ ಪಾಕಿಸ್ತಾನದ ವಿರುದ್ಧ ಉತ್ತಮ ಪ್ರದರ್ಶನ ನೀಡಿದ್ದಾರೆ. ಇವರ ಆಟದ ಬಗ್ಗೆ ನಾನು ಹೆಚ್ಚಾಗಿ ಮಾತನಾಡುವುದಿಲ್ಲ. ಆದರೆ ನಾನು ನೋಡಿದಂತೆ ಸೂರ್ಯಕುಮಾರ್ ಯಾದವ್ ಟಿ-20 ಮಾದರಿಯಲ್ಲಿ ಪಾಕಿಸ್ತಾನದ ವಿರುದ್ಧ ಹೆಚ್ಚು ರನ್ ಗಳಿಸಿದ್ದನ್ನು ನಾನು ನೋಡಿಲ್ಲ. ಆದ್ದರಿಂದ ನೀವು ನಂಬರ್ 01 ಆಟಗಾರನಾಗಿದ್ದರೆ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಜಾಸ್ತಿ ರನ್ ಗಳಿಸುವ ಮೂಲಕ ನೀವು ಉತ್ತಮ ಆಟಗಾರ ಎಂಬುದನ್ನು ನಿರೂಪಿಸಿ ಎಂದು ಸವಾಲೆಸೆದಿದ್ದಾರೆ.
ನನ್ನ ಪ್ರಕಾರ ಇಂದು ನಡೆಯುವ ಪಂದ್ಯದಲ್ಲಿ ಭಾರತವೇ ಫೇವರೇಟ್ ತಂಡವಾಗಿದ್ದು, ಈ ಬಾರಿ ವಿಶ್ವಕಪ್ ಗೆಲ್ಲುವ ತಂಡಗಳಲ್ಲಿ ಒಂದಾಗಿದೆ. ರೋಹಿತ್ ತಂಡವನ್ನು ಉತ್ತಮವಾಗಿ ಮುನ್ನಡೆಸುತ್ತಿದ್ದು, ತಮ್ಮಲಿರುವ ಪ್ರತಿಭೆಯನ್ನು ಬಳಸಿಕೊಂಡು ಕಪ್ ಗೆಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇದು ಕಷ್ಟಸಾಧ್ಯವಾಗುತ್ತದೆ ಎಂದು ಮಾಜಿ ಕ್ರಿಕೆಟಿಗ ಕಮ್ರಾನ್ ಅಕ್ಮಲ್ ಅಭಿಪ್ರಾಯಪಟ್ಟಿದ್ದಾರೆ.