ಇನ್ನು ಉಳಿದಿರುವುದು ಕೇವಲ 5 ಪಂದ್ಯಗಳು! 3-4 ಸ್ಥಾನ ಯಾರ ಮುಡಿಗೆ? ಹೀಗಿದೆ ನೋಡಿ ಪ್ಲೇಆಫ್ ಲೆಕ್ಕಾಚಾರ

WhatsApp Image 2024-05-16 at 1.46.08 PM
Published on

ನವದೆಹಲಿ: ನಿನ್ನೆ (ಮೇ.15) ಅಸ್ಸಾಂ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಪಂಜಾಬ್ ಕಿಂಗ್ಸ್​ ಮತ್ತು ರಾಜಸ್ಥಾನ ರಾಯಲ್ಸ್​ ನಡುವಿನ ಪಂದ್ಯದಲ್ಲಿ ಕಿಂಗ್ಸ್​ ನಾಯಕ ಸ್ಯಾಮ್ ಕರನ್​ ಅಸಾಧಾರಣ ಆಲ್‌ರೌಂಡ್ ಪ್ರದರ್ಶನದಿಂದ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಆರ್​ಆರ್​ ವಿರುದ್ಧ ಪಂಜಾಬ್​ ಐದು ವಿಕೆಟ್‌ಗಳ ಜಯ ಸಾಧಿಸಿತು. ಸದ್ಯ ಮ್ಯಾಚ್​ ಸೋತರು ಪ್ಲೇಆಫ್ ರೇಸ್​ನಲ್ಲಿ ಇನ್ನೂ ಉಳಿದಿರುವ ರಾಜಸ್ಥಾನ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಭದ್ರವಾಗಿ ಉಳಿಸಿಕೊಂಡಿದೆ.

ಇನ್ನು ಈ ಲೀಗ್​ನಲ್ಲಿ ಒಂದು ಪಂದ್ಯ ಬಾಕಿ ಉಳಿಸಿಕೊಂಡಿರುವ ರಾಜಸ್ಥಾನ ರಾಯಲ್ಸ್​ ಟೇಬಲ್‌-ಟಾಪ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ನಂತರದ ಸ್ಥಾನದಲ್ಲಿದೆ. ಸದ್ಯ ಈ ಎರಡು ತಂಡಗಳು ಮಾತ್ರ ಪ್ಲೇ-ಆಫ್ ಸ್ಥಾನವನ್ನು ಕಾಯ್ದಿರಿಸಿದ ಟೀಮ್​ಗಳಾಗಿದ್ದು, ಉಳಿದ ಮೂರು ಮತ್ತು ನಾಲ್ಕು ಸ್ಥಾನಕ್ಕಾಗಿ ಮಾತ್ರ ಭಾರೀ ಹಣಾಹಣಿ ನಡೆಯುತ್ತಿದೆ. ಇದೀಗ ಪ್ಲೇಆಫ್ ರೇಸ್‌ನಲ್ಲಿ ಸನ್​ರೈಸರ್ಸ್​ ಹೈದರಾಬಾದ್​, ಆರ್​ಸಿಬಿ, ಸಿಎಸ್​ಕೆ ಮತ್ತು ಲಕ್ನೋ ಸೂಪರ್​ ಜೈಂಟ್ಸ್​ ತಂಡಗಳು ಸಖತ್ ಪೈಪೋಟಿ ಕೊಡಲು ಸಜ್ಜಾಗಿವೆ.


ಇದೀಗ ಕೇವಲ ಐದು ಪಂದ್ಯಗಳು ಮಾತ್ರ ಬಾಕಿ ಉಳಿದಿದ್ದು, ಅದಾದ ನಂತರ ಫ್ಲೇಆಫ್ ಮ್ಯಾಚ್​ಗಳು ಆರಂಭವಾಗಲಿವೆ. ಸದ್ಯ ಐಪಿಎಲ್​ 2024ರ ಅಂಕಪಟ್ಟಿಯಲ್ಲಿ ಕೆಕೆಆರ್​ ಮತ್ತು ಆರ್​ಆರ್​ ಮೊದಲೆರೆಡು ಸ್ಥಾನಗಳನ್ನು ಭದ್ರವಾಗಿ ಉಳಿಸಿಕೊಳ್ಳುವ ಮೂಲಕ ಅಧಿಕೃತವಾಗಿ ಪ್ಲೇಆಫ್​ಗೆ ಎಂಟ್ರಿ ಕೊಟ್ಟಿದೆ. ಆದರೆ, ಮೂರನೇ ಮತ್ತು ನಾಲ್ಕನೇ ಸ್ಥಾನಕ್ಕೆ ಉಳಿದ ನಾಲ್ಕು ತಂಡಗಳು ಸೆಣಸಾಡಬೇಕಿದೆ. ಒಟ್ಟಾರೆಯಾಗಿ ಯಾವ ತಂಡಕ್ಕೆ ಹೆಚ್ಚಿನ ಅವಕಾಶ ಇನ್ನೂ ಇದೆ ಎಂಬುದನ್ನು ತಿಳಿಯಲು ಈ ಪ್ಲೇಆಫ್ ಲೆಕ್ಕಾಚಾರವನ್ನು ಒಮ್ಮೆ ಕಣ್ಣಾಡಿಸಿ.

ಪ್ರಸ್ತುತ ರಾಜಸ್ಥಾನ ಪಡೆಗೆ ಒಂದೇ ಒಂದು ಬಾಕಿ ಉಳಿದಿದ್ದು, ಮುಂದಿನ ಪಂದ್ಯ ಕೆಕೆಆರ್​ ಜತೆಗಿದೆ. ಆ ಪಂದ್ಯದಲ್ಲಿ ಸೋತರು, ಗೆದ್ದರು ಅಂತಹ ವ್ಯತ್ಯಾಸ ಆರ್​ಆರ್​ಗೆ​ ಎದುರಾಗುವುದಿಲ್ಲ. ಆದರೆ, ಎಸ್​ಆರ್​ಎಚ್ ತಂಡವೇನಾದರೂ ಎರಡು ಪಂದ್ಯಗಳಲ್ಲಿ ಸತತ ಗೆಲುವು ಜತೆಗೆ ಹೆಚ್ಚಿನ ರನ್​ರೇಟ್​ ದಾಖಲಿಸಿದರೆ, 18 ಪಾಯಿಂಟ್​ಗಳಿಂದ ರಾಯಲ್ಸ್​ ಬೆನ್ನಹಿಂದೆ ಬಂದು ನಿಲ್ಲುತ್ತದೆ. ಆದರೆ, ಇದು ಸಹ ದೊಡ್ಡ ಬದಲಾವಣೆಯನ್ನು ತಂದೊಡ್ಡುವುದಿಲ್ಲ. ಬದಲಿಗೆ ಮೂರನೇ ಸ್ಥಾನದಲ್ಲಿ ಉಳಿದುಕೊಳ್ಳುವಂತೆ ಮಾಡುತ್ತದೆ.

ಇನ್ನು ಮೂರನೇ ಸ್ಥಾನದಲ್ಲಿರುವ ಸಿಎಸ್​ಕೆಗೆ ದೊಡ್ಡ ಸವಾಲು ಎದುರಾಗಿರುವುದು ನಿಜವೇ. ಯಾಕಂದ್ರೆ, ಮುಂದಿನ ಪಂದ್ಯ ಆರ್​ಸಿಬಿ ವಿರುದ್ಧವಾಗಿದ್ದು, ಈ ಮ್ಯಾಚ್​ನಲ್ಲಿ ಹೆಚ್ಚಿನ ರನ್​ರೇಟ್​ನಿಂದ ಗೆಲುವು ದಾಖಲಿಸಬೇಕಿದೆ. ಕೇವಲ ಸಾಧಾರಣ ರನ್​ರೇಟ್​ನಿಂದ ಪಂದ್ಯ ಗೆದ್ರೆ, ಚೆನ್ನೈ ಪಡೆ ಮೂರನೇ ಸ್ಥಾನದಲ್ಲಿ ಉಳಿದುಕೊಳ್ಳುತ್ತದೆ. ಆದರೆ, ಪ್ಲೇಆಫ್ ಕನಸು ಈಡೇರಬೇಕೆಂದರೆ ಆರ್​ಸಿಬಿ, ಎಸ್​ಆರ್​ಎಚ್​ ಮತ್ತು ಎಲ್​ಎಸ್​ಜಿ ತಂಡಗಳ ಗೆಲುವು ಮತ್ತು ಸೋಲಿನ ಮೇಲೆ ನಿಂತಿದೆ. ಅದಕ್ಕಾಗಿ ಹೆಚ್ಚಿನ ರನ್​ರೇಟ್​ನಿಂದ ಗೆಲುವು ದಾಖಲಿಸುವುದು ಅನಿವಾರ್ಯ.


ಸದ್ಯ ಮೂರು ಮತ್ತು ನಾಲ್ಕನೇ ಸ್ಥಾನಕ್ಕೆ ದೊಡ್ಡ ಟೈ ಎದುರಾಗಲಿದ್ದು, ಈಗ ನಾಲ್ಕನೇ ಸ್ಥಾನದಲ್ಲಿರುವ ಎಸ್​ಆರ್​ಎಚ್ ತಂಡಕ್ಕೆ ಗೆಲುವು ಬಹಳ ಮುಖ್ಯವಾಗಿದೆ. ಆದರೆ, ಅವರು ಸಹ ಪ್ಲೇಆಫ್​ಗೆ ಎಂಟ್ರಿ ಕೊಡುವುದು ಬಹುತೇಕ ಡೌಟ್​ ಇದೆ. ಮುಂದಿನ ಎರಡು ಪಂದ್ಯಗಳನ್ನು ಗೆದ್ದರೆ ಮಾತ್ರ ಸನ್​ರೈಸರ್ಸ್​ ಮೂರು ಅಥವಾ ನಾಲ್ಕನೇ ಸ್ಥಾನ ಪಡೆಯುವ ಸಾಧ್ಯತೆಗಳು ಹೆಚ್ಚಿವೆ. ಆದರೆ, ಇದಕ್ಕೂ ಭಾರೀ ಪೈಪೋಟಿ ಇದೆ. ಹೆಚ್ಚುವರಿ ರನ್​ರೇಟ್​ನಿಂದ ಗೆಲ್ಲದೆ, ಎರಡು ಪಂದ್ಯಗಳನ್ನು ಗೆದ್ದರೆ ನಾಲ್ಕನೇ ಸ್ಥಾನ ಉಳಿಸಿಕೊಳ್ಳಬಹುದು. ಆದರೆ, ಇದಕ್ಕೆ ಆರ್​ಸಿಬಿ, ಎಲ್​ಎಸ್​ಜಿ ಮತ್ತು ಸಿಎಸ್​ಕೆ ಗೆಲುವಿನ ಅಂತರ ಕೂಡ ಡೊಡ್ಡ ಪರಿಣಾಮ ಬೀರಬಹುದು,(ಏಜೆನ್ಸೀಸ್). 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net