RCB ಗೆ ಜಿತೇಶ್​​ ಶರ್ಮ ನಾಯಕ​: ರಜತ್​ ಇಂಪ್ಯಾಕ್ಟ್​ ಪ್ಲೇಯರ್ ಕಾರಣ ಏನು? | Jitesh Sharma

dk - 2025-05-23T201551.108
Published on

Jitesh Sharma : ಲಕ್ನೋದಲ್ಲಿ ಇಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆಯುತ್ತಿರುವ ಐಪಿಎಲ್ 2025ರ ಪಂದ್ಯದಲ್ಲಿ ವಿಕೆಟ್ ಕೀಪರ್-ಬ್ಯಾಟರ್ ಜಿತೇಶ್ ಶರ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ.

ಅಲ್ಲದೆ, ಆರ್‌ಸಿಬಿ ನಾಯಕನಾಗಿ ತಮ್ಮ ಮೊದಲ ಪಂದ್ಯದಲ್ಲಿ ಜಿತೇಶ್ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು.

ಜಿತೇಶ್​​ ಶರ್ಮ ನಾಯಕತ್ವಕ್ಕೆ ಕಾರಣ ಏನು?

ಮೇ ತಿಂಗಳ ಆರಂಭದಲ್ಲಿ CSK ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ನಾಯಕ ರಜತ್​ ಪಟೀದಾರ್​ಗೆ ಬೆರಳು ಗಾಯ ಮಾಡಿಕೊಂಡಿದ್ದರು. ಹೀಗಾಗಿ ಅವರು ಸಂಪೂರ್ಣ ಫಿಟ್​ ಆಗದ ಕಾರಣ ಇಂದಿನ SRH ವಿರುದ್ಧ ಪಂದ್ಯದ ನಾಯಕತ್ವವನ್ನು ಜಿತೇಶ್​ಗೆ ಒಲಿದೆ ಬಂದಿದೆ. ಇದೀಗ ಜಿತೇಶ್​​ ಆರ್​ಸಿಬಿಯ 9 ಕ್ಯಾಪ್ಟನ್​ ಆಗಿದ್ದಾರೆ.

ನಾಯಕತ್ವದ ಬಗ್ಗೆ ಜಿತೇಶ್​ ಹೇಳಿದ್ದೇನು..?

ನಾನು ಮೊದಲ ಬಾರಿಗೆ ಆರ್‌ಸಿಬಿ ತಂಡದ ನಾಯಕತ್ವ ವಹಿಸಿಕೊಂಡಿದ್ದೇನೆ. ನಾವು ಮೊದಲು ಬೌಲಿಂಗ್ ಮಾಡಲು ಯೋಚಿಸುತ್ತಿದ್ದೇವೆ; ಲೀಗ್​ನಲ್ಲಿ ಅಗ್ರಸ್ಥಾನದಲ್ಲಿ ಇರಲು ಬಯಸುತ್ತೇವೆ. ಪ್ರಾಂಚೈಸಿ, ಆಟಗಾರರ ಬಗ್ಗೆ ಕಾಳಜಿ ವಹಿಸಿದೆ. ನಮಗೆ ಉತ್ತಮ ವಾತಾವರಣ ಮತ್ತು ಸಂಸ್ಕೃತಿ ಇದೆ. ನಾವು ಪ್ರತಿ ಪಂದ್ಯವನ್ನು ಗೆದ್ದು ಕಪ್ ಗೆಲ್ಲಲು ಬಯಸುತ್ತೇವೆ ಎಂದಿದ್ದಾರೆ.

ಪಟೀದಾರ್​​ ಇಂಪ್ಯಾಕ್ಟ್​ ಪ್ಲೇಯರ್

ಖಾಯಂ ನಾಯಕ ಪಟೀದಾರ್​​ ಬೆರಳಿನ ಗಾಯದ ಹಿನ್ನೆಲೆ ಸಂಪೂರ್ಣ ಫಿಟ್​ ಆಗದ ಕಾರಣ ಅವರನ್ನು ಇಂದಿನ ಪಂದ್ಯದಲ್ಲಿ 'ಇಂಪ್ಯಾಕ್ಟ್​ ಪ್ಲೇಯರ್' ಅಗಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net