

ಇಂಡಿಯನ್ ಪ್ರೀಮಿಯರ್ ಲೀಗ್ನ(IPL 2025) ಈ ಬಾರಿಯ 18ನೇ ಆವೃತ್ತಿಯಲ್ಲಿ ಆರಂಭದಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿದ್ದ ಮುಂಬೈ ತಂಡ, ಕೊನೆಯಲ್ಲಿ ಸತತ ಗೆಲುವುಗಳ ಮೂಲಕ ಪ್ಲೇಆಫ್ಗೆ ಎಂಟ್ರಿ ಕೊಟ್ಟಿದೆ.
ಮೇ.21ರಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ನಡೆದ ನಿರ್ಣಾಯಕ ಪಂದ್ಯದಲ್ಲಿ ಮುಂಬೈ 59 ರನ್ಗಳ ಭರ್ಜರಿ ಗೆಲುವಿನ ಬಗ್ಗೆ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಸಂತಸ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷ ಪಾಂಡ್ಯ ನೇತೃತ್ವದಲ್ಲಿ ಇದೇ ತಂಡ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ಇತ್ತು.
ಮೇ.12ರಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡದ ಪರ ಸೂರ್ಯಕುಮಾರ್ ಯಾದವ್ ಅವರ ಅದ್ಭುತ ಬ್ಯಾಟಿಂಗ್‌ನಿಂದ 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 180 ರನ್ ಗಳಿಸಿತು. ಸೂರ್ಯ 43 ಎಸೆತಗಳಲ್ಲಿ 7 ಬೌಂಡರಿ ಮತ್ತು 4 ಸಿಕ್ಸರ್‌ಗಳ ಸಹಾಯದಿಂದ ಅಜೇಯ 73 ರನ್ ಗಳಿಸಿ ಉತ್ತಮ ಮೊತ್ತವನ್ನು ಗಳಿಸಿತು.
ಸಾಧಾರಣ ಮೊತ್ತ ಬೆನ್ನಟ್ಟಿದ ಡೆಲ್ಲಿ ತಂಡ 18.2 ಓವರ್ನಲ್ಲಿ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡ ಡೆಲ್ಲಿ 121 ರನ್ ಗಳಿಸಿತು. ಈ ಮೂಲಕ ಪ್ಲೇಆಫ್ ರೇಸ್ನಿಂದ ಹೊರಬಿದ್ದಿದೆ.
ಪಂದ್ಯದ ಬಳಿಕ ತಂಡದ ಗೆಲುವಿನ ಬಗ್ಗೆ ಮಾತನಾಡಿದ ಪಾಂಡ್ಯ, '' ಯಾವುದೇ ಪರಿಸ್ಥಿತಿಯಲ್ಲಿ ನನಗೆ ಅಗತ್ಯವಿದ್ದಾಗಲೆಲ್ಲಾ, ಸ್ಯಾಂಟ್ನರ್ ಮತ್ತು ಬುಮ್ರಾಗೆ ಚೆಂಡನ್ನು ನೀಡಲು ನಾನು ಹಿಂದೆ ಸರಿಯುವುದಿಲ್ಲ. ಏಕೆಂದರೆ ಅವರಿಬ್ಬರೂ ಪಂದ್ಯದ ಮೇಲೆ ಹಿಡಿತ ಸಾಧಸುವಲ್ಲಿ ನಿಪುಣರು'' ಇದಲ್ಲದೆ, ಅವರು ಏನೇ ಮಾಡಿದರೂ, ಅದಕ್ಕೆ ಅಂತ್ಯ ಕಾಣುವವರೆಗೂ ಅವರು ಎಂದಿಗೂ ಬಿಟ್ಟುಕೊಡುವುದಿಲ್ಲ. ಇಬ್ಬರೂ ನನ್ನ ಕೆಲಸವನ್ನು ಸುಲಭಗೊಳಿಸಿದರು ಎಂದು ನಾಯಕ ಹರ್ಷ ವ್ಯಕ್ತ ಪಡಿಸಿದ್ದಾರೆ.
ಈ ಪಿಚ್‌ನಲ್ಲಿ ನಾವು 160ರನ್‌ಗಳನ್ನು ಗಳಿಸಬಹುದು ಎಂದು ನಾವು ಭಾವಿಸಿದ್ದೆವು. ಅಂತಹ ಪರಿಸ್ಥಿತಿಯಲ್ಲಿ, ಸೂರ್ಯ ಮತ್ತು ನಮನ್ ಒಟ್ಟಾಗಿ ಸ್ಕೋರ್‌ಬೋರ್ಡ್‌ನಲ್ಲಿ ರನ್‌ಗಳನ್ನು ಸೇರಿಸಿದರು. "ವಿಶೇಷವಾಗಿ.. ನಮನ್.. ವಿಕೆಟ್ ಕಠಿಣವಾಗುತ್ತಿದ್ದಾಗಲೂ ಅವರ ಅದ್ಭುತ ಬ್ಯಾಟಿಂಗ್‌ನಿಂದ ಪ್ರಭಾವಿತರಾದರು" ಎಂದು ಅವರು ತಮ್ಮ ತಂಡದ ಆಟಗಾರರನ್ನು ಶ್ಲಾಘಿಸಿದರು.(ಏಜೆನ್ಸೀಸ್)