ಟಿ-20ಯಲ್ಲಿ ಅಪರೂಪದ ದಾಖಲೆ ಬರೆದ ಎಂ.ಎಸ್​.ಧೋನಿ | Rare Record

dk - 2025-05-20T223400.103
Published on

Rare Record: ಚೈನ್ನೈ ಸೂಪರ್​ ಕಿಂಗ್ಸ್(CSK) ನಾಯಕ ಮಹೇಂದ್ರ ಸಿಂಗ್​ ಧೋನಿ ಟಿ-20 ಪಂದ್ಯಗಳಲ್ಲಿ ಅಪರೂಪದ ದಾಖಲೆ ಮಾಡಿದ್ದಾರೆ.

ಹೌದು, ಟಿ-20 ಕ್ರಿಕೆಟ್​ನಲ್ಲಿ 350 ಸಿಕ್ಸರ್​ ಬಾರಿದ ಭಾರತದ ನಾಲ್ಕನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಐಪಿಎಲ್-2025ರ ಭಾಗವಾಗಿ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಧೋನಿ ಈ ಸಾಧನೆ ಮಾಡಿದರು. ​

ಧೋನಿ ಇಲ್ಲಿಯವರೆಗೆ 403 ಟಿ20 ಪಂದ್ಯಗಳನ್ನು ಆಡಿದ್ದು, ನಿಖರವಾಗಿ 350 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಒಟ್ಟಾರೆಯಾಗಿ ಧೋನಿ ಈ ಸಾಧನೆ ಮಾಡಿದ 34 ನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಈ ಪಟ್ಟಿಯಲ್ಲಿ ಸ್ಥಾನ ಪಡೆದ ನಾಲ್ಕನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಧೋನಿ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ಈ ದಾಖಲೆಯನ್ನು ಮಾಡಿದ್ದರು.

ಈ ಅಪರೂಪದ ಸಾಧನೆ ಮಾಡಿದವರ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್ ಕ್ರಿಕೆಟ್ ದಂತಕಥೆ ಕ್ರಿಸ್ ಗೇಲ್ (1,056) ಅಗ್ರಸ್ಥಾನದಲ್ಲಿದ್ದಾರೆ. ನಂತರದ ಮೂರು ಸ್ಥಾನಗಳಲ್ಲಿ ಪೊಲಾರ್ಡ್ (908), ರಸೆಲ್ (747), ಪೂರನ್ (634), ಅಲೆಕ್ಸ್ ಹೇಲ್ಸ್ (560), ಮನ್ರೋ (557), ರೋಹಿತ್ (542), ಜೋಸ್ ಬಟ್ಲರ್ (537) ಮತ್ತು ಮ್ಯಾಕ್ಸ್‌ವೆಲ್ (530) ಇದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net