IPL 2025ರ ಫೈನಲ್​ ಪಂದ್ಯಕ್ಕೆ ಮುಹೂರ್ತ ಇಟ್ಟ BCCI; ಎಲ್ಲಿ? ಯಾವಾಗ?: ಇಲ್ಲಿದೆ ಮಾಹಿತಿ

dk - 2025-05-20T180039.838
Published on

ಐಪಿಎಲ್ 2025ರ ಅಂತಿಮ ಪಂದ್ಯವು ಜೂ.3 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ(BCCI) ಮಂಗಳವಾರ ತಿಳಿಸಿದೆ ಎಂದು ಕ್ರಿಕ್​​ಬಜ್​ ವರದಿ ಮಾಡಿದೆ.

ಐಪಿಎಲ್ 2025ರ ಮೊದಲ ಅರ್ಹತಾ ಪಂದ್ಯವೂ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಜೂ.1 ರಂದು ನಡೆಯಲಿದೆ. ಮಂಗಳವಾರ ನಡೆದ ಸುದೀರ್ಘ ಸಭೆಯ ನಂತರ ಬಿಸಿಸಿಐ ಈ ನಿರ್ಧಾರ ತೆಗೆದುಕೊಂಡಿದೆ ಎಂದು ವರದಿ ಉಲ್ಲೇಖಿಸಿದೆ.

ನರೇಂದ್ರ ಮೋದಿ ಕ್ರೀಡಾಂಗಣ ಆಯ್ಕೆ ಏಕೆ?

ದೇಶದಲ್ಲಿ ಮಳೆಗಾಲ ಕ್ರಮೇಣ ಪ್ರಾರಂಭವಾಗುತ್ತಿರುವುದರಿಂದ ಹವಾಮಾನವನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ಈ ಸ್ಥಳಗಳನ್ನು ಆಯ್ಕೆ ಮಾಡಿದೆ ಎಂದು ಹೇಳಲಾಗುತ್ತಿದೆ. ಈ ಕಾರಣಕ್ಕಾಗಿ ಅಹಮದಾಬಾದ್ ಅನ್ನು ಫೈನಲ್‌ಗೆ ಆಯ್ಕೆ ಮಾಡಲಾಗಿದೆ.

ಐಪಿಎಲ್ 2025ರ ಇಲ್ಲಿಯವರೆಗೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB), ಪಂಜಾಬ್ ಕಿಂಗ್ಸ್ (PBKS) ಮತ್ತು ಗುಜರಾತ್ ಟೈಟಾನ್ಸ್ (GT) ಪ್ಲೇಆಫ್‌ಗೆ ಅರ್ಹತೆ ಪಡೆದಿವೆ. ಡೆಲ್ಲಿ ಕ್ಯಾಪಿಟಲ್ಸ್ ಅಥವಾ ಮುಂಬೈ ಇಂಡಿಯನ್ಸ್ ನಾಲ್ಕನೇ ತಂಡವಾಗಿರುವುದು ದೃಢಪಟ್ಟಿದೆ. ಚೆನ್ನೈ ಸೂಪರ್ ಕಿಂಗ್ಸ್ (CSK), ರಾಜಸ್ಥಾನ ರಾಯಲ್ಸ್ (RR), ಸನ್‌ರೈಸರ್ಸ್ ಹೈದರಾಬಾದ್ (SRH), ಲಕ್ನೋ ಸೂಪರ್ ಜೈಂಟ್ಸ್ (LSG) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (KKR) ಪ್ಲೇಆಫ್ ರೇಸ್‌ನಿಂದ ಹೊರಗುಳಿದಿವೆ.(ಏಜೆನ್ಸೀಸ್)​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net