ಜನವರಿ 5 ರಂದು, ಲಾಸ್ ವೇಗಾಸ್‌ನಲ್ಲಿ ಬಿಎಂಡಬ್ಲ್ಯೂ ಸಂಸ್ಥೆ, ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿರುವ ಹೊಸ ಕಾರುಗಳನ್ನು ಪ್ರದರ್ಶಿಸಿದೆ. ಅದರಲ್ಲಿ, ವೀಕ್ಷಕರ ಹುಬ್ಬೇರಿಸಿದ ಕಾರು ಅಂದರೆ ಬಣ್ಣ ಬದಲಾಯಿಸುವ ಕಾರು. ಇದಿಷ್ಟೇ ಅಲ್ಲದೇ, ಈ ಕಾರು ಹಿಂಬದಿಯ ಪ್ರಯಾಣಿಕರಿಗಾಗಿ ಹೆಡ್‌ಲೈನರ್‌ನಿಂದ ವಿಸ್ತರಿಸುವ 32-ಇಂಚಿನ ಸಿನಿಮಾ ಪರದೆಯನ್ನು ಹೊಂದಿದೆ. ಹೌದು, BMW iX ಒಂದು ಉನ್ನತ-ಮಟ್ಟದ ಎಲೆಕ್ಟ್ರಿಕ್ ಸ್ಪೋರ್ಟ್ಸ್ ವಾಹನವಾಗಿದೆ. BMW iX ನ ಮತ್ತೊಂದು ಆವೃತ್ತಿಯೇ BMW iX ಫ್ಲೋ. ಈ ಕಾರಿನಲ್ಲಿ ಕೇವಲ ಒಂದೇ ಒಂದು ಬಟನ್ ಮೂಲಕ ಕಾರಿನ ಹೊರಬಾಗದ ಬಣ್ಣವು ಬದಲಾಗತ್ತೆ. ಹೀಗೆ, ಬಣ್ಣ ಬದಲಾಯಿಸುವ ವಿಶ್ವದ ಮೊದಲ ಕಾರು ಎಂದು BMW iX ಫ್ಲೋ ಅನಿಸಿಕೊಂಡಿದೆ.