ಬೆಂಗಳೂರು: ಅಪ್ಪು ಅವರ ಹೆಸರು ತೆಗೆದರೆ ಸದ್ಯ ಎಲ್ಲರೂ ಭಾವುಕರಾಗುತ್ತಾರೆ. ಪುನೀತ್ ಅಗಲಿದರು ನಮ್ಮೊಂದಿಗೆ ಈಗಲೂ ಬದುಕಿದ್ದಾರೆ ಎಂಬ ಭಾವನೆಯನ್ನು ಹೊಂದಿದ್ದಾರೆ. ಇನ್ನು, ಅಪ್ಪು ಕೊನೆಯದಾಗಿ ನಟಿಸಿದ ಸಿನಿಮಾಗಳು ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ. ಆದರೆ, ಇದೀಗ ಒಂದು ಖುಷಿಯ ಸುದ್ದಿ ಕೇಳಿಬಂದಿದೆ. ಅಪ್ಪು ಅವರು ಬಹಳಷ್ಟು ಹೊಸ ಮತ್ತು ಸಣ್ಣ ಸಿನಿಮಾಗಳಿಗೆ ಪ್ರೋತ್ಸಾಹಿಸುತ್ತಿದ್ದರು. ಇಂತಹದ್ದೇ ಒಂದು ಸಿನಿಮಾಗೆ ಪುನೀತ್ ರಾಜ್ಕುಮಾರ್ ಅವರು ಹಾಡಿದ್ದರು. ಅದೇ, ಅಪ್ಪು ಅವರು ಹಾಡಿದ ಕೊನೆಯ ಹಾಡು ಎಂಬ ಮಾತುಗಳು ಕೇಳಿಬರುತ್ತಿವೆ. ಹೌದು, ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ಚಿತ್ರ 'ಹರೀಶ ವಯಸ್ಸು 36'. ಈ ಚಿತ್ರದ ಟೈಟಲ್ ಹಾಡನ್ನು ಅಪ್ಪು ಅವರು ಹಾಡಿದ್ದಾರೆ.