RRR ಚಿತ್ರದ ಬಿಡುಗಡೆಗೆ ದೇಶದಾದ್ಯಂತ ಸಿನಿ ಪ್ರೇಕ್ಷಕರು ಕಾದುಕುಳಿತಿದ್ದಾರೆ. ಆದರೆ, ಈ ಚಿತ್ರದ ರಿಲೀಸ್ಗೆ ಒಂದಲ್ಲ ಒಂದು ವಿಘ್ನಗಳು ಎದುರಾಗುತ್ತಲೇ ಇವೆ. ಜನವರಿ 7 ರಂದು ಬಿಡುಗಡೆಯಾಗ ಬೇಕಿದ್ದ ಚಿತ್ರ ಮತ್ತೆ ರಿಲೀಸ್ ಅನ್ನು ಮುಂದೂಡಿದೆ. ಇದಕ್ಕೆ ಲಾಕ್ಡೌನ್, ಟಿಕೆಟ್ ಬೆಲೆ ಕಡಿತ ಅಂತ ಹೀಗೆ ಹಲವಾರು ಕಾರಣಗಳನ್ನು ಕೊಟ್ಟಿದೆ. ಇದೀಗ, ಈ ಸಿನಿಮಾ ಮೇಲೆ ಹೊಸದೊಂದು ದೂರು ದಾಖಲಾಗಿದೆ. ಹೌದು, ತೆಲಂಗಾಣ ಹೈಕೋರ್ಟ್ನಲ್ಲಿ RRR ಸಿನಿಮಾ ವಿರುದ್ಧ ಮಹಿಳೆಯೊಬ್ಬರು ದೂರು ದಾಖಲಿಸಿದ್ದಾರೆ.