Rohit Sharma ಬದಲು ಈತನನ್ನು ನಾಯಕನನ್ನಾಗಿ ನೇಮಿಸಿ... ನ್ಯೂಜಿಲೆಂಡ್​ ವಿರುದ್ಧ ಸರಣಿ ಸೋಲಿನ ಬೆನ್ನಲ್ಲೇ ಮಾಜಿ ಆಟಗಾರನ ಸಲಹೆ ವೈರಲ್​

Rohit Sharma
Published on

ಮುಂಬೈ: ನ್ಯೂಜಿಲೆಂಡ್​ ವಿರುದ್ಧ ಸರಣಿ ಸೋಲುವ ಮೂಲಕ ಟೀಮ್​ ಇಂಡಿಯಾ (Team India) ಭಾರೀ ಮುಖಭಂಗವನ್ನು ಅನುಭವಿಸಿದ್ದು, ಮಾಜಿ ಆಟಗಾರರು ತಂಡದ ಪ್ರದರ್ಶವನ್ನು ಟೀಕಿಸುತ್ತಿದ್ದಾರೆ. ಭಾರತ ಮಾತ್ರವಲ್ಲದೇ ಪಾಕಿಸ್ತಾನ, ಇಂಗ್ಲೆಂಡ್​ ಸೇರಿದಂತೆ ಅನೇಕ ತಂಡಗಳ ಮಾಜಿ ಆಟಗಾರರು ಟೀಮ್​ ಇಂಡಿಯಾವನ್ನು ಹೀಯಾಳಿಸಿ ಮಾತನಾಡುತ್ತಿದ್ದು, ನಾಯಕ ರೋಹಿತ್​ ಶರ್ಮ (Rohit Sharma) ಹಾಗೂ ಕೋಚ್​ ಗೌತಮ್​ ಗಂಭೀರ್​ (Gautam Gambhir) ನಿರ್ಧಾರದ ವಿರುದ್ಧ ಆರೋಪಗಳು ಕೇಳಿ ಬರುತ್ತಿವೆ. ಸರಣಿ ಸೋಲಿನ ಬೆನ್ನಲ್ಲೇ ನಾಯಕತ್ವ ಬದಲಾವಣೆಯ ಕೂಗು ಕೇಳಿ ಬರುತ್ತಿದ್ದು, ಈ ಬಗ್ಗೆ ಮಾಜಿ ಕ್ರಿಕೆಟಿಗರೊಬ್ಬರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ನವೆಂಬರ್​ 22ರಿಂದ ಆರಂಭವಾಗಲಿರುವ ಬಾರ್ಡರ್​ ಗವಾಸ್ಕರ್​ ಟ್ರೋಫಿಯ ಮೊದಲೆರಡು ಪಂದ್ಯಗಳಿಗೆ ರೋಹಿತ್​ ಶರ್ಮ ಅಲಭ್ಯರಾಗಲಿದ್ದಾರೆ ಎಂದು ಹೇಳಲಾಗಿದ್ದು, ಬಿಸಿಸಿಐ ಬದಲಿ ನಾಯಕನ ಹುಡುಕಾಟದಲ್ಲಿದೆ. ಹೀಗಾಗಿ ಇಡೀ ಬಾರ್ಡರ್​ ಗವಾಸ್ಕರ್​ ಟ್ರೋಫಿಯಲ್ಲಿ ತಂಡವನ್ನು ಮುನ್ನಡೆಸಲು ಸೂಕ್ತ ನಾಯಕನ ಹುಡುಕಾಟದಲ್ಲಿರುವ ಭಾರತ ತಂಡಕ್ಕೆ ಮಾಜಿ ಕ್ರಿಕೆಟಿ ಸುನೀಲ್​ ಗವಾಸ್ಕರ್​ ಸಲಹೆಯನ್ನುನೀಡಿದ್ದು, ರೋಹಿತ್​ ಬದಲು ಈ ಕ್ರಿಕೆಟಿಗನನ್ನು ಆಯ್ಕೆ ಮಾಡುವಂತೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

Sunil Gavaskar

ನನ್ನ ಪ್ರಕಾರ ರೋಹಿತ್​ ಬಾರ್ಡರ್​ ಗವಾಸ್ಕರ್​ ಟ್ರೋಫಿಯ ಮೊದಲೆರಡು ಪಮದ್ಯದಲ್ಲಿ ಆಡುವುದು ಅನುಮಾನವಾಗಿದೆ. ಹೀಗಾಗಿ ರೋಹಿತ್​ ಉಳಿದೆರಡು ಪಂದ್ಯಗಳಿಗೆ ಆಟಗಾರನಾಗಿ ಹೋಗಿ ತಂಡವನ್ನು ಕೂಡಿಕೊಳ್ಳಬೇಕು. ನನ್ನ ಪ್ರಕಾರ ಈ ಪ್ರವಾಸದಲ್ಲಿ ಉಒನಾಯಕನನ್ನು ನಾಯಕನನ್ನಾಗಿ ನೇಮಿಸುವುದು ಸೂಕ್ತ.

ಒಂದು ವೇಳೆ ನ್ಯೂಜಿಲೆಂಡ್​ ವಿರುದ್ಧದ ಸರಣಿಯನ್ನು 3-0 ಅಂತರದಿಂದ ಗೆದ್ದಿದ್ರೆ ಮಾತು ಬೇರೆಯೇ ಇರುತ್ತಿತ್ತು. ಆದರೆ, ನಾವು ಇಲ್ಲಿ ಸರಣಿಯನ್ನು ಸೋತಿದ್ದು, ನೂತನ ನಾಯಕನ ಅವಶ್ಯಕತೆಯಿದೆ. ಆರಂಭಿಕ ಪಂದ್ಯಗಳಿಗೆ ನಾಯಕ ಅಲಭ್ಯರಾಗಿರುವ ಕಾರಣ ಬೇರೆ ಆಟಗಾರನನ್ನು ನೇಮಿಸುವುಸು ಸೂಕ್ತ ಎಂದು ಟೀಮ್​ ಇಂಡಿಯಾ ಮಾಜಿ ಆಟಗಾರ ಸುನೀಲ್​ ಗವಾಸ್ಕರ್ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net