ಪಟಾಕಿ ಹಚ್ಚಿದ ಡಬ್ಬದ ಮೇಲೆ ಕೂತರೆ Auto Rickshaw ಗಿಫ್ಡ್​ ಮಾಡುವುದಾಗಿ ಸ್ನೇಹಿತರ ಚಾಲೆಂಜ್​; ಯುವಕ ಸಾವು, 6 ಮಂದಿ Arrest​​

Bengaluru Youth
Published on

ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿ (Deepawali) ಮುಗಿದು ಎರಡು ದಿನಗಳಾಗುತ್ತ ಬಂದಿದ್ದು, ಪಟಾಕಿಯಿಂದ (Crackers) ಸಂಭವಿಸಿದ ಅವಘಡಗಳ ಸುದ್ದಿ ಚರ್ಚಾಸ್ಪದ ವಿಚಾರವಾಗಿದೆ. ಇದೀಗ ಪಟಾಕಿ (Crackers) ಜೊತೆ ಹುಡುಗಾಟವಾಡಲು ಹೋಗಿ ಯುವಕನೋರ್ವ ಪ್ರಾಣ ಕಳೆದುಕೊಂಡಿರುವ ಘಟನೆ ಬೆಂಗಳೂರಿನ ಕೋಣನಕುಂಟೆ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Video Viral)​ ಆಗಿದೆ.

ಅಕ್ಟೋಬರ್​ 31ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮೃತರನ್ನು ಶಬರೀಶ್​ (32) ಎಂದು ಗುರುತಿಸಲಾಗಿದ್ದು, ಘಟನೆ ಸಂಬಂಧ ಪೊಲೀಸರು ನವೀನ್, ದಿನಕರ್, ಸತ್ಯವೇಲು, ಕಾರ್ತಿಕ್, ಸತೀಶ್, ಸಂತೋಷ್ ಎಂಬಾತನನ್ನು ಬಂಧಿಸಿ (Arrest) ವಿಚಾರಣೆಗೆ ಒಳಪಡಿಸಿದ್ದಾರೆ.

ವೈರಲ್​ ಆಗಿರುವ ವಿಡಿಯೋ (Viral Video) ನೋಡುವುದಾದರೆ, ಆರು ಮಂದಿ ಯುವಕರು ಪಟಾಕಿ ಹಚ್ಚಿ, ಡಬ್ಬದಿಂದ ಮುಚ್ಚಿ, ಅದರ ಮೇಲೆ ಕೂರುತ್ತೀಯಾ ಅಂತ ಸವಾಲು ಹಾಕಿದ್ದಾರೆ. ಅದರಂತೆ ಡಬ್ಬದೊಳಗೆ ಪಟಾಕಿ ಇರಿಸಿ ಅದರ ಮೇಲೆ ಶಬರೀಶ್​ನನ್ನು ಕೂರಿಸಿದ್ದಾರೆ. ಪಟಾಕಿ ಹೊತ್ತಿಕೊಳ್ಳುತ್ತಿದ್ದಂತೆ ಯುವಕರೆಲ್ಲ ಓಡಿ ಹೋಗಿದ್ದು, ಪಟಾಕಿ ಸಿಡಿದು ಶಬರೀಷ್​ನ ಹಿಂಬದಿ ಮತ್ತು ಗುಪ್ತಾಂಗಗಳಿಗೆ ವ(Private part) ತೀವ್ರ ಗಾಯವಾಗಿದ್ದು, ಆತ ಮೇಲಕ್ಕೆ ಏಳಲಾರದೆ ನರಳಾಡುತ್ತಿರುವುದನ್ನು ವೈರಲ್​ ಆಗಿರುವ ವಿಡಿಯೋದಲ್ಲಿ (Viral Video) ನೋಡಬಹುದಾಗಿದೆ.

ಘಟನೆಯ ಕುರಿತು ಮಾಹಿತಿ ನೀಡಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು (Senior Police Officer), ಪಟಾಕಿ ಡಬ್ಬದ ಮೇಲೆ ಕುಳಿತರೆ ಆಟೋ (Auto Rickshaw) ಕೊಡಿಸುವುದಾಗಿ ಆಮಿಷ ಒಡ್ಡಿದ ಕಾರಣ ಯುವಕ ಶಬರೀಷ್​ ಈ ರೀತಿ ಮಾಡಿರುವುದಾಗಿ ತನಿಖೆ ವೇಳೆ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಆರು ಜನರನ್ನು ಬಂಧಿಸಲಾಗಿದ್ದು (Arrest), ಎಫ್ಐಆರ್ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net