

ನವದೆಹಲಿ: ತವರಿನ ಆತಿಥ್ಯದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸೋಲುವ ಮೂಲಕ ಟೀಮ್ ಇಂಡಿಯಾ (Team India) ಆಡಿಕೊಳ್ಳುವವರ ಬಾಯಿಗೆ ಆಹಾರವಾಗಿದ್ದು, ಇಷ್ಟು ದಿನ ಟೀಮ್ ಇಂಡಿಯಾವನ್ನು (Team India) ಹಾಡಿ ಹೊಗಳುತ್ತಿದ್ದವರು ಇದೀಗ ಪುಪುಂಖಾನುಪುಂಖವಾಗಿ ಟೀಕಿಸುತ್ತಿದ್ದಾರೆ (Criticise). ತವರು ನೆಲದಲ್ಲಿ ಸರಣಿ ಸೋಲಿಗೆ ಸಂಬಂಧಿಸಿದಂತೆ ಟೀಮ್ ಇಂಡಿಯಾದ ಮಾಜಿ ಆಟಗಾರರು ಮಾತನಾಡುತ್ತಿದ್ದು, ಭಾರತದ ಕಳಪೆ ಪ್ರದರ್ಶನವನ್ನು ಟೀಕಿಸಿ ಸೋಲಿಗೆ ಪ್ರಮುಖ ಕಾರಣಗಳನ್ನು ಉಲ್ಲೇಖಿಸುತ್ತಿದ್ಧಾರೆ. ಆದರೆ, ಇದೀಗ ಪಾಕಿಸ್ತಾನ ಕ್ರಿಕೆಟ್ ತಂಡದ (Pakistan Cricket Team) ಮಾಜಿ ಆಟಗಾರರು ಕೂಡ ಟೀಮ್ ಇಂಡಿಯವನ್ನು ಟೀಕಿಸಿ ಮಾತನಾಡುತ್ತಿದ್ದು, ಭಾರತೀಯ ಕ್ರೀಡಾಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.
92 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಭಾರತ (Team India) ಎಂದಿಗೂ ನ್ಯೂಜಿಲೆಂಡ್ ವಿರುದ್ಧ ಸರಣಿಯನ್ನು ಸೋತಿರಲಿಲ್ಲ. ಆದರೆ, ತವರಿನಲ್ಲಿ ನಡೆದ ಸರಣಿಯಲ್ಲಿ ವೈಟ್ವಾಷ್ ಅನುಭವಿಸಿರುವ ಭಾರತ ತಂಡವು (Team India) ಬ್ಯಾಟ್ಸ್ಮನ್ಗಳ ಕಳಪೆ ಪ್ರದರ್ಶನದಿಂದಾಗಿ ಸೋಲುವಂತಾಯಿತು ಎಂದು ದೂರಲಾಗಿದೆ. ಮುಂಬರುವ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ (Border Gavaskar Trophy) ತಂಡ ಕಮ್ಬ್ಯಾಕ್ ಮಾಡುತ್ತದೆ ಎಂಬ ಆಶಾಭಾವನೆಯಲ್ಲಿ ಅಭಿಮಾನಿಗಳಿದ್ದು, ವಾಸಿಂ ಅಕ್ರಮ್ (Wasim Akram) ನೀಡಿರುವ ಹೇಳಿಕೆಗೆ ಕಿಡಿಕಾರುತ್ತಿದ್ದಾರೆ.
ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯದ ಕಾಮೆಂಟರಿ ವೇಳೆ ಮಾತನಾಡಿರುವ ವಾಸಿಂ (Wasim Akrm), ಸ್ಪಿನ್ನಿಂಗ್ ಟ್ರ್ಯಾಕ್ನಲ್ಲಿ ಭಾರತವನ್ನು ಸೋಲಿಸಲು ಈಗ ಪಾಕಿಸ್ತಾನಕ್ಕೆ ಅವಕಾಶವಿದೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧದ ಸರಣಿ ಸೋಲು.
ಇದು ಆಂತರಿಕವಾಗಿ ಕೆಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ನಾನು ಭಾವಿಸುತ್ತೇನೆ. ಕ್ರಿಕೆಟ್ ವಿಚಾರದಲ್ಲಿ ಉತ್ಸಾಹಭರಿತವಾಗಿರುವ ರಾಷ್ಟ್ರದಿಂದ ಈ ರೀತಿಯ ಬದಲಾವಣೆಯನ್ನು ನೋಡಲು ಸಾಧ್ಯವಿಲ್ಲ. ಭಾರತ ತಂಡದಲ್ಲಿ ಕೆಲವು ಹಿರಿಯ ಆಟಗಾರರಿದ್ದಾರೆ. ಈ ಸರಣಿ ಸೋಲಿನ ಮೂಲಕ ಅವರು ತಮ್ಮನ್ನು ತಾವು ಊಹಿಸಲು ಶುರು ಮಾಡಿಕೊಳ್ಳುತ್ತಾರೆ. ಭಾರತೀಯ ತಂಡದಲ್ಲಿ ಕೆಲವು ಉನ್ನತ ದರ್ಜೆಯ ಕ್ರಿಕೆಟಿಗರು ಇದ್ದಾರೆ. ಅವರು ಆ ಸವಾಲಿನಿಂದ ಹೇಗೆ ಚೇತರಿಸಿಕೊಳ್ಳುತ್ತಾರೆ ಎಂಬುದನ್ನು ನೋಡಲು ಇದು ಆಕರ್ಷಕವಾಗಿರುತ್ತದೆ ಎಂದು ವಾಸಿಂ ಅಕ್ರಮ್ ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯದ ಕಾಮೆಂಟರಿ ವೇಳೆ ಹೇಳಿದ್ದಾರೆ.
ಇತ್ತ ಅಕ್ರಮ್ (Wasim Akram) ಹೇಳಿಕೆಗೆ ಕಿಡಿಕಾರಿರುವ ನೆಟ್ಟಿಗರು ಪಾಕಿಸ್ತಾನ ತಂಡವು ಬಾಂಗ್ಲಾದೇಶದಲ್ಲಿ ಸರಣಿ ಸೋತ ವಿಚಾರವನ್ನು ಉಲ್ಲೇಖಿಸಿ ಕಮೆಂಟ್ ಹಾಕುತ್ತಿದ್ದಾರೆ. 2 ಪಂದ್ಯಗಳ ಟೆಸ್ಟ್ ಸರಣಿಗಾಗಿ ಪಾಕಿಸ್ತಾನ ಪ್ರವಾಸ ಮಾಡಿದ್ದ ಬಾಂಗ್ಲಾದೇಶ ತಂಡ, ಆತಿಥೇಯ ಪಾಕಿಸ್ತಾನವನ್ನು 2-0 ಅಂತರದಿಂದ ಮಣಿಸಿತ್ತು. ಟೆಸ್ಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅವರದ್ದೇ ನೆಲದಲ್ಲಿ ಪಾಕ್ ತಂಡವನ್ನು ಮಣಿಸಿದ ದಾಖಲೆಯನ್ನು ಬಾಂಗ್ಲಾದೇಶ ತಂಡ ಮಾಡಿತ್ತು. ಇದೀಗ ಆ ಸೋಲನ್ನು ನೆನಪಿಸಿರುವ ನೆಟ್ಟಿಗರು ಅಕ್ರಮ್ (Wasim Akram) ಹೇಳಿಕೆಗೆ ತಿರುಗೇಟು ನೀಡುತ್ತಿದ್ದಾರೆ.