ಆಗಸ್ಟ್​ 13ರಂದು ಬೆಂಗಳೂರಿನಲ್ಲಿ ಜಿಯೋಮಾರ್ಟ್​ ಫ್ರೀಡಂ ರನ್​

freedom run web
Published on

ಬೆಂಗಳೂರು: ಭಾರತದ 77ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದ ಹಿನ್ನೆಲೆಯಲ್ಲಿ ಜಿಯೋಮಾರ್ಟ್​ ಪ್ರಸ್ತುತಿಯೊಂದಿಗೆ 'ಅಡಿಡಾಸ್​' ಸಹಯೋಗದ 'ಜಿಯೋಮಾರ್ಟ್​ ಫ್ರೀಡಂ ರನ್​' ಆಗಸ್ಟ್​ 13ರ ಭಾನುವಾರದಂದು ಬೆಂಗಳೂರಿನ ಹಲಸೂರು ಕೆರೆ ಸಮೀಪದ ಗಂಗಾಧರ ಚೆಟ್ಟಿ ರಸ್ತೆಯ ಸೌತ್​ ಯುನೈಟೆಡ್​ ಫುಟ್​ಬಾಲ್​ ಕ್ಲಬ್​ನಲ್ಲಿ ನಡೆಯಲಿದೆ. 'ನಿಮ್ಮ ಸ್ವಂತ ಓಟವನ್ನು ಓಡಿ, ನಿಮ್ಮ ಸ್ವಾತಂತ್ರ್ಯವನ್ನು ಆನಂದಿಸಿ' ಎಂಬ ಧ್ಯೇಯದೊಂದಿಗೆ ಓಟ ಆಯೋಜಿಸಲಾಗಿದೆ.

ಅಡಿಡಾಸ್​ ಸಹಯೋಗದ 'ಜಿಯೋಮಾರ್ಟ್​ ಫ್ರೀಡಂ ರನ್​' ಎರಡು ವಿಭಾಗಗಳಲ್ಲಿ ನಡೆಯಲಿದೆ. ಬೆಳಗ್ಗೆ 5 ಗಂಟೆಯಿಂದ 10ಕೆ ಓಟದ ಸ್ಪರ್ಧೆ ನಡೆದರೆ, ಬೆಳಗ್ಗೆ 6ರಿಂದ 5ಕೆ ಓಟ ಆರಂಭಗೊಳ್ಳಲಿದೆ. ಬೆಂಗಳೂರಿನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ವಾರದಲ್ಲಿ ನಡೆಯಲಿರುವ ಈ ಕೂಟದಲ್ಲಿ ನೂರಾರು ಫಿಟ್‌ನೆಸ್ ಉತ್ಸಾಹಿಗಳು ಮತ್ತು ಓಟಗಾರರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಯಾವುದೇ ಶುಲ್ಕವಿಲ್ಲದೆ 18 ವರ್ಷ ಮೇಲ್ಪಟ್ಟ ಎಲ್ಲರೂ ಓಟದಲ್ಲಿ ಪಾಲ್ಗೊಳ್ಳಬಹುದಾಗಿದೆ.

ಅಡಿಡಾಸ್​ ತನ್ನ ಅಡಿಡಾಸ್ ಅಪ್ಲಿಕೇಶನ್ ಪ್ಲಾಟ್‌ಫಾರ್ಮ್‌ನಲ್ಲಿ ಬಳಕೆದಾರರಿಗೆ ಈ ಕೂಟವನ್ನು ವಿಸ್ತರಿಸುತ್ತದೆ, ಅವರ ಡಿಜಿಟಲ್ ಫಿಟ್‌ನೆಸ್ ಸಮುದಾಯವನ್ನು ಈ ರನ್‌ಗೆ ಸೇರಲು ಮತ್ತು ಅವರ ಸಕ್ರಿಯ ವಾರಾಂತ್ಯಕ್ಕೆ ಸೇರಿಸಲು ಅನುವು ಮಾಡಿಕೊಡುತ್ತದೆ. ಓಟ ಪೂರ್ಣಗೊಂಡ ನಂತರ ಎಲ್ಲಾ ಓಟಗಾರರಿಗೆ ಪದಕಗಳು ಮತ್ತು ಇ-ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ. ವಿಜೇತರು ಪದಕಗಳು, ಪ್ರಮಾಣಪತ್ರಗಳು ಮತ್ತು ಅತ್ಯಾಕರ್ಷಕ ಅಡಿಡಾಸ್​ ಸರಕುಗಳನ್ನು ಪಡೆಯಲಿದ್ದಾರೆ.

ನೋಂದಣಿ ಲಿಂಕ್: https://bit.ly/440hYGP

ದಿನಾಂಕ: 13 ಆಗಸ್ಟ್, ಭಾನುವಾರ, 2023

ಸಮಯ: ಬೆಳಗ್ಗೆ 4:45ಕ್ಕೆ ಓಟಗಾರರು ಹಾಜರಿರಬೇಕು.

ಸ್ಥಳ: ಸೌತ್ ಯುನೈಟೆಡ್ ಫುಟ್​ಬಾಲ್ ಕ್ಲಬ್, ಗಂಗಾಧರ ಚೆಟ್ಟಿ ರಸ್ತೆ, ಹಲಸೂರು ಕೆರೆ, ಬೆಂಗಳೂರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net