ಚಾಂಪಿಯನ್ಸ್ ಟ್ರೋಫಿಯಲ್ಲಿ ಇತಿಹಾಸ; ಕೆವಿನ್​ ಪೀಟರ್ಸನ್​ ದಾಖಲೆ ಮುರಿದ ಬೆನ್​ ಡಕೆಟ್​ | Ben Duckett

ವಿಜಯವಾಣಿ - 2025-02-22T193256.160
Published on

Ben Duckett: ಈ ಬಾರಿ ಪಾಕಿಸ್ತಾನ ಆಯೋಜಿಸಿರುವ ಐಸಿಸಿ ಚಾಂಪಿಯನ್ಸ್ ಪ್ರಾರಂಭಗೊಂಡು ಇಂದಿಗೆ ನಾಲ್ಕು ದಿನಗಳೇ ಕಳೆದಿವೆ. ಫೆ.19ರಂದು ಆರಂಭವಾದ ಮೆಗಾ ಈವೆಂಟ್​ನ ಮೊದಲ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ ಸೋಲಿನಿಂದ ಆರಂಭವಾದ ಟೂರ್ನಿ ಇಂದಿನ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯವನ್ನು ತಲುಪಿದೆ. ಲಾಹೋರ್​ನ ಗಡಾಫಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಆಸೀಸ್​ ಪಡೆ, ಇಂಗ್ಲೆಂಡ್​ಗೆ ಬ್ಯಾಟ್ ಮಾಡುವಂತೆ ಆಹ್ವಾನಿಸಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್​ 50 ಓವರ್ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 351 ರನ್​ ಕಲೆಹಾಕಿದೆ.

ಈ ಬೃಹತ್​ ರನ್​ ದಾಖಲಿಸುವಲ್ಲಿ ಅರ್ಧ ಭಾಗದಷ್ಟು ಶ್ರಮ ಇಂಗ್ಲೆಂಡ್​ನ ಸ್ಟಾರ್​ ಹಾಗೂ ಯುವ ಬ್ಯಾಟರ್​ ಬೆನ್​ ಡಕೆಟ್​ರ ಸಲ್ಲುತ್ತದೆ ಎಂಬುದು ಇಲ್ಲಿ ಗಮನಾರ್ಹ. ಆಸ್ಟ್ರೇಲಿಯಾ ಬೌಲರ್​ಗಳ ಬೆವರಿಳಿಸಿದ ಬೆನ್​, ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಇತಿಹಾಸವನ್ನೇ ಸೃಷ್ಟಿಸಿದ್ದಾರೆ. 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಆಸ್ಟ್ರೇಲಿಯಾ ವಿರುದ್ಧ ಬೆನ್ ಡಕೆಟ್ ಐತಿಹಾಸಿಕ ದಾಖಲೆ ಬರೆದಿದ್ದಾರೆ. 143 ಎಸೆತಗಳನ್ನು ಎದುರಿಸಿದ ಬೆನ್​, ಬರೋಬ್ಬರಿ 165 ರನ್​ ಸಿಡಿಸಿದ್ದಾರೆ. ಇದರಲ್ಲಿ 17 ಬೌಂಡರಿ ಮತ್ತು ಮೂರು ಸಿಕ್ಸರ್​ ಸೇರಿವೆ. ತನ್ನ ಸ್ಫೋಟಕ ಬ್ಯಾಟಿಂಗ್ ಮೂಲಕ ತಂಡದ ಮೊತ್ತವನ್ನು 300ರ ಗಡಿ ದಾಟಿಸಲು ಬೆನ್​ ಕೊಡುಗೆ ಪ್ರಶಂಸನೀಯ.

ಈ ಹಿಂದೆ 2007ರ ಆಂಟಿಗುವಾದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ 104 ರನ್ ಗಳಿಸಿದ್ದ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಅವರ ದಾಖಲೆಯನ್ನು ಬೆನ್​ ಮುರಿದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 165 ಬಾರಿಸುವ ಮೂಲಕ 900 ರನ್‌ಗಳನ್ನು ದಾಟಿರುವ ಬೆನ್​, ಏಕದಿನ ಮಾದರಿಯಲ್ಲಿ 1000 ರನ್‌ಗಳ ಸಮೀಪದಲ್ಲಿದ್ದಾರೆ. ಕೇವಲ ಏಕದಿನ ಫಾರ್ಮೆಟ್​ನ ಪಂದ್ಯಗಳಲ್ಲಿ ಮೂರು ಶತಕಗಳು ಮತ್ತು ಆರು ಅರ್ಧಶತಕಗಳನ್ನು ಬಾರಿಸಿರುವುದು, ಅವರ ಬ್ಯಾಟಿಂಗ್ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net