ಗ್ರಾಮೀಣ ಭಾಗದ ಕಲಾವಿದರಿಗೆ ಬೇಕು ಪ್ರೋತ್ಸಾಹ : ಕಿರುತೆರೆ ನಿರ್ದೇಶಕ ಸುಭಾಶ್ ಅರ್ವ ಅನಿಸಿಕೆ

New Project (5)
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಗ್ರಾಮೀಣ ಭಾಗದಲ್ಲಿ ಅದೆಷ್ಟೋ ಪ್ರತಿಭೆಗಳು ಒಂದಲ್ಲ ಒಂದು ಕ್ಷೇತ್ರದಲ್ಲಿ ಇದ್ದು ಇವರನ್ನು ಸ್ಥಳೀಯವಾಗಿ ಗುರುತಿಸುವವರು ಕಡಿಮೆ. ಇಂತವರನ್ನು ಗುರುತಿಸಿ ಪ್ರೋತ್ಸಾಹಿಸಿದರೆ ಇನ್ನಷ್ಟು ಸಾಧನೆ ಮಾಡಲು ಪ್ರೋತ್ಸಾಹಿಸಿದಂತೆ. ಇಂದು ಸುವರ್ಣ ಸಾಂಸ್ಕೃತಿಕ ಪ್ರತಿಷ್ಟಾನ ಅದೆಷ್ಟೋ ಕಲಾವಿದರನ್ನು ಗುರುತಿಸುವ ಕಾರ್ಯಮಾಡುತ್ತಿದ್ದು, ಇದು ಕಲೆ ಮತ್ತು ಕಲಾವಿದರನ್ನು ಬೆಳೆಸುವ ಕಾರ್ಯ. ಇದರಿಂದ ಕಲೆ ಮತ್ತು ಕಲಾವಿದರು ಬೆಳೆಯಲು ಸಾಧ್ಯ ಎಂದು ಕಿರುತೆರೆ ನಿರ್ದೇಶಕ ಸುಭಾಶ್ ಅರ್ವ ಹೇಳಿದರು.

ಬುಧವಾರ ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದ ಪ್ರಯುಕ್ತ ಸುವರ್ಣ ಅರ್ಕೆಡ್ ಬಳಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ರಂಗಸಮ್ಮಾನ್ ಗೌರವ ಸ್ವೀಕರಿಸಿ ಮಾತನಾಡಿದರು.

ಅಯೋಧ್ಯೆಯ ಶ್ರೀರಾಮ ವಿಗ್ರಹ ನಿರ್ಮಾಣದಲ್ಲಿ ಸೇವೆ ಸಲ್ಲಿಸಿದ ಶಿಲ್ಪಿ ಜಯಚಂದ್ರ ಅಚಾರ್ಯ ನಾಳ ರಂಗಸಮ್ಮಾನ್ ಗೌರವ ಸ್ವೀಕರಿಸಿ ಮಾತನಾಡಿ, ಗ್ರಾಮೀಣ ಭಾಗದಿಂದ ಬೆಳೆದು ಅಯೋಧ್ಯೆಯಲ್ಲಿ ಸೇವೆ ಮಾಡುವ ಅವಕಾಶ ಸಿಕ್ಕಿರುವುದಕ್ಕೆ ದೇವರ, ಗುರುಗಳ ಅನುಗ್ರಹವೇ ಕಾರಣ ಎಂದರು.

ಯಕ್ಷಗಾನದಲ್ಲಿ ವಿಶೇಷ ಸಾಧನೆ ಮಾಡುತ್ತಿರುವ ಮನೋಜ್ ಕುಮಾರ್ ವೇಣೂರು ಅವರಿಗೆ ರಂಗಸಮ್ಮಾನ್ ನೀಡಿ ಗೌರವಿಸಲಾಯಿತು. ಬಳ್ಳಮಂಜ ಶ್ರೀ ಅನಂತೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ.ಹರ್ಷ ಸಂಪಿಗೆತ್ತಾಯ, ಯಕ್ಷಗಾನ ಕಲಾವಿದ ನಾರಾಯಣ ಗೌಡ ಕೊಳ್ತಿಗೆ, ಒಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ಉಪ್ಪಡ್ಕ, ಪತ್ರಕರ್ತರಾದ ದೇವಿಪ್ರಸಾದ್, ಮಂಜುನಾಥ ರೈ, ಗಣೇಶ್ ಶಿರ್ಲಾಲ್, ಸಂತೋಷ್ ಪಿ. ಕೋಟ್ಯಾನ್, ಮನೋಹರ್ ಬಳಂಜ, ಉದ್ಯಮಿ ಚಿದಾನಂದ ಇಡ್ಯ, ಮುಂಡೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಮಾನಂದ ಸಾಲಿಯಾನ್, ಶಿಕ್ಷಕ ಧರಣೇಂದ್ರ ಜೈನ್, ಪಟ್ಲ ಫೌಂಡೇಷನ್ ಬೆಳ್ತಂಗಡಿ ತಾಲೂಕು ಘಟಕ ಅಧ್ಯಕ್ಷ ಸುರೇಶ್ ಶೆಟ್ಟಿ ಲಾಯಿಲ, ಕಾರ್ಯದರ್ಶಿ ಕಿರಣ್ ಶೆಟ್ಟಿ, ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಸುವರ್ಣ, ಸುವರ್ಣ ಅರ್ಕೆಡ್‌ನ ಮಾಲೀಕ ವೈ. ನಾಣ್ಯಪ್ಪ ಪೂಜಾರಿ, ಬೇಬಿ ತಾಪಂ ಮಾಜಿ ಸದಸ್ಯ ಸುಧೀರ್ ಸುವರ್ಣ, ಆಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್ ಅಳಂದಂಗಡಿ ಮತ್ತಿತರರು ಉಪಸ್ಥಿತರಿದ್ದರು.

ಗಣೇಶ್ ಕುಮಾರ್ ಹೆಬ್ರಿ, ಕಾವ್ಯಶ್ರೀ ಅಜೇರು ಅವರಿಂದ ಗಾನವೈಭವ ಮತ್ತು ಚೈತ್ಯನ್ಯ ಕಲಾವಿದರು ಹೆಬ್ರಿ ಅವರಿಂದ ಅಷ್ಟಮಿ ನಾಟಕ ಪ್ರದರ್ಶನಗೊಂಡಿತು. ಪತ್ರಕರ್ತ ಲಕ್ಮಿ ಮಚ್ಚಿನ, ನಿತಿನ್ ಬಂಗೇರ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net