

ನವದೆಹಲಿ: ಭಾರತದಲ್ಲಿ ಕೋವಿಡ್-19 ಅಬ್ಬರಿಸುತ್ತಿರುವುದರಿಂದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 14ನೇ ಐಪಿಎಲ್ನ ಉಳಿದ 31 ಪಂದ್ಯಗಳಿಗೆ ಮುರ್ಹೂತ ಫಿಕ್ಸ್ ಮಾಡಿದೆ. ಭಾರತದಲ್ಲಿ ಟೂನಿರ್ಯನ್ನು ಮುಂದುವರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಯುಎಇಯಲ್ಲಿ ಸೆಪ್ಟೆಂಬರ್ ಹಾಗೂ ಅಕ್ಟೋಬರ್ನಲ್ಲಿ ಆಯೋಜಿಸಲು ತೀರ್ಮಾನಿಸಿದೆ. ಆದರೆ, ಲೀಗ್ ನಡೆಯುವ ಕುರಿತು ಬಿಸಿಸಿಐ ಅಧಿಕೃತವಾಗಿ ಘೋಷಿಸಿದ ಬೆನ್ನಲ್ಲೇ ಕೆಲ ವಿದೇಶಿ ಆಟಗಾರರು ಲೀಗ್ನಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಇದೇ ವೇಳೆ ದ್ವಿಪಕ್ಷೀಯ ಸರಣಿಗಳು ಆಯೋಜನೆಗೊಂಡಿರುವುದೇ ಇದಕ್ಕೆ ಕಾರಣ. ಲೀಗ್ನ ಉಳಿದ ಪಂದ್ಯಗಳಲ್ಲಿ ಆಡದ ವಿದೇಶಿ ಆಟಗಾರರಿಗೆ ಕೇವಲ ಅರ್ಧ ಸಂಭಾವನೆ ನೀಡಲು ಬಿಸಿಸಿಐ ಎಲ್ಲ ಫ್ರಾಂಚೈಸಿಗಳಿಗೆ ಸೂಚನೆ ನೀಡಿದೆ ಎನ್ನಲಾಗಿದೆ.
ಕೋಲ್ಕತ ನೈಟ್ ರೈಡರ್ಸ್ ತಂಡದ ವೇಗಿ ಪ್ಯಾಟ್ ಕಮ್ಮಿನ್ಸ್ 15.5 ಕೋಟಿ ರೂಪಾಯಿಗೆ ಒಪ್ಪಂದ ಮಾಡಿಕೊಂಡಿದ್ದು, ಲೀಗ್ನಿಂದ ಹೊರಗುಳಿದರೆ ಕೇವಲ 7.75 ಕೋಟಿ ರೂ.ಅಷ್ಟೆ ಪಡೆಯಲಿದ್ದಾರೆ. ಇದೇ ರೀತಿ ದೊಡ್ಡ ಮೊತ್ತಕ್ಕೆ ಒಪ್ಪಂದ ಮಾಡಿಕೊಂಡಿರುವ ಆಟಗಾರರು ಭಾರಿ ನಷ್ಟ ಅನುಭವಿಸಲಿದ್ದಾರೆ. ಆದರೆ, ಲೀಗ್ಗಿಂತ ದೇಶದ ತಂಡ ಮುಖ್ಯ. ಹೀಗಾಗಿ ಲೀಗ್ನಿಂದ ಹಿಂದೆ ಸರಿಯುವುದು ಅನಿವಾರ್ಯವಾಗಿದೆ.
ಈಗಾಗಲೇ ಇಂಗ್ಲೆಂಡ್ ಕ್ರಿಕೆಟ್ ಮಂಡಲಿ, ಐಪಿಎಲ್ನಲ್ಲಿ ಇಂಗ್ಲೆಂಡ್ ಆಟಗಾರರು ಆಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ಕೂಡ ಇದೇ ನಿಯಮ ಅನುಸರಿಸುವ ಸಾಧ್ಯತೆಗಳಿವೆ. ಬೆನ್ ಸ್ಟೋಕ್ಸ್, ಜೇಲ್ ರಿಚರ್ಡ್ಸನ್, ಕೈಲ್ ಜೇಮಿಸನ್, ಗ್ಲೆನ್ ಮ್ಯಾಕ್ಸ್ವೆಲ್, ಡೇವಿಡ್ ವಾರ್ನರ್, ಪ್ಯಾಟ್ ಕಮ್ಮಿನ್ಸ್, ರಶೀದ್ ಖಾನ್ ದುಬಾರಿ ಮೊತ್ತಕ್ಕೆ ಒಪ್ಪಂದ ಮಾಡಿಕೊಂಡಿರುವ ಆಟಗಾರರು.