

IPL: ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್(IPL 2025)ಗೆ ದಿನಗಣನೇ ಆರಂಭವಾಗಿದ್ದು, ಇದೇ ಮಾ.22ರಂದು ಕಲ್ಕತ್ತ ನೈಟ್ ರೈಡರ್ಸ್-ರಾಯಲ್ ಚಾಲೆಂಚರ್ಸ್ ಬೆಂಗಳೂರು ತಂಡಗಳು ಮೊದಲ ಉದ್ಘಾಟನೆ ಪಂದ್ಯದಲ್ಲಿ ಮುಖಾಮುಖಯಾಗಲಿವೆ. ಇದೀಗ ಪಂದ್ಯ ಆರಂಭಕ್ಕೂ ಮುನ್ನ ಭಾರತೀಯ ಕ್ರಿಕ್ರೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಮೂರು ನಿಯಮಗಳನ್ನು ಬದಲಾವಣೆ ಮಾಡಿದೆ.
10 ಪ್ರಾಂಚೈಸಿಗಳು ಟ್ರೋಫಿಗಾಗಿ ಪಂದ್ಯಗಳ ಗೆಲುವಿಗಾಗಿ ಹೋರಾಟಕ್ಕೆ ಸಿದ್ದವಾಗುತ್ತಿದೆ. ಹೊಸ ಆವೃತ್ತಿ(18ನೇ) ಆಂರಂಭಕ್ಕೂ ಮುನ್ನ ಈ ಎಲ್ಲಾ ತಂಡಗಳು ಬದಲಾವಣೆಯ ಮೂರು ನಿಯಮಗಳನ್ನು ತಮ್ಮ ಆಟಗಳಲ್ಲಿ ಆಳವಡಿಸಿಕೊಳ್ಳಬೇಕಾಗಿದೆ.
1. ಚೆಂಡಿಗೆ ಉಗುಳು ಹಚ್ಚುವ ನಿಷೇಧ ರದ್ದು
ಚೆಂಡಿನ ಮೇಲೆ ಲಾಲಾರಸದ ಬಳಕೆಯ ಮೇಲಿನ ನಿಷೇಧವನ್ನು ಬಿಸಿಸಿಐ ಗುರುವಾರ(ಮಾ.20) ತೆಗೆದುಹಾಕಿದೆ. ಕೋವಿಡ್-19 ಸಂಕ್ರಾಮಿಕ ರೋಗದ ವೇಳೆ ಮುನ್ನೇಚ್ಚರಿಕೆ ಕ್ರಮವಾಗಿ ಚೆಂಡನ್ನು ಹೊಳಪು ಮಾಡಲು ಲಾಲಾರಸವನ್ನು ಬಳಕೆ ಮಾಡುವ ಪದ್ಧತಿಯನ್ನು ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ(ICC) 2022ರಲ್ಲಿ ನಿಷೇಧ ಮಾಡಲಾಗಿತ್ತು. ಈ ನಿರ್ಧಾರವನ್ನು ವಿಶ್ವಸಂಸ್ಥೆ ಕೂಡ ಸ್ವಾಗತ ಮಾಡಿ, ಶಾಶ್ವತಗೊಳಿಸಲಾಗಿತ್ತು.
ಇನ್ನು ಸಂಕ್ರಾಮಿಕ ರೋಗದ ನಂತರ IPL ಈ ನಿರ್ಧಾರವನ್ನು ತನ್ನ ಆಟದಲ್ಲಿ ಪಾಲಿಸುತ್ತಿತ್ತು. ಆದರೆ, ಇದೀಗ ICC ಮಂಡಳಿ ವ್ಯಾಪ್ತಿಗೆ IPL ಬರುವುದಿಲ್ಲ. ಇದೀಗ ಈ ಹೊಸ ನಿರ್ಧಾರದಿಂದ ಕೋವಿಡ್-19 ಸಾಂಕ್ರಾಮಿಕ ರೋಗದ ನಂತರ ಲಾಲಾರಸದ ಬಳಕೆಯನ್ನು ಮತ್ತೆ ಪರಿಚಯಿಸುತ್ತಿರುವ ಮೊದಲ ಪ್ರಮುಖ ಕ್ರಿಕೆಟ್ ಲೀಗ್ ಆಗಿದೆ.
ಈ ಆವೃತ್ತಿಯ ಐಪಿಎಲ್ನಲ್ಲಿ ಸಂಜೆಯ ಪಂದ್ಯಗಳ ಎರಡನೇ ಇನಿಂಗ್ಸ್ನಲ್ಲಿ 11ನೇ ಓವರ್ನಿಂದ ಹೊಸ ಚೆಂಡನ್ನು ಪರಿಚಯಿಸಲಾಗುತ್ತಿದೆ. ಇಬ್ಬನಿ(ಮುಸುಕು ಹನಿ) ಕಾರಣದಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಅದ್ಯಾಗೂ ಈ ನಿಯಮಗಳು ಮಧ್ಯ್ಹಾನದ ಪಂದ್ಯಗಳಿಗೆ ಅನ್ವಹಿಸುವುದಿಲ್ಲ.
3. ವೈಡ್ಗಳಿಗೆ DRS
ಮೊದಲನೆಯದಾಗಿ, ಡೆಸಿಷನ್ ರಿವ್ಯೂ ಸಿಸ್ಟಮ್(DRS) ಅನ್ನು ಎತ್ತರದ ವೈಡ್‌ಗಳು ಮತ್ತು ಆಫ್-ಸೈಡ್ ವೈಡ್‌ಗಳನ್ನು ಸೇರಿಸಲು ವಿಸ್ತರಿಸಲಾಗಿದೆ, ಇದು ವಿತರಣೆಗಳ ನ್ಯಾಯಯುತ ನಿರ್ಣಯವನ್ನು ಖಾತ್ರಿಪಡಿಸುತ್ತದೆ. ಆದಾಗ್ಯೂ, ಲೆಗ್-ಸೈಡ್ ವೈಡ್ಸ್ ಅನ್ನು ಆನ್-ಫೀಲ್ಡ್ ಅಂಪೈರ್ ಕರೆಯುತ್ತಾರೆ.(ಏಜೆನ್ಸೀಸ್)