BCCI: ಇದೇ ಮಾ.22ರಂದು ಆರಂಭವಾಗಲಿರುವ ಇಂಡಿಯನ್ ಪ್ರೀಮಿಯರ್ ಲೀಗ್(IPL 2025)ನಲ್ಲಿ ಚೆಂಡಿನ ಮೇಲೆ ಲಾಲಾರಸದ ಬಳಕೆಯ ಮೇಲಿನ ನಿಷೇಧವನ್ನು ಬಿಸಿಸಿಐ ಗುರುವಾರ ತೆಗೆದುಹಾಕಿದೆ ಎಂದು ಗುರುವಾರ ವರದಿಯಾಗಿದೆ.
ಇದನ್ನೂ ಓದಿ:ಶಿಕ್ಷಕರ ಬಡ್ತಿ ಅನ್ಯಾಯ ಸರಿಪಡಿಸಲು ಸಮಿತಿ ರಚನೆ:ವಿಧಾನಪರಿಷತ್ತಿಗೆ ಮಧು ಬಂಗಾರಪ್ಪ ಭರವಸೆ
ಚೆಂಡಿಗೆ ಲಾಲಾರಸ ಹಚ್ಚಿ ಎಸೆಯುವ ಪ್ರಸ್ತಾಪಕ್ಕೆ ಹೆಚ್ಚಿನ ಆಟಗಾರರು ಒಪ್ಪಿಕೊಂಡ ನಂತರ ಮುಂಬೈನಲ್ಲಿ ನಡೆದ ಉನ್ನತ ಸಭೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ(ಬಿಬಿಸಿಐ) ಉನ್ನತ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ಕೋವಿಡ್-19 ಸಂಕ್ರಾಮಿಕ ರೋಗದ ವೇಳೆ ಮುನ್ನೇಚ್ಚರಿಕೆ ಕ್ರಮವಾಗಿ ಚೆಂಡನ್ನು ಹೊಳಪು ಮಾಡಲು ಲಾಲಾರಸವನ್ನು ಬಳಕೆ ಮಾಡುವ ಪದ್ಧತಿಯನ್ನು ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ(ICC) 2022ರಲ್ಲಿ ನಿಷೇಧ ಮಾಡಲಾಗಿತ್ತು. ಈ ನಿರ್ಧಾರವನ್ನು ವಿಶ್ವಸಂಸ್ಥೆ ಕೂಡ ಸ್ವಾಗತ ಮಾಡಿ, ಶಾಶ್ವತಗೊಳಿಸಲಾಗಿತ್ತು.
ಇದನ್ನೂ ಓದಿ:ಶಿಕ್ಷಕರ ಬಡ್ತಿ ಅನ್ಯಾಯ ಸರಿಪಡಿಸಲು ಸಮಿತಿ ರಚನೆ:ವಿಧಾನಪರಿಷತ್ತಿಗೆ ಮಧು ಬಂಗಾರಪ್ಪ ಭರವಸೆ
ಇನ್ನು ಸಂಕ್ರಾಮಿಕ ರೋಗದ ನಂತರ IPL ಈ ನಿರ್ಧಾರವನ್ನು ತನ್ನ ಆಟದಲ್ಲಿ ಪಾಲಿಸುತ್ತಿತ್ತು. ಆದರೆ, ಇದೀಗ ICC ಮಂಡಳಿ ವ್ಯಾಪ್ತಿಗೆ IPL ಬರುವುದಿಲ್ಲ. ಇದೀಗ ಈ ಹೊಸ ನಿರ್ಧಾರದಿಂದ ಕೋವಿಡ್-19 ಸಾಂಕ್ರಾಮಿಕ ರೋಗದ ನಂತರ ಲಾಲಾರಸದ ಬಳಕೆಯನ್ನು ಮತ್ತೆ ಪರಿಚಯಿಸುತ್ತಿರುವ ಮೊದಲ ಪ್ರಮುಖ ಕ್ರಿಕೆಟ್ ಲೀಗ್ ಆಗಿದೆ.(ಏಜೆನ್ಸೀಸ್)