ಬೆಂಗಳೂರು: ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ ಹಾಗೂ ಪ್ರೌಢ ಶಾಲೆಯಿಂದ ಪದವಿ ಪೂರ್ವ ಕಾಲೇಜುಗಳಿಗೆ ಶಿಕ್ಷಕರ ಪದೋನ್ನತಿ ವಿಚಾರದಲ್ಲಿ ಅನ್ಯಾಯ ಸರಿಪಡಿಸಲು ಶಾಸಕರು ಸೇರಿ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದರು.
ಬಿಜೆಪಿಯ ಸಂಕನೂರ,ಜೆಡಿಎಸ್ನ ಭೋಜೆಗೌಡ ಮತ್ತು ಕಾಂಗ್ರೆಸ್ನ ಪುಟ್ಟಣ್ಣ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸದ್ಯದಲ್ಲೇ ಸಮಿತಿ ರಚಿಸಿ ಕಾಲ ಮಿತಿಯೊಳಗೆ ತೀರ್ಮಾನ ಕೈಗೊಳ್ಳಲಾಗುವುದು.
ಬಹಳ ವರ್ಷದಿಂದ ಈ ಸಮಸ್ಯೆ ಇದೆ. 6ನೇ ವೇತನ ಆಯೋಗ ಬಳಿಕ ಬಡ್ತಿ ನೀಡುವುದನ್ನು ಸರ್ಕಾರ ಒಪ್ಪಿಲ್ಲ.ಶಿಕ್ಷಕರಿಗೆ ನ್ಯಾಯ ಕೊಡುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತದೆ. ನೆರೆಯ ರಾಜ್ಯ ಆಂಧ್ರಪ್ರದೇಶದಲ್ಲಿ ಅಲ್ಲಿನ ಶಿಕ್ಷಕರಿಗೆ ಯಾವ ರೀತಿ ಬಡ್ತಿ ನೀಡಲಾಗಿದೆ ಎಂಬ ವರದಿಯನ್ನು ತರಿಸಿಕೊಂಡು ಅಧ್ಯಯನ ನಡೆಸುತ್ತೇನೆ.ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಗಮನಕ್ಕೆ ತಂದು ಮುಂದುವರಿಯುತ್ತೇನೆ ಎಂದರು.
ಬಡ್ತಿ ನೀಡುವ ವಿಚಾರದಲ್ಲಿ ಅಧಿಕಾರಿಗಳನ್ನ ಒಳಗೊಂಡ ಸಮಿತಿ ರಚಿಸಬೇಡಿ. ಅವರು ದಾರಿ ತಪ್ಪಿಸುವ ಸಾಧ್ಯತೆ ಇದ್ದು, ಶಾಸಕರನ್ನು ಒಳಗೊಂಡ ಸಮಿತಿ ಮಾಡಬೇಕೆಂದು ಉತ್ತರಿಸುತ್ತಿದ್ದ ವೇಳೆ ಸಚಿವರಿಗೆ ಸಂಕನೂರ, ಭೋಜೆಗೌಡ, ಪುಟ್ಟಣ್ಣ ಮನವಿ ಮಾಡಿದರು.ಈ ವೇಳೆ ಶಾಸಕರನ್ನು ಒಳಗೊಂಡ ಸಮಿತಿ ರಚಿಸುವ ಭರವಸೆ ನೀಡಿದರು.
ಬಿಬಿಎಂಪಿಗೆ ಕೊನೆ ಕಂತು ಹಣ ಬಿಡುಗಡೆ:ಒಟ್ಟು 3 ಸಾವಿರ ಕೋಟಿ ಕೊಟ್ಟ ಸರ್ಕಾರ