ಬೆಂಗಳೂರು:ಬಿಬಿಎಂಪಿ ವ್ಯಾಪ್ತಿಯಲ್ಲಿ ನಗರೋತ್ಥಾನ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳ ಬಾಕಿ ಬಿಲ್ಗಳಿಗೆ ಹಣ ಪಾವತಿಸಲು ಸರ್ಕಾರ, ಬಿಬಿಎಂಪಿಗೆ 750 ಕೋಟಿ ರೂ.ಅನುದಾನವನ್ನು ಮಂಗಳವಾರ ಬಿಡುಗಡೆ ಮಾಡಿದೆ.
ವಿಶೇಷ ಮೂಲಸೌಕರ್ಯ ಕಾಮಗಾರಿಗಳಿಗೆ ಈ ಅನುದಾನವನ್ನು ಬಳಸಬೇಕು. ಸರ್ಕಾರದಿಂದ ಅನುಮೋದನೆ ನೀಡಿರುವ ಕ್ರಿಯಾ ಯೋಜನೆ ಕಾಮಗಾರಿಗಳಿಗೆ ಹೊರತುಪಡಿಸಿ ಬೇರೆ ಕಾಮಗಾರಿಗಳಿಗೆ, ಉದ್ದೇಶಕ್ಕೆ ಹಣ ಬಳಕೆ ಮಾಡಿದ್ದಲ್ಲಿ ಸಂಬಂಧಪಟ್ಟ ಮುಖ್ಯ ಲೆಕ್ಕಾಧಿಕಾರಿಯನ್ನು ಹೊಣೆ ಮಾಡಲಾಗುವುದು. ಮುಂದೆ ಅನುದಾನ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸುವ ವೇಳೆ 4ನೇ ಕಂತಿನ ಅನುದಾನ ಬಳಕೆ ಮಾಡಿರುವ ಕುರಿತು ಪ್ರಗತಿ ವರದಿಯೊಂದಿಗೆ ಪ್ರಮಾಣ ಪತ್ರ ಸಲ್ಲಿಸಬೇಕೆಂದು ಆದೇಶದಲ್ಲಿ ನಗರಾಭಿವೃದ್ಧಿ ಇಲಾಖೆ ಉಲ್ಲೇಖಿಸಿದೆ.ಬಿಡುಗಡೆ ಮಾಡಿರುವ ಅನುದಾನದ ವೆಚ್ಚಕ್ಕೆ ಸಂಬಂಧಿಸಿದಂತೆ ಪ್ರತಿ ತಿಂಗಳು ನಡೆಯುವ ಎಂಪಿಕ್ ಸಭೆಗೆ ಪ್ರಗತಿ ವರದಿ ತಯಾರಿಸಿ ಕಡ್ಡಾಯವಾಗಿ ಸಲ್ಲಿಸಬೇಕು. ಪಾಲಿಕೆಗೆ ಬಿಡುಗಡೆ ಮಾಡಿರುವ ಅನುದಾನವನ್ನು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಹುಜೂರ್ ಖಜಾನೆಯಿಂದ ಡ್ರಾ ಮಾಡಿ ಇ&ಪೇಮೆಂಟ್ ಮೂಲಕ ನೀಡಲು ಅಧಿಕಾರ ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಒಟ್ಟು 3 ಸಾವಿರ ಕೋಟಿ ಬಿಡುಗಡೆ: ಕಳೆದ ವರ್ಷ ಫೆಬ್ರವರಿ ನಂತರ ಮುಗಿದಿರುವ ಕಾಮಗಾರಿಗಳ ಬಾಕಿ ಬಿಲ್ಗಳಿಗೆ ಹಣ ಪಾವತಿಸಲು 2024&25ನೇ ಸಾಲಿನ 4ನೇ ಕಂತಿನ 750 ಕೋಟಿ ರೂ.ಅನುದಾನ ಬಿಡುಗಡೆಯಾಗಿದೆ. ಈ ವರ್ಷದ ಕೊನೆ ಕಂತು ಇದಾಗಿದೆ. ಈವರೆಗೆ ಒಟ್ಟು 3 ಸಾವಿರ ಕೋಟಿ ರೂ.ಅನುದಾನವನ್ನು ಸರ್ಕಾರ ಬಿಬಿಎಂಪಿಗೆ ಬಿಡುಗಡೆ ಮಾಡಿದಂತಾಗಿದೆ. ಹಂತ ಹಂತವಾಗಿ ಈಗಾಗಲೇ 3 ಕಂತುಗಳನ್ನು ಬಿಡುಗಡೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ಗೆ, ಬಿಬಿಎಂಪಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಜೆ.ಎಂ.ನಂದಕುಮಾರ್ ಸೇರಿ ಸಂಘದ ಪದಾಧಿಕಾರಿಗಳು ಕೃತಜ್ಞತೆ ಸಲ್ಲಿಸಿದ್ದಾರೆ.
ರಾಜ್ಯದಲ್ಲಿಯೇ ಅತೀ ಹೆಚ್ಚು ಬಿಸಿಲು, ಗರಿಷ್ಠ 42.3ಡಿಗ್ರಿ ಸೆಲ್ಸಿಯಸ್ ದಾಖಲು, ಬಿಸಿಲೂರಿನಲ್ಲಿ ದಾಖಲೆ ಬರೆದ ತಾಪಮಾನ