ಚೆಂಡಿಗೆ ಹೊಳಪು ನೀಡಲು ಉಗುಳು ಹಚ್ಚುವ ನಿಷೇಧವನ್ನು ತೆಗೆದುಹಾಕಿದ BCCI

dk - 2025-03-20T161250.278
Published on

BCCI: ಇದೇ ಮಾ.22ರಂದು ಆರಂಭವಾಗಲಿರುವ ಇಂಡಿಯನ್ ಪ್ರೀಮಿಯರ್ ಲೀಗ್‌(IPL 2025)ನಲ್ಲಿ ಚೆಂಡಿನ ಮೇಲೆ ಲಾಲಾರಸದ ಬಳಕೆಯ ಮೇಲಿನ ನಿಷೇಧವನ್ನು ಬಿಸಿಸಿಐ ಗುರುವಾರ ತೆಗೆದುಹಾಕಿದೆ ಎಂದು ಗುರುವಾರ ವರದಿಯಾಗಿದೆ.

ಚೆಂಡಿಗೆ ಲಾಲಾರಸ ಹಚ್ಚಿ ಎಸೆಯುವ ಪ್ರಸ್ತಾಪಕ್ಕೆ ಹೆಚ್ಚಿನ ಆಟಗಾರರು ಒಪ್ಪಿಕೊಂಡ ನಂತರ ಮುಂಬೈನಲ್ಲಿ ನಡೆದ ಉನ್ನತ ಸಭೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿಯ(ಬಿಬಿಸಿಐ) ಉನ್ನತ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

ಕೋವಿಡ್​-19 ಸಂಕ್ರಾಮಿಕ ರೋಗದ ವೇಳೆ ಮುನ್ನೇಚ್ಚರಿಕೆ ಕ್ರಮವಾಗಿ ಚೆಂಡನ್ನು ಹೊಳಪು ಮಾಡಲು ಲಾಲಾರಸವನ್ನು ಬಳಕೆ ಮಾಡುವ ಪದ್ಧತಿಯನ್ನು ಅಂತರಾಷ್ಟ್ರೀಯ ಕ್ರಿಕೆಟ್​ ಮಂಡಳಿ(ICC) 2022ರಲ್ಲಿ ನಿಷೇಧ ಮಾಡಲಾಗಿತ್ತು. ಈ ನಿರ್ಧಾರವನ್ನು ವಿಶ್ವಸಂಸ್ಥೆ ಕೂಡ ಸ್ವಾಗತ ಮಾಡಿ, ಶಾಶ್ವತಗೊಳಿಸಲಾಗಿತ್ತು.

ಇನ್ನು ಸಂಕ್ರಾಮಿಕ ರೋಗದ ನಂತರ IPL ಈ ನಿರ್ಧಾರವನ್ನು ತನ್ನ ಆಟದಲ್ಲಿ ಪಾಲಿಸುತ್ತಿತ್ತು. ಆದರೆ, ಇದೀಗ ICC ಮಂಡಳಿ ವ್ಯಾಪ್ತಿಗೆ IPL ಬರುವುದಿಲ್ಲ. ಇದೀಗ ಈ ಹೊಸ ನಿರ್ಧಾರದಿಂದ ಕೋವಿಡ್-19 ಸಾಂಕ್ರಾಮಿಕ ರೋಗದ ನಂತರ ಲಾಲಾರಸದ ಬಳಕೆಯನ್ನು ಮತ್ತೆ ಪರಿಚಯಿಸುತ್ತಿರುವ ಮೊದಲ ಪ್ರಮುಖ ಕ್ರಿಕೆಟ್ ಲೀಗ್​ ಆಗಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net