ಪಾಕ್​ ಕ್ರಿಕೆಟಿಗ ಶೋಯೆಬ್​ ಮಲಿಕ್​ ಮೂರನೇ ಮಡದಿ ಸನಾ ಜಾವೇದ್​ ಹಿನ್ನಲೆ ಏನು ಗೊತ್ತಾ?

Sana Malik
Published on

ನವದೆಹಲಿ: ಪಾಕಿಸ್ತಾನ ಕ್ರಿಕೆಟ್​ ತಂಡದ ಮಾಜಿ ನಾಯಕ, ಅನುಭವಿ ಆಲ್ರೌಂಡರ್​ ಶೋಯೆಬ್​ ಮಲಿಕ್​ ಮೂರನೇ ಮದುವೆಯಾಗುವ ಮೂಲಕ ಸುದ್ದಿಯಾಗಿದ್ದಾರೆ. ತಮ್ಮ ಎರಡನೇ ಪತ್ನಿ ಸಾನಿಯಾ ಮಿರ್ಜಾ ಅವರೊಂದಿಗಿನ ವಿಚ್ಛೇದನ ವಧಂತಿಗಳ ನಡುವೆ ಖ್ಯಾತ ನಟಿ ಸನಾ ಜವೇದ್​ ಅವರನ್ನು ಮದುವೆಯಾಗುವ ಮೂಲಕ ಸುದ್ದಿಯಾಗಿದ್ದಾರೆ.

ಸನಾ ಜಾವೇದ್ ಪ್ರಸಿದ್ಧ ಪಾಕಿಸ್ತಾನಿ ನಟಿಯಾಗಿದ್ದು, ಅವರು ಮಾರ್ಚ್ 25, 1993 ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಜನಿಸಿದರು. ಸನಾ ಜಾವೇದ್ 2020 ರಲ್ಲಿ ಕರಾಚಿಯಲ್ಲಿ ಪಾಕಿಸ್ತಾನಿ ಗಾಯಕ ಉಮರ್ ಜಸ್ವಾಲ್ ಅವರನ್ನು ವಿವಾಹ ಆಗಿದ್ದರು. ಆದಾಗ್ಯೂ, ಶೀಘ್ರದಲ್ಲೇ ಇಬ್ಬರೂ ಪರಸ್ಪರ ಬೇರ್ಪಟ್ಟಿದ್ದರು.

2012 ರಲ್ಲಿ ಶೆಹರ್-ಎ-ಜಾತ್ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಸನಾ ಜಾವೇದ್​ ಅನೇಕ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ರೊಮ್ಯಾಂಟಿಕ್ ಡ್ರಾಮಾ ಖಾನಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಸನಾ ಹೆಚ್ಚು ಖ್ಯಾತಿ ಪಡೆದಿದ್ದರು. ಖಾನಿಯಲ್ಲಿನ ನಟನೆಗಾಗಿ ಲಕ್ಸ್ ಸ್ಟೈಲ್ ಪ್ರಶಸ್ತಿ, ವಿಮರ್ಶಕರ ವಿಭಾಗದಲ್ಲಿ PISA ಪ್ರಶಸ್ತಿ ಕೂಡ ಸಿಕ್ಕಿದೆ.

Sana Javed

 ಬೇಹದ್, ಶಾರಿಕ್-ಎ-ಹಯಾತ್, ಡಿನೋ ಕಿ ದುಲ್ಹನಿಯಾ ಮತ್ತು ಐ ಲವ್ ಯೂ ಜಾಡಾದಂತಹ ಜನಪ್ರಿಯ ಟೆಲಿ ಚಲನಚಿತ್ರಗಳಲ್ಲಿ ಕೆಲಸ ಮಾಡಿರುವ ಸನಾ ಜಾವೇದ್ ಶೋಯೆಬ್​ ಮಲಿಕ್​ ಅವರೊಂದಿಗೆ ಜನವರಿ 20ರಂದು ಎರಡನೇ ಮದುವೆ ಮಾಡಿಕೊಂಡಿದ್ದಾರೆ.

ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ ನಡುವೆ ಬಹಳ ಹಿಂದೆಯೇ ಸಂಬಂಧ ಹದಗೆಟ್ಟಿತ್ತು. ಕೆಲವು ದಿನಗಳ ಹಿಂದೆ, ಸಾನಿಯಾ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ನಿಗೂಢ ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದರು. ಇದರಿಂದಾಗಿ ಮಲಿಕ್ ಮತ್ತು ಸಾನಿಯಾರ ವಿಚ್ಛೇದನದ ಸುದ್ದಿಗೆ ಪುಷ್ಠಿ ಸಿಕ್ಕಿತ್ತು. ಆದರೆ, ಶೋಯೆಬ್ ಮಲಿಕ್ ಮತ್ತು ಸಾನಿಯಾ ಮಿರ್ಜಾ ವಿಚ್ಛೇದನ ಪಡೆದಿದ್ದಾರೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net