

ಮೆಲ್ಬೋರ್ನ್: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ-20 ವಿಶ್ವಕಪ್ನಲ್ಲಿ ಆರಂಭಿಕ ಪಂದ್ಯಗಲ್ಲಿ ಸತತ ಸೋಲು ಕಂಡ ಪಾಕಿಸ್ತಾನ ತಂಡದ ಸೆಮಿಫೈನಲ್ ಹಾದಿ ಕಠಿಣವಾಗಿತ್ತು. ಹೀಗಾಗಿ ಈ ಬಾರಿ ಗ್ರೂಪ್ ಹಂತದಲ್ಲಿಯೇ ಪಾಕ್ ಹೊರ ಬೀಳಲಿದೆ ಎಂದು ಹೇಳಲಾಗಿತ್ತು. ಆದರೆ ನೆದರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಸೌತ್ಆಫ್ರಿಕಾ ಸೋಲು ಕಾಣುತ್ತಿದ್ದಂತೆ, ಪಾಕಿಸ್ತಾನ ಸೆಮಿಫೈನಲ್ಗೆ ಲಗ್ಗೆಯಿಟ್ಟಿದೆ.
ಇದೀಗ ಪಾಕಿಸ್ತಾನ ತಂಡ ಸೆಮಿಫೈನಲ್ಗೆ ಅವಕಾಶ ಪಡೆಯುತ್ತಿದ್ದಂತೆ ನಾಯಕ ಬಾಬರ್ ಅಜಮ್ ತಂಡದ ಆಟಗಾರರಿಗೆ ಸ್ಫೂರ್ತಿ ತುಂಬುವ ಕೆಲಸ ಮಾಡಿದ್ದಾರೆ. ಡ್ರೆಸ್ಸಿಂಗ್ ರೂಮ್ನಲ್ಲಿ ಮಾತನಾಡುತ್ತಾ, ಮುಂದಿನ ಪಂದ್ಯಗಳು ಕಠಿಣವಾಗುತ್ತಾ ಹೋಗುತ್ತದೆ. ಮೈದಾನದಲ್ಲಿ ಒತ್ತಡ ನಿರ್ಮಾಣವಾಗುತ್ತದೆ. ಹೀಗಾದಾಗ ಧೈರ್ಯದಿಂದ ಆಡಬೇಕಾಗಿದೆ.
ನಮ್ಮ ಆಟದ ಮೇಲೆ ನಮಗೆ ಮೊದಲು ನಂಬಿಕೆ ಇರಬೇಕು. 100 ಶೇ. ದಷ್ಟು ಪ್ರಯತ್ನ ಪಟ್ಟಾಗ ಖಂಡಿತವಾಗಿಯೂ ಪಂದ್ಯದ ಜಯ ನಮಗೆ ಒಲಿಯಲು ಸಾಧ್ಯವಾಗುತ್ತದೆ. ಮುಂದಿನ ಪಂದ್ಯದಲ್ಲಿ ನಂಬಿಕೆಯಿಟ್ಟು ಆಡಬೇಕಾಗಿದೆ. ಸೆಮಿಫೈನಲ್ ಆಡಲು ನಾವೆಲ್ಲಾ ಉತ್ಸುಕರಾಗಿದ್ದೇವೆ ಎಂದು ಬಾಬರ್ ಅಝಮ್ ಹೇಳಿದ್ದಾರೆ.