ವಿರಾಟ್​ ಕೊಹ್ಲಿಗಿಂತ ಪಾಕ್​ ಮಾಜಿ ಆಟಗಾರರಿಗೆ ಹೋಲಿಕೆ ಮಾಡಿ ಎಂದು ಅಜಮ್ ಹೇಳಿದ್ಯಾಕೆ..?

babar and virat for web
Published on

ಲಾಹೋರ್​: ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿಗೆ ಬ್ಯಾಟಿಂಗ್​ ಮೂಲಕ ವಿಶ್ವ ಕ್ರಿಕೆಟ್​ಗೆ ಮಾದರಿಯಾಗಿರುವ ಆಟಗಾರ. ಮೂರು ಮಾದರಿ ಕ್ರಿಕೆಟ್​ನಲ್ಲಿ ಭಾರತ ಮುನ್ನಡೆಸುತ್ತಿರುವ ಕೊಹ್ಲಿಗೆ ಅದೆಷ್ಟೋ ಯುವ ಕ್ರಿಕೆಟಿಗರಿಗೆ ಮಾದರಿಯಾಗಿರುವ ವ್ಯಕ್ತಿ. ಕೊಹ್ಲಿ ಮಾದರಿಯಲ್ಲೇ ಬ್ಯಾಟಿಂಗ್​ ಮಾಡಲು ಇಚ್ಛಿಸುತ್ತೇನೆ, ಅವರೇ ನನಗೆ ಸ್ಫೂರ್ತಿ ಎಂದು ಎದುರಾಳಿ ತಂಡದ ಆಟಗಾರರು ಹೇಳಿದ್ದುಂಟು. ಕೆಲ ದಿನಗಳ ಹಿಂದೆ ಪಾಕಿಸ್ತಾನದ ನಿಗದಿತ ಓವರ್​ಗಳ ತಂಡದ ನಾಯಕ ಬಾಬರ್​ ಅಜಮ್ ಅವರನ್ನು ವಿರಾಟ್​ ಕೊಹ್ಲಿಗೆ ಹೋಲಿಸಿದ್ದುಂಟು. ಆತನೂ ಕೂಡ ಕೊಹ್ಲಿಗೆ ಹೋಲಿಸಿದ ನಂತರ ಹಿಗ್ಗಿದ್ದುಂಟು. ಇದೀಗ ತಂಡದ ನಾಯಕನಾಗಿ ಆಯ್ಕೆಮಾಡಿದ್ದೆ ತಡ. ಕೊಹ್ಲಿಗಿಂತ ಪಾಕಿಸ್ತಾನದ ಮಾಜಿ ಆಟಗಾರರಿಗೆ ಹೋಲಿಕೆ ಮಾಡಿದ ಎಂದು ಹೇಳಿಕೊಂಡಿದ್ದಾರೆ.

ವಿರಾಟ್​ ಕೊಹ್ಲಿ ಮಾದರಿಯಲ್ಲೇ ಆಕ್ರಮಣಕಾರಿ ಬ್ಯಾಟಿಂಗ್​ ಮಾಡುವ ಬಾಬರ್​ ಅಜಮ್ ಅವರನ್ನು ಕೊಹ್ಲಿಗೆ ಹೋಲಿಸಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಅಜಂ, ಭಾರತದ ಆಟಗಾರನ ಬದಲಿಗೆ ಸ್ವದೇಶದ ಜಾವೇದ್​ ಮಿಯಾಂದಾದ್​, ಯೂನಿಸ್​ ಖಾನ್​, ಇಂಜಾಮನ್​ ಉಲ್​ ಹಕ್​ಗೆ ಹೋಲಿಕೆ ಮಾಡಿ ಎಂದು ಹೇಳಿದ್ದಾರೆ. 25 ವರ್ಷದ ಬಾಬರ್​ ಅಜಮ್, ಏಕದಿನ ಹಾಗೂ ಟಿ20 ಕ್ರಿಕೆಟ್​ನಲ್ಲಿ ಸರಾಸರಿ 50 ಹೊಂದಿದ್ದರೆ, ಟೆಸ್ಟ್​ ಕ್ರಿಕೆಟ್​ನಲ್ಲಿ ಸರಾಸರಿ 45 ಹೊಂದಿದ್ದಾರೆ. ಭಾರತದ ಆಟಗಾರನ ಬದಲಿಗೆ ಸ್ವದೇಶದ ಆಟಗಾನಿಗೆ ಹೋಲಿಸಿ ಎಂದು ಹೇಳಿಕೊಂಡಿದ್ದಾರೆ.

ಪಾಕಿಸ್ತಾನ ತಂಡ ಇಂಗ್ಲೆಂಡ್​ನಲ್ಲಿ ತಲಾ 3 ಟೆಸ್ಟ್​, 3 ಟಿ20 ಪಂದ್ಯಗಳನ್ನಾಡಲಿದೆ. ಈಗಾಗಲೇ 20 ಸದಸ್ಯರು ಇಂಗ್ಲೆಂಡ್​ ತಲುಪಿದ್ದರೆ, ಕೋವಿಡ್​&19ರ ಪಾಸಿಟಿವ್​ಗೆ ಒಳಗಾಗಿದ್ದ 6 ಮಂದಿಯ ಇದೀಗ ಸತತ 2ನೇ ವರದಿಯಲ್ಲೂ ನೆಗೆಟಿವ್​ ಬಂದ ಹಿನ್ನೆಲೆಯಲ್ಲಿ ಶ್ರೀವೇ ತಂಡ ಕೂಡಿಕೊಳ್ಳಲಿದ್ದಾರೆ. ಈಗಾಗಲೇ ಇಂಗ್ಲೆಂಡ್​ನಲ್ಲಿ ವೆಸ್ಟ್​ ಇಂಡೀಸ್​ ತಂಡ ಜುಲೈ 8 ರಿಂದ ಮೊದಲ ಟೆಸ್ಟ್​ ಪಂದ್ಯ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net