

ನವದೆಹಲಿ: ಈ ಬಾರಿ ಲಖನೌ ಎಕ್ಸ್‌ಪ್ರೆಸ್ ಮಯಾಂಕ್ ಯಾದವ್ ಐಪಿಎಲ್‌ನಲ್ಲಿ ಹಾಟ್ ಟಾಪಿಕ್ ಆಗಿದ್ದಾರೆ. ಯುವ ವೇಗಿ ತನ್ನ ಮಿಂಚಿನ ಪ್ರದರ್ಶನದಿಂದ ಎಲ್ಲರ ಗಮನವನ್ನು ತನ್ನತ್ತ ಸೆಳೆಯುತ್ತಿದ್ದಾರೆ. 150 ಕಿ.ಮೀ. ಗಿಂತ ಹೆಚ್ಚು ವೇಗದಲ್ಲಿ ಮಯಾಂಕ್ ಎಸೆಯುವ ಚೆಂಡುಗಳನ್ನು ನೋಡಿ ಪ್ರೇಕ್ಷಕರು ಹುಚ್ಚೆದ್ದು ಕುಣಿಯುತ್ತಿದ್ದಾರೆ. ಕೇವಲ ಒಂದೆರೆಡು ಎಸೆತವಲ್ಲ, ಸ್ಪೆಲ್ ಉದ್ದಕ್ಕೂ ಸತತವಾಗಿ ಅದೇ ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ಎಲ್ಲರ ಮನ ಗೆಲ್ಲುತ್ತಿದ್ದಾರೆ.
ಆಸ್ಟ್ರೇಲಿಯಾದ ದಿಗ್ಗಜ ಬೌಲರ್ ಬ್ರೆಟ್ ಲೀಯಿಂದ ಡೇಲ್ ಸ್ಟೇಯ್ನ್ ವರೆಗಿನ ವಿಶ್ವದ ಅಗ್ರ ವೇಗದ ಬೌಲರ್ಗಳು ಮಯಾಂಕ್ ಅವರನ್ನು ಮೆಚ್ಚುತ್ತಿದ್ದಾರೆ. ಹಲವು ವರ್ಷಗಳ ಬಳಿಕ ಭಾರತಕ್ಕೆ ಓರ್ವ ಮಿಂಚಿನ ವೇಗದ ಬೌಲರ್ ಸಿಕ್ಕಿದ್ದು, ಮಯಾಂಕ್ ಯಾದವ್ ಅವರ ಬೌಲಿಂಗ್ ನೋಡಿ ಆಸ್ಟ್ರೇಲಿಯಾ ತಂಡ ಇದೀಗ ಹೆದರುತ್ತಿದೆ.
ಹೌದು, ಮಯಾಂಕ್ ಯಾದವ್ ಅವರನ್ನು ನೋಡಿ ಕಾಂಗರೂ ಪಡೆ ನಡುಗುತ್ತಿದೆ . ಅವರ ತೀಕ್ಷ್ಣ ವೇಗದ ಬೌಲಿಂಗ್ ಹಾಗೂ ಬ್ಯಾಟರ್ಗಳನ್ನು ಬೆದರಿಸುವ ರೀತಿಯಿಂದಾಗಿ ಆಸೀಸ್ ನಲುಗುತ್ತಿದೆ. ಈ ಮಿಂಚಿನ ಬೌಲರ್ ಎಲ್ಲಿ ತಮ್ಮ ಮೇಲೆ ದಾಳಿ ಮಾಡುತ್ತಾರೋ ಎಂಬ ಭಯ ಅವರಲ್ಲಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಆರ್‌ಸಿಬಿ ಮತ್ತು ಲಖನೌ ನಡುವಿನ ಪಂದ್ಯ ಇದಕ್ಕೆ ಕಾರಣ. ಮಯಾಂಕ್ ಅವರು ಈ ಪಂದ್ಯದಲ್ಲಿ 3 ವಿಕೆಟ್ ಪಡೆದರು. ಇದರಲ್ಲಿ ಇಬ್ಬರು ಆಸಿಸ್ ಆಟಗಾರರ ವಿಕೆಟ್ ಪಡೆದಿರುವುದು ಗಮನಾರ್ಹ. ಸ್ಟಾರ್ ಬ್ಯಾಟ್ಸ್‌ಮನ್‌ಗಳಾದ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಕ್ಯಾಮರೂನ್ ಗ್ರೀನ್ ಅವರನ್ನು ಮಯಾಂಕ್ ಔಟ್ ಮಾಡಿದರು.
ಮಯಾಂಕ್ ಅವರು ಕ್ಯಾಮರೂನ್ ಗ್ರೀನ್ ಔಟ್ ಮಾಡಿದ ರೀತಿ ಅದ್ಭುತವಾಗಿತ್ತು. ಇದರಿಂದ ಆಸ್ಟ್ರೇಲಿಯಾ ತಂಡ ಹೆದರುತ್ತಿದೆ. ಈ ವೇಗದ ಬೌಲರ್ ಭಾರತ ತಂಡವನ್ನು ಸೇರಿದರೆ ನಮಗೆ ಅಪಾಯಕಾರಿಯಾಗುವುದು ಗ್ಯಾರಂಟಿ ಎಂದು ಆಸಿಸ್ ಪಡೆ ಮಾತನಾಡಿಕೊಳ್ಳುತ್ತಿದೆ. ವಿದೇಶಿ ಪಿಚ್ಗಳು ವೇಗದ ಬೌಲಿಂಗ್ಗೆ ಹೆಸರುವಾಗಿ, ಭಾರತದಂತಹ ಸ್ಪಿನ್ ಪಿಚ್ಗಳಲ್ಲಿ ಮಯಾಂಕ್ ಅವರ ಬಾಲ್ ಮಿಂಚಿನಂತೆ ನುಗ್ಗುತ್ತಿದೆ. ಇನ್ನು ವಿದೇಶಿ ಪಿಚ್ಗಳಲ್ಲಿ ಯಾವ ರೀತಿ ಬಾಲ್ ನುಗ್ಗಬಹುದು ಎಂದು ಆಸಿಸ್ ಪಡೆ ಚಿಂತಿಸುತ್ತಿದೆ.
ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಮಯಾಂಕ್ ತಮಗೆ ಬಹುದೊಡ್ಡ ಸವಾಲಾದರು ಅಚ್ಚರಿ ಇಲ್ಲ ಎಂದು ಆಸಿಸ್ ಪಡೆ ಭಾವಿಸಿದೆ. ವಿಶ್ವಕಪ್ಗೆ ತೆರಳುವ ಭಾರತ ತಂಡದಲ್ಲಿ ಮಯಾಂಕ್ ಸ್ಥಾನ ಗ್ಯಾರಂಟಿ ಎಂಬ ಮಾತು ಕ್ರಿಕೆಟ್ ವಲಯದಲ್ಲಿ ಜೋರಾಗಿ ಕೇಳಿಬರುತ್ತಿದೆ. ಇದರೊಂದಿಗೆ ವಿಶ್ವಕಪ್‌ನ ನಾಕೌಟ್ ಪಂದ್ಯಗಳಲ್ಲಿ ಈ ಅಪಾಯಕಾರಿ ಬೌಲರ್‌ನಿಂದ ಬೆದರಿಕೆಯೊಡ್ಡುವ ಭೀತಿಯಲ್ಲಿದ್ದಾರೆ.
ಅಂದಹಾಗೆ ಒಂದೇ ಒಂದು ಅಂತಾರಾಷ್ಟ್ರೀಯ ಪಂದ್ಯವನ್ನು ಆಡದೆ ಆಸೀಸ್ ತಂಡವನ್ನು ನಡುಗಿಸಿರುವ ಮಯಾಂಕ್ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ರೂಪದಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ. (ಏಜೆನ್ಸೀಸ್)