More

    ಕೇಕ್​ ಮೇಲಿರುವ ಕ್ರೀಮ್​ ತಿಂದು ಆನಂದಿಸ್ತಾರೆ! ಈ ಕಾರಣಕ್ಕೆ ಈವರೆಗೆ RCB ಕಪ್​ ಗೆದ್ದಿಲ್ಲ ಅಂದ್ರು ಅಂಬಾಟಿ ರಾಯುಡು

    ನವದೆಹಲಿ: ಐಪಿಎಲ್‌ನಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ತಂಡಗಳಲ್ಲಿ ಆರ್​ಸಿಬಿ ಸದಾ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಏಕೆಂದರೆ, ಆರ್​ಸಿಬಿಗೆ ಇರುವ ನಿಷ್ಠಾವಂತ ಅಭಿಮಾನಿಗಳು ಬೇರೆ ಯಾವುದೇ ತಂಡಕ್ಕೂ ಇಲ್ಲ. ಇದುವರೆಗೆ ಒಂದೇ ಒಂದು ಟ್ರೋಫಿ ಗೆಲ್ಲದಿದ್ದರೂ ಅಭಿಮಾನಿಗಳು ಮಾತ್ರ ಬೆಂಬಲ ನೀಡುತ್ತಲೇ ಇದ್ದಾರೆ. ಎಂದಿಗೂ ತಂಡವನ್ನೂ ಅಭಿಮಾನಿಗಳು ಬಿಟ್ಟುಕೊಟ್ಟಿಲ್ಲ. ಆದರೆ ಅಭಿಮಾನಿಗಳ ನಿರೀಕ್ಷೆಯನ್ನು ತಲುಪುವಲ್ಲಿ ತಂಡ ಮಾತ್ರ ವಿಫಲವಾಗುತ್ತಲೇ ಇದೆ.

    ಪ್ರಸಕ್ತ ಐಪಿಎಲ್​ನಲ್ಲೂ ಆರ್​ಸಿಬಿ ಸೋಲಿನ ಅಭಿಯಾನವನ್ನು ಮುಂದುವರಿಸಿದೆ. ಸತತ ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ ಆರ್​ಸಿಬಿ ಹಿಂದೆ ಬಿದ್ದಿದೆ. ಇದುವರೆಗೂ ಆಡಿದ 4 ಪಂದ್ಯಗಳ ಪೈಕಿ ಮೂರರಲ್ಲಿ ಸೋಲುಂಡಿದೆ. ನಿನ್ನೆ ಲಖನೌ ಸೂಪರ್​ ಜೇಂಟ್ಸ್​ ವಿರುದ್ಧ ನಡೆದ ಪಂದ್ಯದಲ್ಲಿ ಹೀನಾಯ ಸೋಲನ್ನು ಅನುಭವಿಸಿತು. ಈ ಹಿನ್ನಲೆಯಲ್ಲಿ ಟೀಂ ಇಂಡಿಯಾದ ಮಾಜಿ ಬ್ಯಾಟ್ಸ್​ಮನ್ ಅಂಬಾಟಿ ರಾಯುಡು, ಆರ್​ಸಿಬಿಯ ಈ ಹೀನಾಯ ಸ್ಥಿತಿಗೆ ಕಾರಣ ಏನೆಂಬುದನ್ನು ತಿಳಿಸಿದ್ದಾರೆ.

    ಆರ್​ಸಿಬಿ ತಂಡ 16 ವರ್ಷಗಳಿಂದ ಐಪಿಎಲ್‌ನಲ್ಲಿ ಅದೇ ತಪ್ಪನ್ನು ಪುನರಾವರ್ತಿಸುತ್ತಿದೆ. ಇದರಿಂದಾಗಿ ಒಮ್ಮೆಯೂ ಕಪ್ ಗೆಲ್ಲಲು ಸಾಧ್ಯವಾಗಲಿಲ್ಲ ಎಂದು ಅಂಬಾಟಿ ರಾಯುಡು ಸ್ಟಾರ್ ಸ್ಪೋರ್ಟ್ಸ್​ ಇಂಡಿಯಾಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದರು.

    ಬೆಂಗಳೂರಿನ ಬೌಲರ್‌ಗಳು ಭಾರಿ ರನ್ ನೀಡುತ್ತಿದ್ದಾರೆ. ಬೌಲಿಂಗ್​ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿಲ್ಲ. ಅಲ್ಲದೆ, ಈ ತಂಡದ ಬ್ಯಾಟ್ಸ್‌ಮನ್‌ಗಳು ನಿರೀಕ್ಷಿತ ಪ್ರದರ್ಶನ ನೀಡುತ್ತಿಲ್ಲ. ತಂಡ ಒತ್ತಡದಲ್ಲಿದ್ದಾಗ ಭಾರತದ ಯುವ ಬ್ಯಾಟ್ಸ್‌ಮನ್‌ಗಳು ಉತ್ತಮವಾಗಿ ಆಡುತ್ತಿದ್ದಾರೆ. ಇವರೊಂದಿಗೆ ಹಿರಿಯ ಆಟಗಾರ ದಿನೇಶ್ ಕಾರ್ತಿಕ್ ಸಹ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ಖ್ಯಾತ ಸ್ಟಾರ್ ವಿದೇಶಿ ಬ್ಯಾಟ್ಸ್​ಮನ್​ಗಳು ಮಾತ್ರ ಪ್ರದರ್ಶನ ನೀಡುತ್ತಿಲ್ಲ. ಅವರು ಒತ್ತಡದ ಪರಿಸ್ಥಿತಿಯಲ್ಲಿ ಆಡಬೇಕು. ಆದರೆ ಅದು ಆಗುತ್ತಿಲ್ಲ. ಅವರೆಲ್ಲ ಡ್ರೆಸ್ಸಿಂಗ್ ರೂಮಿಗೆ ಸೀಮಿತವಾಗಿದ್ದಾರೆ. ಇದು 16 ವರ್ಷಗಳ ಈ ತಂಡದ ಕಥೆ. ತಂಡ ಒತ್ತಡದಲ್ಲಿದ್ದಾಗ ಆರ್‌ಸಿಬಿಯಲ್ಲಿ ಒಬ್ಬನೇ ಒಬ್ಬ ಬ್ಯಾಟ್ಸ್‌ಮನ್ ನಿಂತು ತಂಡವನ್ನು ಬೆಂಬಲಿಸುವುದಿಲ್ಲ ಎಂದು ರಾಯುಡು ಸ್ಪಷ್ಟಪಡಿಸಿದರು.

    ಬೆಂಗಳೂರು ತಂಡ ಒತ್ತಡದಲ್ಲಿದ್ದಾಗ ಯುವ ಆಟಗಾರರು ಜವಾಬ್ದಾರಿ ಹೊತ್ತು ಆಡುತ್ತಾರೆ ಎಂದು ರಾಯುಡು ಹೇಳಿದರು. ಆದರೆ ಖ್ಯಾತ ಸ್ಟಾರ್ ಆಟಗಾರರು ಕೇಕ್ ಮೇಲಿನ ಕ್ರೀಮ್​ ತಿಂದು ಆನಂದಿಸುತ್ತಾರೆ ಎಂದು ಟೀಕಿಸಿದರು. ಅಂತಹ ತಂಡ ಎಂದಿಗೂ ಗೆಲ್ಲುವುದಿಲ್ಲ. ಆರ್‌ಸಿಬಿ ಇಷ್ಟು ವರ್ಷಗಳಲ್ಲಿ ಒಮ್ಮೆಯೂ ಕಪ್ ಗೆಲ್ಲದಿರಲು ಇದೇ ಕಾರಣ ಎಂದು ರಾಯುಡು ಪ್ರತಿಕ್ರಿಯಿಸಿದರು.

    ಭಾರತದ ಮಾಜಿ ಕ್ರಿಕೆಟಿಗ ಮತ್ತು ಕಾಮೆಂಟೇಟರ್ ನವಜೋತ್ ಸಿಂಗ್ ಸಿಧು ಕೂಡ ಈ ಕಾಮೆಂಟ್‌ಗಳನ್ನು ಒಪ್ಪಿಕೊಂಡಿದ್ದಾರೆ. ರಾಯುಡು ಮಾತನಾಡಿದ್ದು ಸರಿಯಾಗಿದೆ ಎಂದರು. ಬುಧವಾರ ಲಕ್ನೋ ಸೂಪರ್‌ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ 28 ರನ್‌ಗಳಿಂದ ಸೋತಿತ್ತು. ಲಖನೌ ತಂಡದ ನೀಡಿದ್ದ 181 ರನ್‌ಗಳ ಗುರಿಯನ್ನು ತಲುಪಲು ಸಾಧ್ಯವಾಗದೆ ಆರ್​ಸಿಬಿ 153 ರನ್‌ಗಳಿಗೆ ಕುಸಿಯಿತು.

    ಅಂದಹಾಗೆ ಆರ್​ಸಿಬಿ ಸೋಲಿಗೆ ಖ್ಯಾತ ಸ್ಟಾರ್ ಬ್ಯಾಟರ್‌ಗಳೇ ಕಾರಣ ಎಂಬ ರಾಯುಡು ಅವರ ಕಾಮೆಂಟ್‌ಗಳ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ. (ಏಜೆನ್ಸೀಸ್​)

    ಅಳಿಯನ ಜತೆ ಅತ್ತೆ ಲಿಪ್​ಲಾಕ್​! ಬಿಗಿಲ್​ ಪಾಂಡಿಯಮ್ಮಳ ತಾಯಿ, ಗಂಡನ ಕಿಸ್ಸಿಂಗ್​ ವಿಡಿಯೋ ವೈರಲ್​, ತೀವ್ರ ಟೀಕೆ

    ಮುಂಬೈ ಇಂಡಿಯನ್ಸ್​ ನಾಯಕತ್ವ ಮತ್ತೆ ರೋಹಿತ್​ಗೆ! ದಿನಾಂಕವನ್ನೂ ತಿಳಿಸಿದ ಮಾಜಿ ಕ್ರಿಕೆಟಿಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts