More

    ಸನಾರನ್ನು ಮದ್ವೆಯಾಗೋ ಮುಂಚೆ ಶೋಯಿಬ್​ ಇಂಥಾ ನೀಚ ಕೆಲ್ಸ ಮಾಡಿದ್ರಾ? ಶಾಕಿಂಗ್ ಸಂಗತಿ ಬಿಚ್ಚಿಟ್ಟ ಪಾಕ್​ ನಟಿ

    ನವದೆಹಲಿ: ಟೆನ್ನಿಸ್​ ತಾರೆ ಸಾನಿಯಾ ಮಿರ್ಜಾಗೆ ಕೈಕೊಟ್ಟು ಪಾಕಿಸ್ತಾನಿ ನಟಿ ಸನಾ ಜಾವೇದ್​ರನ್ನು ಮದುವೆಯಾಗುವ ಮೂಲಕ ಭಾರಿ ಸಂಚಲನ ಮೂಡಿಸಿದ ಮಾಜಿ ಕ್ರಿಕೆಟಿ ಶೋಯಿಬ್​ ಮಲಿಕ್​ ವಿರುದ್ಧ ಇದೀಗ ಗಂಭೀರ ಆರೋಪವೊಂದು ಕೇಳಿಬಂದಿದೆ. ಸನಾ ಜಾವೇದ್​ರನ್ನು ಮದುವೆ ಆಗುವ ಮುಂಚೆಯೇ ಮತ್ತೊಬ್ಬ ನಟಿಗೆ ಶೋಯಿಬ್ ರೊಮ್ಯಾಂಟಿಕ್​ ಮೆಸೇಜ್​ಗಳನ್ನು ಕಳುಹಿಸುತ್ತಿದ್ದರು ಎಂಬ ಸಂಗತಿ ಇದೀಗ ಬಯಲಾಗಿದೆ. ಮೆಸೇಜ್​ಗಳನ್ನು ಸ್ವೀಕರಿಸಿದ ನಟಿಯೇ ಸ್ವತಃ ಬಹಿರಂಗಪಡಿಸಿದ್ದು, ಈ ವಿಚಾರಗಳನ್ನು ಕೇಳಿದ ಶೋಯಿಬ್​ ಅಭಿಮಾನಿಗಳಿಗೆ ಶಾಕ್​ ಆಗಿದೆ.

    ಈ ಮುಂಚೆ ಶೋಯಿಬ್​ ಹೆಸರು ಪಾಕ್​ ನಟಿ ಹಾಗೂ ಮಾಡೆಲ್​ ಆಯೇಷಾ ಓಮರ್​ ಜತೆ ತಳುಕು ಹಾಕಿಕೊಂಡಿತ್ತು. ಆದರೆ, ಸನಾ ಜಾವೇದ್​ರನ್ನು ವರಿಸಿ ಶಾಕ್​ ನೀಡಿದರು. ಸನಾಗೂ ಈಗಾಗಲೇ ಮದುವೆಯಾಗಿತ್ತು. ಶೋಯಿಬ್ ಮತ್ತು ಸನಾ ಮೊದಲ ಬಾರಿಗೆ ರಂಜಾನ್​ ವಿಶೇಷ ಟಿವಿ ಕಾರ್ಯಕ್ರಮದಲ್ಲಿ ಭೇಟಿಯಾಗಿದ್ದರು. ಈ ವೇಳೆ ಇಬ್ಬರ ನಡುವಿನ ಪರಿಚಯ ಪ್ರೀತಿಗೆ ತಿರುಗಿತ್ತು. ಇದೇ ವರ್ಷ ಜನವರಿಯಲ್ಲಿ ಸನಾ ಜತೆ ಮದುವೆ ಆಗಿರುವ ಸುದ್ದಿಯನ್ನು ಬಹಿರಂಗಪಡಿಸುವ ಮೂಲಕ ಶೋಯಿಬ್​ ಶಾಕ್​ ನೀಡಿದ್ದಲ್ಲದೆ, ಬಹಳ ಹಿಂದಿನಿಂದ ಹರಿದಾಡುತ್ತಿದ್ದ ಸಾನಿಯಾ ಜತೆಗಿನ ಸಂಬಂಧ ಹಳಸಿದೆ ಎಂಬ ಸುದ್ದಿಗೆ ಅಧಿಕೃತ ಮುದ್ರೆಯನ್ನು ಒತ್ತಿದರು.

    ಆಯೇಷಾ ಓಮರ್​ ಜತೆ ಮಾತ್ರವಲ್ಲ ಮತ್ತೊಬ್ಬ ಪಾಕಿಸ್ತಾನಿ ನಟಿ ನವಾಲ್​ ಸೈಯೀದ್​ ಜತೆಯು ಶೋಯಿಬ್​ ಫ್ಲರ್ಟ್​ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಕಾರ್ಯಕ್ರಮವೊಂದರಲ್ಲಿ ಈ ವಿಚಾರವನ್ನು ಸ್ವತಃ ನವಾಲ್​ ಹೇಳಿಕೊಂಡಿದ್ದಾರೆ. ಇನ್​ಸ್ಟಾಗ್ರಾಂ ಡಿಎಂನಲ್ಲಿ ಸಾಕಷ್ಟು ಮೆಸೇಜ್​ಗಳು ಬರುತ್ತಿದ್ದವು. ಬಹುತೇಕ ಮೆಸೇಜ್​ಗಳು ಕ್ರಿಕೆಟಿಗರಿಂದಲೇ ಬರುತ್ತದೆ ಎಂದಿದ್ದಾರೆ.

    ನವಾಲ್​ ಪಾಕಿಸ್ತಾನದಲ್ಲಿ ಅತ್ಯಂತ ಜನಪ್ರಿಯ ನಟಿಯಾಗಿರುವುದರಿಂದ, ಆ್ಯಂಕರ್​, ನೀವು ನಟರಿಂದ ಮೆಸೇಜ್​ಗಳನ್ನು ಸ್ವೀಕರಿಸಿದ್ದೀರಾ ಎಂದು ಪ್ರಶ್ನೆ ಮಾಡಿದರು. ನಟಿ ನವಾಲ್​ ತಾನು ಡಿಎಂಗಳನ್ನು ಪಡೆಯುತ್ತಿದ್ದೇನೆ. ಆದರೆ ನಟರಿಂದ ಅಲ್ಲ, ಕ್ರಿಕೆಟಿಗರಿಂದ ಹೆಚ್ಚು ಮೆಸೇಜ್​ಗಳನ್ನು ಸ್ವೀಕರಿಸಿದ್ದೇನೆ ಎಂದು ಬಹಿರಂಗಪಡಿಸಿದರು. ಕ್ರಿಕೆಟಿಗರಿಂದ ಇಂತಹ ವರ್ತನೆ ಸರಿಯಿಲ್ಲ ಎಂದು ನವಾಲ್​ ಇದೇ ಸಂದರ್ಭದಲ್ಲಿ ಹೇಳಿದರು.

    ಆ ಕ್ರಿಕೆಟಿಗರು ಜಾಗತಿಕ ವೇದಿಕೆಯಲ್ಲಿ ರಾಷ್ಟ್ರವನ್ನು ಪ್ರತಿನಿಧಿಸುತ್ತಾರೆ. ಇಂಥವರು ಸೂಕ್ತ ರೀತಿಯಲ್ಲಿ ವರ್ತಿಸಬೇಕು. ಕ್ರಿಕೆಟಿಗರು ತನಗೆ ಕಳುಹಿಸಿರುವ ಎಲ್ಲ ಸಂದೇಶಗಳ ಸ್ಕ್ರೀನ್‌ಶಾಟ್‌ಗಳನ್ನು ಹೊಂದಿರುವುದಾಗಿ ನವಾಲ್​ ಇದೇ ವೇಳೆ ತಿಳಿಸಿದರು.

    ಮೆಸೇಜ್​ಗಳನ್ನು ಕಳುಹಿಸಿದವರ ಪಟ್ಟಿಯಲ್ಲಿ ಶೋಯಿಬ್​ ಮಲಿಕ್​ ಕೂಡ ಇದಾರಾ ಎಂದು ಆ್ಯಂಕರ್​ ಕೇಳಿದ ಪ್ರಶ್ನೆಗೆ ನವಾಲ್​ ನಗಲು ಆರಂಭಿಸಿದರು. ಈ ಮೂಲಕ ಪಟ್ಟಿಯಲ್ಲಿ ಅವರು ಕೂಡ ಇದಾರೆ ಎಂಬುದನ್ನು ಒಪ್ಪಿಕೊಂಡರು. ಇದನ್ನು ಕೇಳಿದ ಶೋಯಿಬ್​ ಅಭಿಮಾನಿಗಳು ದಂಗಾಗಿದ್ದಾರೆ.

    ಸಾನಿಯಾಗೆ ಡಿವೋರ್ಸ್​
    2022ರ ನವೆಂಬರ್​ 11ರಂದು ಸಾನಿಯಾ ಮಿರ್ಜಾ ಇನ್​ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್​ ಹಾಕಿದ್ದರು. ಅದರಲ್ಲಿ “ಕಠಿಣ ದಿನಗಳು ಮತ್ತು ಒಡೆದ ಹೃದಯಗಳು” ಎಂದು ಬರೆದುಕೊಂಡಿದ್ದರು. ಅಲ್ಲಿಂದಾಚೆಗೆ ಇಬ್ಬರ ಬ್ರೇಕಪ್​ ವದಂತಿ ಹರಡಲು ಆರಂಭವಾಯಿತು. ಇದರ ನಡುವೆ ಒಮ್ಮೆ ಇಝಾನ್ ಜೊತೆಗಿನ ಮುದ್ದಾದ ಫೋಟೋವನ್ನು ಸಾನಿಯಾ ಹಂಚಿಕೊಂಡು, ಕಠಿಣ ದಿನಗಳಲ್ಲಿ ನನ್ನನ್ನು ಪಡೆಯುವ ಕ್ಷಣಗಳು ಎಂದು ಬರೆದಿದ್ದರು. ಇಷ್ಟೇ ಅಲ್ಲದೆ, ಶೋಯಿಬ್ ಮತ್ತು ಸಾನಿಯಾ ದುಬೈನಲ್ಲಿ ಇಜಾನ್‌ನ ನಾಲ್ಕನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿದರು. ಬರ್ತಡೇ ಪಾರ್ಟಿಯ ಅನೇಕ ಫೋಟೋಗಳನ್ನು ಶೋಯಿಬ್​​ ಹಂಚಿಕೊಂಡರೆ, ಸಾನಿಯಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಯಾವುದನ್ನೂ ಹಂಚಿಕೊಂಡಿಲ್ಲ ಇದು ಅನುಮಾನಗಳಿಗೆ ಕಾರಣವಾಗಿತ್ತು. ಅಲ್ಲಿಂದ ಶುರುವಾದ ಡಿವೋರ್ಸ್​ ವದಂತಿ ಕತೆ ಇಂದು ಶೋಯಿಬ್​, ಸನಾ ಜಾವೇದ್​ ಜತೆ ಮದುವೆ ಆಗುವವರೆಗೂ ಬಂದು ನಿಂತಿದೆ. ಅಲ್ಲದೆ, ಸಾನಿಯಾ-ಶೋಯಿಬ್​ ಬೇರೆಯಾಗಿರುವುದು ಖಚಿತವಾಗಿದೆ.

    ಅಂದಹಾಗೆ ಸಾನಿಯಾ ಮಿರ್ಜಾ (Sania Mirza) ಮತ್ತು ಶೋಯಿಬ್​​ ಮಲಿಕ್ (Shoib Malik) 2010ರ ಏಪ್ರಿಲ್ 12ರಂದು ಹೈದರಾಬಾದ್‌ನಲ್ಲಿರುವ ತಾಜ್ ಕೃಷ್ಣ ಹೋಟೆಲ್‌ನಲ್ಲಿ ಸಾಂಪ್ರದಾಯಿಕ ಹೈದರಾಬಾದಿ ಮುಸ್ಲಿಂ ಸಂಪ್ರದಾಯದಂತೆ ವಿವಾಹವಾದರು. ಇದಾದ ನಂತರ ಪಾಕಿಸ್ತಾನಿ ಪದ್ಧತಿಯಂತೆ ಪಾಕಿಸ್ತಾನದ ಸಿಯಾಲ್‌ಕೋಟ್‌ನಲ್ಲಿ ಮದುವೆ ನಡೆಯಿತು. (ಏಜೆನ್ಸೀಸ್​)

    ಅಳಿಯನ ಜತೆ ಅತ್ತೆ ಲಿಪ್​ಲಾಕ್​! ಬಿಗಿಲ್​ ಪಾಂಡಿಯಮ್ಮಳ ತಾಯಿ, ಗಂಡನ ಕಿಸ್ಸಿಂಗ್​ ವಿಡಿಯೋ ವೈರಲ್​, ತೀವ್ರ ಟೀಕೆ

    ಕೇಕ್​ ಮೇಲಿರುವ ಕ್ರೀಮ್​ ತಿಂದು ಆನಂದಿಸ್ತಾರೆ! ಈ ಕಾರಣಕ್ಕೆ ಈವರೆಗೆ RCB ಕಪ್​ ಗೆದ್ದಿಲ್ಲ ಅಂದ್ರು ಅಂಬಾಟಿ ರಾಯುಡು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts