

ಲಖನೌ: ಇಲ್ಲಿನ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣದಲ್ಲಿ ನಡೆದ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಶ್ರೀಲಂಕಾ ವಿರುದ್ಧ ಐದು ವಿಕೆಟ್ಗಳ ಭರ್ಜರಿ ಜಯ ಗಳಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಶ್ರಿಲಂಕಾ ತಂಡವು ಆರಂಭಿಕರಾದ ಪತುನ್ ನಿಸ್ಸಂಕ (61 ರನ್, 67 ಎಸೆತ, 8 ಬೌಂಡರಿ), ಕುಶಾಲ್ ಪೆರೇರಾ (78 ರನ್, 82 ಎಸೆತ, 12 ಬೌಂಡರಿ) ಅರ್ಧಶತಕಗಳ ಫಲವಾಗಿ 43.3 ಓವರ್ಗಳಲ್ಲಿ 209ರನ್ಗಳಿಗೆ ಆಲೌಟ್ ಆಯಿತು. ಆಸ್ಟ್ರೇಲಿಯಾ ಪರ ಆ್ಯಡಂ ಜಂಪಾ (8-1-47-4), ಮಿಚೆಲ್ ಸ್ಟಾರ್ಕ್ (10-0-43-2), ಪ್ಯಾಟ್ ಕಮ್ಮಿನ್ಸ್ (7-0-32-2), ಗ್ಲೆನ್ ಮ್ಯಾಕ್ಸ್ವೆಲ್ (9.3-0-36-1) ರನ್ ನೀಡಿ ವಿಕೆಟ್ ಪಡೆದಿದ್ದಾರೆ.
ಗುರಿ ಬೆನ್ನತ್ತಿದ್ದ ಆಸ್ಟ್ರೇಲಿಯಾ ತಂಡವು ಜೋಶ್ ಇಂಗ್ಲಿಸ್ (58 ರನ್, 59 ಎಸೆತ, 5 ಬೌಂಡರಿ, 1 ಸಿಕ್ಸರ್), ಮಿಚೆಲ್ ಮಾರ್ಷ್ (52 ರನ್, 51 ಎಸೆತ, 9 ಬೌಂಡರಿ), ಅರ್ಧಶತಕಗಳ ಫಲ ಹಾಗೂ ಕಡೆಯಲ್ಲಿ ಮ್ಯಾಕ್ಸ್ವೆಲ್-ಸ್ಟೋಯಿನಿಸ್ ಅಬ್ಬರದ ಬ್ಯಾಟಿಂಗ್ ಫಲವಾಗಿ ಗುರಿಯನ್ನು 35.2 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 215ರನ್ ಗಳಿಸಿ ಗೆಲುವಿನ ನಗೆ ಬೀರಿತ್ತು.
ಈ ಮೂಲಕ ಶ್ರೀಲಂಕಾ ತಂಡವು ವಿಶ್ವಕಪ್ನಲ್ಲಿ ಹ್ಯಾಟ್ರಿಕ್ ಸೋಲು ಕಂಡಿದೆ. ಆಸ್ಟ್ರೇಲಿಯಾ ತಂಡವು ಗೆಲುವಿನ ಹಳಿಗೆ ಮರಳುವ ಮೂಲಕ ವಿಶ್ವಕಪ್ನಲ್ಲಿ ತನ್ನ ಅಭಿಯಾನವನ್ನು ಜೀವಂತವಾಗಿರಿಸಿದೆ.