ಏಷ್ಯನ್​ ಗೇಮ್ಸ್​ ಕ್ರಿಕೆಟ್​ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕ್ ಧೂಳೀಪಟ: ಚಿನ್ನದ ಪದಕಕ್ಕೆ ಮುತ್ತಿಟ್ಟ ಭಾರತ..! India vs Pakistan

ಪ್ರತಿಷ್ಠಿತ ಕ್ರೀಡಾಕೂಟದಲ್ಲೂ ಪಾಕಿಸ್ತಾನ ಭಾರತದ ಎದುರು ಮುಖಭಂಗ ಅನುಭವಿಸಿದರೆ, ಭಾರತ ಮಾತ್ರ ತನ್ನ ಸಾಂಪ್ರದಾಯಿಕ ಎದುರಾಳಿ ವಿರುದ್ಧ ಗೆಲುವಿನ ಓಟವನ್ನು ಮುಂದುವರಿಸಿತು.
India vs Pakistan
ಏಷ್ಯನ್​ ಗೇಮ್ಸ್​ ಕ್ರಿಕೆಟ್​ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕ್ ಧೂಳೀಪಟ: ಚಿನ್ನದ ಪದಕಕ್ಕೆ ಮುತ್ತಿಟ್ಟ ಭಾರತ..!
Published on: 

ಐಚಿ-ನಗೋಯಾ (ಜಪಾನ್​) : ಏಷ್ಯನ್ ಗೇಮ್ಸ್​ 2026ರ ಪುರುಷರ ಕ್ರಿಕೆಟ್‌ ವಿಭಾಗದ ಫೈನಲ್​ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಬಗ್ಗುಬಡಿದ ಟೀಮ್​ ಇಂಡಿಯಾ ( India vs Pakistan ) ಚಿನ್ನದ ಪದಕಕ್ಕೆ ಕೊರಳೊಡ್ಡಿದೆ.

ನಿಶ್ಚಿನ್‌ನ ಕೋರೋಗಿ ಸ್ಪೋರ್ಟ್ಸ್ ಪಾರ್ಕ್‌ನಲ್ಲಿ ನಡೆದ ಹೈ-ವೋಲ್ಟೆಜ್​ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಟೀಮ್​ ಇಂಡಿಯಾ, ಅಭಿಷೇಕ್​ ಶರ್ಮಾ (61) ಹಾಗೂ ತಿಲಕ್​ ವರ್ಮಾ (ಅಜೇಯ 51)ರ ಅಬ್ಬರದ ಬ್ಯಾಟಿಂಗ್​ ನೆರವಿನಿಂದ ಪಾಕಿಸ್ತಾನಕ್ಕೆ 212 ರನ್​ಗಳ ಬೃಹತ್​ ಗುರಿ ನೀಡಿತ್ತು. ಈ ಗುರಿಬೆನ್ನತ್ತಿದ ಪಾಕಿಸ್ತಾನ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 192 ರನ್​ ಕಲೆಹಾಕಿತು. ಈ ಮೂಲಕ ಪ್ರತಿಷ್ಠಿತ ಕ್ರೀಡಾಕೂಟದಲ್ಲೂ ಪಾಕಿಸ್ತಾನ, ಭಾರತದ ಎದುರು ಮುಖಭಂಗ ಅನುಭವಿಸಿದರೆ, ಭಾರತ ಮಾತ್ರ ತನ್ನ ಸಾಂಪ್ರದಾಯಿಕ ಎದುರಾಳಿ ವಿರುದ್ಧ ಗೆಲುವಿನ ನಾಗಾಲೋಟವನ್ನು ಮುಂದುವರಿಸಿತು.

Also Read
ಎಸ್​. ವಿಶ್ವನಾಥ್​, ಟಿ.ಟಿ.ವಿ ನಂಬೂರಿ...ಏಷ್ಯನ್ ಗೇಮ್ಸ್ ಕ್ರಿಕೆಟ್ ಸ್ಕೋರ್‌ಕಾರ್ಡ್‌ನಲ್ಲಿ ಭಾರತದ ಆಟಗಾರರ ಅಸಲಿ ಹೆಸರುಗಳು ವೈರಲ್! Team India
India vs Pakistan

ಮೊದಲು ಬ್ಯಾಟ್​ ಮಾಡಿದ ಟೀಮ್​ ಇಂಡಿಯಾ ಪರ ಆರಂಭಿಕ ಆಟಗಾರರಾದ ವೈಭವ್ ಸೂರ್ಯವಂಶಿ 15 ರನ್ ಗಳಿಸಿ ಔಟಾದರೆ, ಮತ್ತೊಬ್ಬ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅತ್ಯಂತ ಸ್ಫೋಟಕ ಬ್ಯಾಟಿಂಗ್ ನಡೆಸಿ ಕೇವಲ 28 ಎಸೆತಗಳಲ್ಲಿ 7 ಭರ್ಜರಿ ಸಿಕ್ಸರ್‌ ಹಾಗೂ 3 ಬೌಂಡರಿಗಳೊಡನೆ 61 ರನ್‌ಗಳನ್ನು ಸಿಡಿಸಿ ತಂಡಕ್ಕೆ ಭದ್ರವಾದ ಬುನಾದಿ ಹಾಕಿಕೊಟ್ಟರು.

ಮಧ್ಯಮ ಕ್ರಮಾಂಕದಲ್ಲಿ ಸಂಜು ಸ್ಯಾಮ್ಸನ್ (2) ಮತ್ತು ನಾಯಕ ಶ್ರೇಯಸ್ ಅಯ್ಯರ್ (21) ಬೇಗನೇ ವಿಕೆಟ್ ಒಪ್ಪಿಸಿದರೂ, ನಂತರ ಕ್ರೀಸ್‌ಗೆ ಬಂದ ತಿಲಕ್ ವರ್ಮಾ ಜವಾಬ್ದಾರಿಯುತ ಹಾಗೂ ಅಬ್ಬರದ ಆಟವಾಡಿದರು. ತಿಲಕ್ ವರ್ಮಾ ಅಜೇಯರಾಗಿ ಉಳಿದು 22 ಎಸೆತಗಳಲ್ಲಿ ಭರ್ಜರಿ 51 ರನ್‌ಗಳನ್ನು (3 ಬೌಂಡರಿ, 4 ಸಿಕ್ಸರ್‌ಗಳು) ಕಲೆಹಾಕಿದರೆ, ಶಿವಂ ದುಬೆ ಕೇವಲ 15 ಎಸೆತಗಳಲ್ಲಿ 27 ರನ್‌ಗಳ ಭರ್ಜರಿ ಕಾಣಿಕೆ ನೀಡಿದರು.

ಪಾಕಿಸ್ತಾನದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಭಾರತ ತಂಡದ ಆಟಗಾರರು ರನ್ ಮಳೆಯನ್ನೇ ಹರಿಸಿದರು. ಅಂತಿಮವಾಗಿ ಟೀಮ್ ಇಂಡಿಯಾ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಬೃಹತ್ 211 ರನ್‌ಗಳನ್ನು ಕಲೆಹಾಕುವ ಮೂಲಕ ಪಾಕಿಸ್ತಾನ ತಂಡಕ್ಕೆ ಗೆಲ್ಲಲು ಕಠಿಣವಾದ 212 ರನ್‌ಗಳ ಗುರಿಯನ್ನು ನೀಡಿತು.

Also Read
ಅದೇ ಸೀನ್​ ರಿಪೀಟ್​... ಸಾಂಬಾರಿನಲ್ಲಿ ಕರಿಬೇವು ಎಲೆಯನ್ನು ತೆಗೆದುಹಾಕಿದಂತೆ ಪಾಕ್​ ತಂಡಕ್ಕೆ ಕ್ಯಾರೆ ಎನ್ನದ ಟೀಮ್​ ಇಂಡಿಯಾ! India vs Pakistan
India vs Pakistan

ಪಾಕಿಸ್ತಾನ ಪರವಾಗಿ ಅಹಮದ್ ದನಿಯಾಲ್ ಮತ್ತು ಅರಾಫತ್ ಮಿನ್ಹಾಸ್ ತಲಾ ಎರಡು ವಿಕೆಟ್‌ಗಳನ್ನು ಪಡೆದರೆ, ಸೈಮ್ ಅಯುಬ್ ಮತ್ತು ಅಬ್ರಾರ್ ಅಹ್ಮದ್ ತಲಾ ಒಂದೊಂದು ವಿಕೆಟ್ ಪಡೆದು ಭಾರತದ ರನ್ ವೇಗಕ್ಕೆ ಸ್ವಲ್ಪ ಮಟ್ಟಿಗೆ ಕಡಿವಾಣ ಹಾಕಲು ಪ್ರಯತ್ನಿಸಿದರು.

ಟೀಮ್​ ಇಂಡಿಯಾ ನೀಡಿದ 212ರನ್​ಗಳ ಬೃಹತ್​ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನದ ಪರ ಹಸನ್​ ನವಾಜ್​ ಉತ್ತಮ ಹೋರಾಟ ನೀಡಿದರು. ಕೇವಲ 51 ಎಸೆತಗಳಲ್ಲಿ 7 ಸಿಕ್ಸರ್​ ಹಾಗೂ ಐದು ಬೌಂಡರಿ ನೆರವಿನಿಂದ 96 ರನ್​ ಗಳಿಸಿದರು. ಆದರೆ, ಅವರ ಹೋರಾಟ ಫಲ ನೀಡಲಿಲ್ಲ. ಉಳಿದಂತೆ ಮಾಜ್​ ಸಾದಕಟ್​ (23) ಹಾಗೂ ಸೈಮ್ ಅಯುಬ್​ (29) ಬಿಟ್ಟರೆ ಯಾವೊಬ್ಬ ಬ್ಯಾಟ್ಸ್​ಮನ್​ ಕೂಡ ತಂಡದ ಪರ ಅತ್ಯುತ್ತಮ ಪ್ರದರ್ಶನ ನೀಡಲಿಲ್ಲ. ಅಂತಿಮವಾಗಿ ಪಾಕಿಸ್ತಾನ ತಂಡ ಭಾರತದ ಎದುರು 19 ರನ್​ಗಳ ಸೋಲು ಅನುಭವಿಸಿತು.

ಟೀಮ್​ ಇಂಡಿಯಾ ಪರ ಅಕ್ಷರ್​ ಪಟೇಲ್​, ವಾಷಿಂಗ್ಟನ್​ ಸುಂದರ್​ ಹಾಗೂ ಶಿವಂ ದುಬೆ ತಲಾ ಎರಡು ವಿಕೆಟ್​ ಪಡೆದ ಮಿಂಚಿದರು, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net