

ನವದೆಹಲಿ: ಟೀಂ ಇಂಡಿಯಾ ಆಟಗಾರರು ಟಿ-20 ವಿಶ್ವಕಪ್ ನಿಮಿತ್ತ ಆಸ್ಟ್ರೇಲಿಯಾದಲ್ಲಿ ಬೀಡು ಬಿಟ್ಟಿದ್ದಾರೆ. ಇದೀಗ ಆಟಗಾರರು ಪ್ರ್ಯಾಕ್ಟೀಸ್ ವೇಳೆ ಮಾಜಿ ಕ್ರಿಕೆಟಿಗ, ಟರ್ಬೊನೇಟರ್ ಖ್ಯಾತಿಯ ಹರ್ಭಜನ್ ಸಿಂಗ್ ಶೈಲಿಯಲ್ಲಿ ಬೌಲಿಂಗ್ ಮಾಡಿ ಎಂಜಾಯ್ ಮಾಡಿದ್ದಾರೆ.
ಹೌದು, ಪ್ರ್ಯಾಕ್ಟೀಸ್ ವೇಳೆ ತಂಡದ ಪ್ರಮುಖ ಸ್ಪಿನ್ ಬೌಲರ್ ಆರ್. ಅಶ್ವಿನ್ ಹಾಗೂ ವೇಗಿ ಶಾರ್ದೂಲ್ ಠಾಕೂರ್ ಹರ್ಭಜನ್ ಸಿಂಗ್ ಶೈಲಿಯಲ್ಲಿ ಸ್ಪಿನ್ ಬೌಲಿಂಗ್ ಮಾಡಿದ್ದಾರೆ. ಈವರಿಬ್ಬರು ಹರ್ಭಜನ್ ಶೈಲಿಯಲ್ಲಿ ಬೌಲಿಂಗ್ ಮಾಡುತ್ತಿರುವುದನ್ನು ಸಹ ಆಟಗಾರರು ವಿಡಿಯೋ ಮಾಡಿ ಶೇರ್ ಮಾಡಿ ಮಾಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಟ್ವಿಟರ್ನಲ್ಲಿ ಚರ್ಚೆ ಮಾಡುತ್ತಿದ್ದಾರೆ.
ವೈರಲ್ ಆಗಿರುವ ವಿಡಿಯೋ ಗಮನಿಸಿದಾಗ ಶಾರ್ದೂಲ್ ಠಾಕೂರ್ ಹರ್ಭಜನ್ ಶೈಲಿಯ ಬೌಲಿಂಗ್ ಮಾಡುವಲ್ಲಿ ಕೊಂಚ ಎಡುವಿದ್ದಾರೆ. ಆದರೆ ಅಶ್ವಿನ್ ಮಾತ್ರ ಟರ್ಬೊನೇಟರ್ ಶೈಲಿಯಲ್ಲಿ ಬೌಲಿಂಗ್ ಮಾಡಿ ಪರ್ಫೆಕ್ಟ್ ಎನಿಸಿಕೊಂಡಿದ್ದಾರೆ. ರಾಜಸ್ಥಾನ ರಾಯಲ್ಸ್ ತಂಡದ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಆಗಿದೆ. ಈಗಾಗಲೇ ಈ ವಿಡಯೋವನ್ನು 40 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.