ಫಾರ್ಮ್‌ನಲ್ಲಿ ಇರಲಿ, ಬಿಡಲಿ ಆತ ವಿಶ್ವದ ಶ್ರೇಷ್ಠ ಆಟಗಾರ; Virat ಕೊಹ್ಲಿಯನ್ನು ಹಾಡಿ ಹೊಗಳಿದ ಆರ್​ಸಿಬಿಯ ಲೆಜೆಂಡ್ ಪ್ಲೇಯರ್​

Virat Kohli
Published on

ನವದೆಹಲಿ: ಟೀಮ್ ಇಂಡಿಯಾದ ಸ್ಟಾರ್ ಆಟಗಾರ, ರನ್​ ಮೆಷಿನ್​​ ಎಂದೇ ಖ್ಯಾತಿ ಪಡೆದಿರುವ ವಿರಾಟ್ ಕೊಹ್ಲಿ (Virat Kohli) ಬ್ಯಾಟ್ ಕಳೆದ ಕೆಲ ತಿಂಗಳಿನಿಂದ ಅಷ್ಟಾಗಿ ಸದ್ದು ಮಾಡಿಲ್ಲ. ಸದ್ಯ ಫಾರ್ಮ್ ಕಂಡುಕೊಳ್ಳಲು ಪರದಾಡುತ್ತಿರುವ ವಿರಾಟ್​ಗೆ ಅನೇಕರು ನಿವೃತ್ತಿ ಹೊಂದುವಂತೆ ಸೂಚಿಸುತ್ತಿದ್ದು, ಇದರ ನಡುವೆಯೇ ವೆಸ್ಟ್​ ಇಂಡೀಸ್​ ಸ್ಫೋಟಕ ದಾಂಡಿಗ ಕ್ರಿಸ್​ ಗೇಲ್​ (Chris Gayle) ಕೊಹ್ಲಿ ಬೆಂಬಲಕ್ಕೆ ನಿಂತಿದ್ದು, ಅವರು ವಿಶ್ವದ ಅತ್ಯುತ್ತಮ ಆಟಗಾರ ಎಂದು ಹಾಡಿಹೊಗಳಿದ್ದಾರೆ. 

ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಕ್ರಿಸ್ ಗೇಲ್​, ಕೊಹ್ಲಿ (Virat Kohli) ಅವರು ಫಾರ್ಮ್‌ನಲ್ಲಿ ಇರಲಿ, ಬಿಡಲಿ ಆತ ವಿಶ್ವದ ಶ್ರೇಷ್ಠ ಆಟಗಾರ. ಎಲ್ಲ ಮಾದರಿಗಳಲ್ಲಿ ಗಳಿಸಿದ ಶತಕಗಳು, ರನ್‌ಗಳು ಅವರನ್ನು ಸಾರ್ವಕಾಲಿಕ ಶ್ರೇಷ್ಠ ಆಟಗಾರನನ್ನಾಗಿ ರೂಪಿಸಿದೆ. ಫಾರ್ಮ್​ಅನ್ನು ಲೆಕ್ಕಿಸದೆ ವಿರಾಟ್ ವಿಶ್ವದ ಅತ್ಯುತ್ತಮ ಆಟಗಾರಲ್ಲಿ ಒಬ್ಬರಾಗಿದ್ದಾರೆ. ಯಾವ ಮಾದರಿಯಲ್ಲಿ ಎಷ್ಟು ಶತಕಗಳನ್ನು ಸಿಡಿಸಿದ್ದಾರೆ ಎನ್ನುವ ಅಂಕಿಅಂಶಗಳು ಅವರು ಇನ್ನೂ ವಿಶ್ವದ ಅತ್ಯುತ್ತಮ ಆಟಗಾರ ಎಂಬುದನ್ನು ಸಾಬೀತುಪಡಿಸುತ್ತದೆ.

Virat Gayle

ನಾವು ಕ್ರಿಕೆಟಿಗರೆಲ್ಲರೂ ಇಂತಹ ಕೆಟ್ಟ ಸಮಯವನ್ನು ಎದುರಿಸಿರುತ್ತೇವೆ. ಕೊಹ್ಲಿ ಕೂಡ ಅದೇ ರೀತಿಯ ಸವಾಲನ್ನು ಎದುರಿಸುತ್ತಿದ್ದಾರೆ. ಇದು ಆಟಗಾರರಿಗೆ ಸಾಮಾನ್ಯ ಅನುಭವವಾಗಿದೆ. ಆದರೆ, ಇದು ಅವರ ವೃತ್ತಿಜೀವನದ ಅಂತಿಮ ಘಟ್ಟದಲ್ಲಿ ನಡೆಯುತ್ತಿದೆ ಎಂಬುದು ನನಗೆ ತಿಳಿದಿದೆ. ಆದರೆ, ಕಳಪೆ ಫಾರ್ಮ್ ಅಥವಾ ಹಿನ್ನಡೆಗಳಂತಹ ಸಂಗತಿಗಳು ಆಟದ ಒಂದು ಭಾಗವಾಗಿದೆ. ಹೀಗಾಗಿ, ವಿರಾಟ್ ಕೊಹ್ಲಿ (Virat Kohli) ಉತ್ಸಾಹ ಕಳೆದುಕೊಳ್ಳಬಾರದು ಮತ್ತು ಉತ್ತಮವಾಗಿ ಹಿಂತಿರುಗಬೇಕು ಎಂದು ಕ್ರಿಸ್​ ಗೇಲ್ ವಿರಾಟ್ ಕೊಹ್ಲಿ ಫಾರ್ಮ್ ಕುರಿತು ಮಾತನಾಡಿದ್ದಾರೆ.

ಕಟಕ್​ನ ಬಾರಾಬತಿ ಕ್ರೀಡಾಂಗಣದಲ್ಲಿ ಭಾನುವಾರ (ಫೆಬ್ರವರಿ 09) ಇಂಗ್ಲೆಂಡ್​ ವಿರುದ್ಧ ನಡೆದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ವಿರಾಟ್ ಅಲ್ಪಮೊತ್ತಕ್ಕೆ ಔಟ್​ ಆಗುವ ಮೂಲಕ ಅಭಿಮಾನಿಗಳಿಗೆ ಭಾರೀ ನಿರಾಸೆ ಮೂಡಿಸಿದ್ದರು. ಫೆಬ್ರವರಿ 12ರಂದು ಅಹಮದಾಬಾದ್​ನಲ್ಲಿ ನಡೆಯಲಿರುವ ಸರಣಿಯ ಅಂತಿಮ ಪಂದ್ಯದಲ್ಲಿ ವಿರಾಟ್​ ಕಮ್​ಬ್ಯಾಕ್​ ಮಾಡುತ್ತಾರೆ ಎಂದು ಅಭಿಮಾನಿಗಳು ವಿಶ್ವಾಸ ವ್ಯಕ್ತಪಡಿಸಿದ್ದು, ಅಂತಿಮವಾಗಿ ಏನಾಗಲಿದೆ ಎಂದು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net