VIDEO | ಐಪಿಎಲ್​ ತಂಡದ ಪ್ರಯಾಣಕ್ಕಾಗಿ ಆ್ಯಂಬುಲೆನ್ಸ್​ಗೆ ತಡೆಯೊಡ್ಡಿದರೇ?

kkr ambulence
Published on

ಅಹಮದಾಬಾದ್​: ಐಪಿಎಲ್​ ಪಂದ್ಯಕ್ಕಾಗಿ ಕೋಲ್ಕತ ನೈಟ್​ರೈಡರ್ಸ್​ ತಂಡ ಪ್ರಯಾಣಿಸುವ ವೇಳೆ ಆ್ಯಂಬುಲೆನ್ಸ್​ಗೆ ತಡೆಯೊಡ್ಡಲಾಗಿತ್ತು ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಪಂಜ್ರಾಪೋಲ್​ ಕ್ರಾಸ್​ರೋಡ್​ ಟ್ರಾಫಿಕ್​ ಜಂನ್​ನಲ್ಲಿ ನಡೆದಿದೆ ಎನ್ನಲಾದ ಈ ಟನೆಯನ್ನು ಕಾರು ಚಾಲಕರೊಬ್ಬರು ವಿಡಿಯೋ ಮಾಡಿದ್ದಾರೆ.

17 ಸೆಕೆಂಡ್​ಗಳ ಈ ವಿಡಿಯೋದಲ್ಲಿ ಪೊಲೀಸ್​ ಎಸ್ಕಾರ್ಟ್​ನೊಂದಿಗೆ ಕೆಕೆಆರ್​ ತಂಡದ ಬಸ್​ ಸಂಚರಿಸುವ ವೇಳೆ ಜೀಪ್​ ಆ್ಯಂಬುಲೆನ್ಸ್​ಗೆ ತಡೆಯೊಡ್ಡಿರುವುದು ಕಂಡುಬಂದಿದೆ. ಈ ವಿಡಿಯೋ ವೈರಲ್​ ಆದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಆದರೆ ಇದೊಂದು ನಕಲಿ ವಿಡಿಯೋ ಆಗಿದ್ದು, ಪೊಲೀಸರ ಹೆಸರಿಗೆ ಮಸಿ ಬಳಿಯುವ ಪ್ರಯತ್ನವಾಗಿದೆ ಎಂದು ಅಹಮದಾಬಾದ್​ ಜಂಟಿ ಪೊಲೀಸ್​ ಆಯುಕ್ತ ಮಯಾಂಕ್​ ಸಿನ್ಹಾ ಸ್ಪಷ್ಟನೆ ನೀಡಿದ್ದಾರೆ.

ಪೊಲೀಸರು ಎಂದೂ ವಿಐಪಿಗಳ ಸಂಚಾರಕ್ಕಾಗಿ ಆ್ಯಂಬುಲೆನ್ಸ್​ಗೆ ತಡೆಯೊಡ್ಡುವುದಿಲ್ಲ. ಅದು ಐಪಿಎಲ್​ ಆಟಗಾರರೇ ಇರಲಿ ಅಥವಾ ಯಾವುದೇ ಸಚಿವರೇ ಆಗಿರಲಿ. ಇದೊಂದು ಸಣ್ಣ ಗೊಂದಲದ ಘಟನೆಯಾಗಿರಬಹುದು. ಪೊಲೀಸರ ವರ್ಚಸ್ಸಿಗೆ ಧಕ್ಕೆ ತರಲು ಇದನ್ನು ಬಳಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net