ICC ವಿಶ್ವಕಪ್ 2023: ಭಾರತ ಪ್ರಯಾಣಕ್ಕೆ ವೀಸಾ ಪಡೆದ ಪಾಕ್

Untitled design - 2023-09-25T212003.087
Published on

ಇಂದೋರ್: ಮುಂಬರುವ ಏಕದಿನ ವಿಶ್ವಕಪ್‌ಗೆ ಭಾರತಕ್ಕೆ ಪ್ರಯಾಣಿಸಲು ವೀಸಾಗೆ ಕಾಯುತ್ತಿದ್ದ ಪಾಕಿಸ್ತಾನದ ಕ್ರಿಕೆಟಿಗರು ಸೇರಿ ತಂಡದ ಒಟ್ಟು 35 ಸದಸ್ಯರಿಗೆ ಸೋಮವಾರ ವೀಸಾ ನೀಡಲಾಗಿದೆ.

ಇಸ್ಲಾಮಾಬಾದ್‌ನ ಭಾರತ ಹೈ-ಕಮೀಷನರ್ ಕಚೇರಿಯ ವಿಳಂಬ ನೀತಿಗೆ ಕಳವಳ ವ್ಯಕ್ತಪಡಿಸಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ, ದುಬೈನಲ್ಲಿ ಆಯೋಜಿಸಿದ್ದ ಪೂರ್ವ ಸಿದ್ಧತಾ ಶಿಬಿರವನ್ನು ರದ್ದುಗೊಳಿಸಿತ್ತು. ಬಳಿಕ ತಂಡದ ವಿಶ್ವಕಪ್ ಸಿದ್ಧತೆಗೆ ತಂಡದ ಮೇಲೆ ಪರಿಣಾಮ ಬೀರಲಿದೆ ಎಂದು ಆರೋಪಿಸಿದ್ದ ಪಿಸಿಬಿ, ಸೋಮವಾರ ಐಸಿಸಿಗೆ ಪತ್ರ ಬರೆದಿತ್ತು.

ಪಾಕ್ ತಂಡ ಇನ್ನು ಎರಡೇ ದಿನಗಳಲ್ಲಿ ಸೆ.29 ರಂದು ನ್ಯೂಜಿಲೆಂಡ್ ಎದುರು ಹೈದರಾಬಾದ್‌ನಲ್ಲಿ ಮೊದಲ ಅಭ್ಯಾಸ ಪಂದ್ಯವನ್ನಾಡಲಿದೆ. ಕಳೆದ ವಾರ ಹೈ ಕಮೀಷನರ್ ಕಚೇರಿಯಲ್ಲಿ ವೀಸಾ ಬಗ್ಗೆ ವಿಚಾರಿಸಿದಾಗ ಗೃಹ ಸಚಿವಾಲಯ ಇನ್ನೂ ನಿರಾಕ್ಷೇಪಣ ಪತ್ರ ನೀಡಿಲ್ಲ ಎನ್ನಲಾಗಿತ್ತು.

ಇದರಿಂದಾಗಿ ಪಾಕ್ ಆಟಗಾರರು ಹಾಗೂ ಸಿಬ್ಬಂದಿ ವರ್ಗ ಸೇರಿ 35 ಸದಸ್ಯರ ಪ್ರಯಾಣಕ್ಕೆ ಹೊಸದಾಗಿ ವಿಮಾನ ಪ್ರಯಾಣದ ಟಿಕೆಟ್‌ಗಳನ್ನು ಕಾಯ್ದಿರಿಸುವ ಬಗ್ಗೆ ಪಿಸಿಬಿ ಗೊಂದಲದಲ್ಲಿದೆ ಎನ್ನಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net