More

    ಸಬ್ ಜೂ. ರಾಷ್ಟ್ರೀಯ ಫುಟ್‌ಬಾಲ್ ಚಾಂಪಿಯನ್‌ಷಿಪ್: ಕರ್ನಾಟಕ ಬಾಲಕಿಯರ ತಂಡ ಚಾಂಪಿಯನ್

    ಬೆಂಗಳೂರು: ಬೆಳಗಾವಿಯಲ್ಲಿ ನಡೆದ ಸಬ್ ಜೂನಿಯರ್ ಬಾಲಕಿಯರ ರಾಷ್ಟ್ರೀಯ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಆತಿಥೇಯ ಕರ್ನಾಟಕ ತಂಡ 7-2 ರಿಂದ ದೆಹಲಿ ತಂಡವನ್ನು ಮಣಿಸಿ ಚಾಂಪಿಯನ್ ಎನಿಸಿದೆ. ಇದೇ ಮೊದಲ ಬಾರಿಗೆ ಕರ್ನಾಟಕ ಪ್ರಶಸ್ತಿ ಜಯಿಸಿದೆ.
    ಭಾನುವಾರ ನಡದ ೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಪಂದ್ಯದ ಮೊದಲಾರ್ಧದಲ್ಲಿ ಆರು ಗೋಲು ಸಿಡಿಸಿ ಪ್ರಾಬಲ್ಯ ಸಾಧಿಸಿತು. ಕರ್ನಾಟಕ ಪರ ಆದ್ಯ ಬಿಂಜೋಲಾ (43, 53ನೇ ನಿಮಿಷ), ಎಚ್. ಯಾಶಿಕ (2), ನಾಯಕಿ ಅದ್ವಿಕಾ ಕನೋಜಿಯಾ (22), ರಿಯಾನ್ನಾ ಲಿಜ್ ಜಾಕೋಬ್ (32) ಚರಿಷ್ಮಾ (35) ಗೋಲು ದಾಖಲಿಸಿದರೆ, ದೆಹಲಿಯ ವನಿಶಿಕಾ ರಾವತ್ (17) ಸ್ವಯಂ ಗೋಲು ದಾಖಲಿಸಿ ಕರ್ನಾಟಕ್ಕೆ ಉಡುಗೋರೆ ನೀಡಿದರು. ರನ್ನರ್ ಅಪ್ ದೆಹಲಿ ಪರ ಧ್ವನಿ ಬಿಡಾಡಾ (44), ನೀತಿಕಾ ನೇಗಿ (58)ಸೋಲಿನ ಅಂತರ ತಗ್ಗಿಸಿದರು.

    ರಾಜ್ಯೋತ್ಸವ ರಸಪ್ರಶ್ನೆ - 23

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts