ಮುಂಬೈ: ಟಾಲಿವುಡ್ನ ರೆಬೆಲ್ ಸ್ಟಾರ್, ಡಾರ್ಲಿಂಗ್ ಪ್ರಭಾಸ್ ಮತ್ತು ‘ಕೆಜಿಎಫ್’ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಕಾಂಬಿನೇಷನ್ನಲ್ಲಿ ಮೂಡಿಬರಲು ಸಜ್ಜಾಗಿರುವ ಬಹುನಿರೀಕ್ಷಿತ ‘ಸಲಾರ್’ ಕುರಿತು ಇದೀಗ ಹೊಸ ಮಾಹಿತಿಯೊಂದು ಲಭಿಸಿದೆ.
ಇದನ್ನೂ ಓದಿ: ಸಿಎಂ ಅಮೃತ ನಗರೋತ್ಥಾನ ಯೋಜನೆಯಲ್ಲಿ ಜಿಲ್ಲೆಗೆ 120ಕೋಟಿ ರೂ. ಅನುದಾನ
‘ಸಲಾರ್ ಭಾಗ 1 ಸೀಜ್ ಫೈರ್’ ಟೈಟಲ್ ಘೋಷಣೆಯಾದ ಮರು ದಿನದಿಂದಲೂ ಚಿತ್ರದ ಬಗ್ಗೆ ಒಂದಲ್ಲ ಒಂದು ಸುದ್ದಿ ಸಾಮಾಜಿಕ ಜಾಲತಾಣ ಸೇರಿದಂತೆ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗುತ್ತಲೇ ಇದೆ. ಇದೀಗ ಚಿತ್ರದ ಕ್ಲೈಮ್ಯಾಕ್ಸ್ ಸೀನ್ನ ಕೆಲ ಭಾಗಗಳನ್ನು ಮರು ಚಿತ್ರೀಕರಿಸಲು ನಿರ್ದೇಶಕ ಪ್ರಶಾಂತ್ ನಿರ್ಧರಿಸಿದ್ದು, ತಮ್ಮ ಪಾತ್ರವರ್ಗ ಮತ್ತು ಸಿಬ್ಬಂದಿಯನ್ನು ಮತ್ತೊಮ್ಮೆ ಕರೆಸಿದ್ದಾರೆ ಎಂದು ಇತ್ತೀಚಿನ ಸಿನಿ ವರದಿ ತಿಳಿಸಿದೆ.
ವರದಿಗಳ ಪ್ರಕಾರ, ಉನ್ನತ ಸಿನಿಮಾ ಅನುಭವ ನೀಡಲು ಹೆಚ್ಚು ಶ್ರಮಿಸುತ್ತಿರುವ ಚಿತ್ರತಂಡ ಇದೀಗ ರಿ ಶೂಟ್ ಮಾಡುವ ಮೂಲಕ ‘ಸಲಾರ್’ಗೆ ಮತ್ತಷ್ಟು ಮೆರುಗು ನೀಡಲು ಸಕಲ ತಯಾರಿಗಳನ್ನು ನಡೆಸುತ್ತಿದೆ. ಈ ಹಿಂದೆ ಸೆ.28 ರಂದು ಬಿಡುಗಡೆಗೊಳಿಸಲು ನಿಗಡಿಪಡಿಸಲಾಗಿದ್ದ ದಿನಾಂಕವನ್ನು ಚಿತ್ರ ತಯಾರಕರು ವಿಎಫ್ಎಕ್ಸ್ ಕಾರ್ಯಗಳಿಂದ ಮೂಂದೂಡಿದ್ದರು. ಸದ್ಯ ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ ಸಿನಿಮಾ ಮುಂದಿನ ವರ್ಷ ಬಿಡುಗಡೆಯಾಗಲಿದೆಯೇ? ಎಂಬ ಅನುಮಾನ ಸೃಷ್ಟಿಯಾಗಿದೆ.
ಇದನ್ನೂ ಓದಿ: ಅಲ್ಪಸಂಖ್ಯಾತರಿಗೆ ಜೆಡಿಎಸ್ ದ್ರೋಹ: ಕೆಪಿಸಿಸಿ ಸದಸ್ಯ ವಿನಯ್ ಗಾಂಧಿ ಆರೋಪ
ಚಿತ್ರದಲ್ಲಿ ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್, ಮೀನಾಕ್ಷಿ ಚೌಧರಿ, ಸರಣ್ ಶಕ್ತಿ, ಈಶ್ವರಿ ರಾವ್, ಜಗಪತಿ ಬಾಬು ಮುಂತಾದವರ ತಾರಗಣವಿದೆ. ‘ಕಾಂತಾರ’ ಸಿನಿಮಾಗಳಂತಹ ಬ್ಲಾಕ್ಬಸ್ಟರ್ ಚಿತ್ರಗಳನ್ನು ನಿರ್ಮಿಸಿದ ಹೊಂಬಾಳೆ ಫಿಲ್ಮ್ಸ್ ಈ ಚಿತ್ರದ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತುಕೊಂಡಿದೆ,(ಏಜೆನ್ಸೀಸ್).
ಲಿಂಬಾವಳಿ ನೇತೃತ್ವದಲ್ಲಿ ಸ್ವಚ್ಛ ಮಂತ್ರಾಲಯ ಅಭಿಯಾನ; ಸುಬುಧೇಂದ್ರ ತೀರ್ಥ ಶ್ರೀಗಳಿಂದ ಚಾಲನೆ