VIDEO: ಧೋನಿ ಶೈಲಿಯಲ್ಲಿ ಹೆಲಿಕಾಪ್ಟರ್ ಶಾಟ್ ಬಾರಿಸಿದ ರಶೀದ್ ಖಾನ್ ...!

1
Published on

ಬೆಂಗಳೂರು: ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ ಎಷ್ಟೋ ಆಟಗಾರರಿಗೆ ಮಾದರಿಯಾಗಿದ್ದಾರೆ. ನಾಯಕತ್ವದ ಮೂಲಕ ಇಡೀ ಕ್ರಿಕೆಟ್‌ ಲೋಕದ ಗಮನಸೆಳೆದಿದ್ದರೂ ಅವರ ಕ್ರಿಕೆಟ್‌ನ ಆರಂಭಿಕ ದಿನಗಳಲ್ಲಿ ಹೆಲಿಕಾಪ್ಟರ್ ಶಾಟ್‌ಗಳ ಮೂಲಕ ಗಮನಸೆಳೆದಿದ್ದರೂ ಧೋನಿ. ಅವರ ಮಾದರಿಯಲ್ಲೇ ಬ್ಯಾಟಿಂಗ್ ಮಾಡಲು ಹಲವು ಮಂದಿ ಯತ್ನಿಸಿದ್ದು ಉಂಟು. ಧೋನಿ ಮಾದರಿಯಲ್ಲಿ ಹೆಲಿಕಾಪ್ಟರ್ ಶಾಟ್ ಬಾರಿಸಿ ಗಮನಸೆಳೆದಿದ್ದಾರೆ ಅಫ್ಘಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್. ಸನ್‌ರೈಸರ್ಸ್‌ ಹೈದರಾಬಾದ್ ತಂಡ ರಶೀದ್ ಖಾನ್, ಬಾರಿಸುತ್ತಿರುವ ಹೆಲಿಕಾಪ್ಟರ್ ಶಾಟ್ ವಿಡಿಯೋ ತುಣುಕನ್ನು ಟ್ವೀಟ್ ಮಾಡಿದೆ.

ಕರೊನಾ ವೈರಸ್ ಭೀತಿಯಿಂದಾಗಿ ಜಾಗತಿಕ ಕ್ರೀಡಾಲೋಕವೇ ಸಂಪೂರ್ಣ ಸ್ತಬ್ಧಗೊಂಡಿತ್ತು. ಇದೀಗ ಕೆಲವು ಮಾರ್ಗಸೂಚಿಗಳೊಂದಿಗೆ ಹಂತ ಹಂತವಾಗಿ ಕ್ರೀಡಾ ಚಟುವಟಿಕೆಗಳು ಪುನರಾರಂಭಗೊಳ್ಳುತ್ತಿವೆ. ಅಫ್ಘಾನಿಸ್ತಾನದಲ್ಲೂ ಕ್ರೀಡಾ ಚಟುವಟಿಕೆಗಳು ಆರಂಭಗೊಂಡಿವೆ. ಇದರ ಬೆನ್ನಲ್ಲೇ ರಶೀದ್ ಖಾನ್ ಕಳೆದ ವಾರದಿಂದ ಅಭ್ಯಾಸ ಆರಂಭಿಸಿದ್ದಾರೆ. ಅವರ ಅಕಾಡೆಮಿಗೆ ಭೇಟಿ ನೀಡುವ ರಶೀದ್ ಖಾನ್, ಬ್ಯಾಟಿಂಗ್ ಅಭ್ಯಾಸ ಮಾಡುತ್ತಿದ್ದಾರೆ. ಈ ವೇಳೆ ಧೋನಿ ಮಾದರಿಯಲ್ಲಿ ಹೆಲಿಕಾಪ್ಟರ್ ಶಾಟ್ ಬಾರಿಸುವ ಅಭ್ಯಾಸ ಮಾಡಿದ್ದಾರೆ. ಅಂತಿಮವಾಗಿ ಇದರಲ್ಲಿ ಯಶಸ್ವಿಯೂ ಆಗಿದ್ದಾರೆ.

ಲೆಗ್ ಸ್ಪಿನ್ನರ್ ರಶೀದ್ ಖಾನ್, ಬ್ಯಾಟಿಂಗ್‌ನಲ್ಲಿ ಗಮನಾರ್ಹ ನಿರ್ವಹಣೆ ತೋರುತ್ತಾ ಬಂದಿದ್‌ಆರೆ. ಇದುವರೆಗೂ 211 ಟಿ20 ಪಂದ್ಯಗಳನ್ನಾಡಿದ್ದಾರೆ. ಜತೆಗೆ ಟಿ20 ಕ್ರಿಕೆಟ್‌ನಲ್ಲಿ ಗೆಲುವು ಕಂಡ ಆ್ಘಾನ್‌ನ ಅತಿಕಿರಿಯ ನಾಯಕ ಎನಿಸಿದ್ದಾರೆ. 2017ರಿಂದ ಐಪಿಎಲ್ ತಂಡದ ಭಾಗವಾಗಿದ್ದು, ಸನ್‌ರೈಸರ್ಸ್‌ ತಂಡದ ಪ್ರಮುಖ ಬೌಲರ್ ಆಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net