

ನವದೆಹಲಿ: ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಆಟಗಾರ. ಅದರಲ್ಲೂ ಲಾಕ್‌ಡೌನ್ ವೇಳೆಯಲ್ಲಿ ದಿನಂಪ್ರತಿ ಇನ್‌ಸ್ಟಾಗ್ರಾಂ, ಟ್ವಿಟರ್‌ನಲ್ಲಿ ಸಾಕಷ್ಟು ಪೋಸ್ಟ್‌ಗಳನ್ನು ಹಾಕುವ ಮೂಲಕ ಸುದ್ದಿಯಲ್ಲಿದ್ದರು. ಅಭಿಮಾನಿಗಳಿಗೆ ತಮ್ಮ ದೈನಂದಿನ ಚಟುವಟಿಕೆಗಳನ್ನು ತಿಳಿಸುತ್ತಿದ್ದರು. ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಮಗ ಜೋರೊವರ್ ಹಾಗೂ ಶಿಖರ್ ಧವನ್ ಮೂಗಿಗೆ ನೋಸ್ ರಿಂಗ್ಸ್ (ಮೂಗುತ್ತಿ) ತೊಟ್ಟಿರುವ ಫೋಟೋವನ್ನು ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾರೆ. ಫೋಟೋ ತೆಗೆಯುವ ವೇಳೆ ಹಿಂದೆ ನಿಂತಿದ್ದಕ್ಕೆ ಪತ್ನಿ ಆಯೀಶಾ ಅವರ ಕಾಲೆಳೆದಿದ್ದಾರೆ.
ಇದನ್ನೂ ಓದಿ: ಬಿಸಿಸಿಐಗೆ ಜನರಲ್ ಮ್ಯಾನೇಜರ್ ಬೇಕಾಗಿದ್ದಾರೆ!
ಮಗನೊಂದಿಗೆ ಸೈಕಲ್ ಹೊಡೆಯುವುದು, ಡ್ಯಾನ್ಸ್ ಮಾಡುವುದು, ದೈಹಿಕ ಕಸರತ್ತಿನಲ್ಲಿ ತೊಡಗಿರುವ ಚಿತ್ರಗಳನ್ನು ಈ ಹಿಂದೆ ಪ್ರಕಟಿಸಿದ್ದ ಶಿಖರ್ ಧವನ್, ಈ ಬಾರಿ ಮತ್ತಷ್ಟು ತಮಾಷೆಯಾಗಿ ಕಾಣಿಸಿಕೊಂಡಿದ್ದಾರೆ. ಇಬ್ಬರು ನೋಸ್ ರಿಂಗ್ಸ್ ಹಾಕಿಕೊಂಡು ಫೋಟೋ ತೆಗೆದುಕೊಳ್ಳುತ್ತಿದ್ದ ವೇಳೆ ಪತ್ನಿ ಆಯೀಶಾ, ಹಿಂದೆ ಕಾಣಿಸಿಕೊಂಡಿದ್ದಾರೆ. ಟ್ವಿಟರ್‌ನಲ್ಲಿ ಫೋಟೋ ಪ್ರಕಟಿಸಿರುವ ಶಿಖರ್ ಧವನ್, ‘ನಮ್ಮ ಹೊಸ ನೋಸ್ ರಿಂಗ್ಸ್ ಇಷ್ಟಪಡುವೆ, ಫೋಟೋಗೆ ಅಡ್ಡಿಪಡಿಸಿದ ಆಯೀಷಾಗೆ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.
ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪ್ರತಿನಿಧಿಸುತ್ತಿರುವ ಧವನ್, ಇದೀಗ ಐಪಿಎಲ್‌ನಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಇದುವರೆಗೂ ಐಪಿಎಲ್‌ನಲ್ಲಿ 150 ಪಂದ್ಯಗಳಿಂದ, 4579 ರನ್ ಸಿಡಿಸಿದ್ದಾರೆ.