2015ರ ಭಾರತ ಪ್ರವಾಸದಿಂದ ವಾಪಸ್​ ಹೋಗುವುದಾಗಿ ಎಬಿಡಿ ಬೆದರಿಕೆ ಹಾಕಿದ್ಯಾಕೆ..?

abd and zondo for web
Published on

ಬೆಂಗಳೂರು: ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಎಬಿಡಿ ವಿಲಿಯರ್ಸ್​ ಇಂದಿಗೂ ಸ್ಟಾರ್​ ವ್ಯಾಲ್ಯೂ ಉಳಿಸಿಕೊಂಡಿರುವ ಆಟಗಾರ. ಐಪಿಎಲ್​ನಲ್ಲಿ ಆರ್​ಸಿಬಿ ಪರ ಆಡುತ್ತಿರುವ ಎಬಿಡಿ ಬೆಂಗಳೂರಿನ ಜನಕ್ಕೆ ಅಚ್ಚುಮೆಚ್ಚು. ಸ್ಫೋಟಕ ಬ್ಯಾಟ್ಸ್​ಮನ್​, ಸೌಮ್ಯಸ್ವಭಾವದ ಆಟಗಾರ ಎಂದು ಗುರುತಿಸಿಕೊಂಡಿದ್ದೇ ಹೆಚ್ಚು. ಆದರೆ, 2015ರಲ್ಲಿ ದಕ್ಷಿಣ ಆಫ್ರಿಕಾ ತಂಡ ಭಾರತ ಪ್ರವಾಸಕ್ಕೆ ಬಂದಿದ್ದ ವೇಳೆ ಒಬ್ಬ ಆಟಗಾರನಿಗಾಗಿ ತಂಡದ ಆಡಳಿತ ಮಂಡಳಿಯೊಂದಿಗೆ ಮುಸುಕಿನ ಗುದ್ದಾಟ ನಡೆಸಿದರಂತೆ ಎಬಿಡಿ. ಪ್ರವಾಸದ ಏಕದಿನ ಸರಣಿಯ 5ನೇ ಹಾಗೂ ಅಂತಿಮ ಪಂದ್ಯಕ್ಕೆ ಖಾಯ ಜೊಂಡೊ ಅವರನ್ನು ಆಡಿಸಿದರೆ ಭಾರತದಿಂದ ವಾಪಸ್​ ಹೋಗುವುದಾಗಿ ಬೆದರಿಕೆ ಹಾಕಿದ್ದರಂತೆ ಅಂದಿನ ನಾಯಕ ಎಬಿಡಿ. ಇದು ದಕ್ಷಿಣ ಆಫ್ರಿಕ ಕ್ರಿಕೆಟ್​ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಕಪ್ಪು ಆಟಗಾರ ಖಾಯಾ ಜೊಂಡೊ ತಂಡದಲ್ಲಿದ್ದರೂ ಡೀನ್​ ಎಲ್ಗರ್​ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಬೇಕು ಎಂಬುದು ಎಡಿಬಿ ಹಠವಾಗಿತ್ತು. 5ನೇ ಏಕದಿನ ಪಂದ್ಯಕ್ಕೆ ತಂಡ ಅಂತಿಮ ಗೊಳಿಸುವ ವೇಳೆ ನನ್ನ ವಿರುದ್ಧವಾಗಿ ನಡೆದರೆ ಸುಮ್ಮನಿರುವುದಿಲ್ಲ ಎಂದು ಹೇಳಿದ್ದರಂತೆ ಡಿವಿಲಿಯರ್ಸ್​. ಸರಣಿ ಮಧ್ಯದಲ್ಲಿ ಜೆಪಿ ಡುಮಿನಿ ಗಾಯಗೊಂಡಿದ್ದರಿಂದ ಡೀನ್​ ಎಲ್ಗರ್​ ತಂಡ ಕೂಡಿಕೊಂಡಿದ್ದರು. ಆದರೆ, ಖಾಯಾ ಜೊಂಡೊ ಸರಣಿಯುದ್ದಕ್ಕೂ ತಂಡದಲ್ಲಿದ್ದರೂ ಎಬಿಡಿ ಮಾತ್ರ ಅವಕಾಶ ನೀಡಲಿಲ್ಲ. ಇದರಿಂದ ಖಾಯಾ ಸರಣಿಯುದ್ದಕ್ಕೂ ಬೆಂಚು ಕಾಯಬೇಕಾಯಿತು.

ಸರಣಿ ಮುಕ್ತಾಯದ ಬಳಿಕ ಕಪ್ಟು ಆಟಗಾರರ ಒಕ್ಕೂಟ ಜೊಂಡೊ ಪ್ರಕರಣವನ್ನು ಬಲವಾಗಿ ಖಂಡಿಸಿತ್ತು. ಕೇವಲ ವಾಟರ್​ ಬಾಯ್​ ಆಗಿ ಕಾರ್ಯನಿರ್ವಹಿಸಬೇಕಾಯಿತು ಎಂದು ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಅಶ್ವೆಲ್​ ಪ್ರಿನ್ಸ್​ ಟ್ವೀಟ್​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net