ಸುನೀಲ್​ ಗಾವಸ್ಕರ್​ ಟೆಸ್ಟ್​ ಜೀವನಕ್ಕೆ 50ರ ಸಂಭ್ರಮ, ಎಂಸಿಎಯಿಂದ ವಿಶೇಷ ಕಾರ್ಯಕ್ರಮ...!

sunil gavaskar overall for web
Published on

ಮುಂಬೈ: ದಿಗ್ಗಜ ಸುನೀಲ್​ ಗಾವಸ್ಕರ್​ ಭಾರತೀಯ ಕ್ರಿಕೆಟ್​ ಇತಿಹಾಸದಲ್ಲಿ ಕಂಡ ಶ್ರೇಷ್ಠ ಬ್ಯಾಟ್ಸ್​ಮನ್​ಗಳಲ್ಲಿ ಒಬ್ಬರು. 70, 80ರ ದಶಕದಲ್ಲಿ ಭಾರತ ತಂಡಕ್ಕೆ ಬೆನ್ನೆಲುಬಾಗಿದ್ದವರು ಗಾವಸ್ಕರ್​. ಮುಂದಿನ ವರ್ಷದ ಮಾರ್ಚ್​ ತಿಂಗಳಿಗೆ ಗಾವಸ್ಕರ್​ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿ 50 ವರ್ಷ ಪೂರೈಸುತ್ತಿದೆ. 1971ರಲ್ಲಿ ಪೋರ್ಟ್​ ಅಫ್ ಸ್ಪೇನ್​ನಲ್ಲಿ ವೆಸ್ಟ್​ ಇಂಡೀಸ್​ ವಿರುದ್ಧ ಮೊದಲ ಪಂದ್ಯವಾಡಿದ್ದರು. ದಿಗ್ಗಜ ಆಟಗಾರನ ಟೆಸ್ಟ್​ ಜೀವನದ ಸುವರ್ಣ ಮಹೋತ್ಸವದ ಸಂಭ್ರಮಕ್ಕೆ ಮುಂಬೈ ಕ್ರಿಕೆಟ್​ ಸಂಸ್ಥೆ (ಎಂಸಿಎ) ಸನ್ನದ್ಧವಾಗಿದೆ.

71 ವರ್ಷದ ಸುನೀಲ್​ ಗಾವಸ್ಕರ್​ ಟೆಸ್ಟ್​ ಕ್ರಿಕೆಟ್​ನಲ್ಲಿ 10 ಸಾವಿರ ರನ್​ ಪೂರೈಸಿದ ವಿಶ್ವದ ಮೊದಲ ಬ್ಯಾಟ್ಸ್​ಮನ್​. 125 ಟೆಸ್ಟ್​ ಪಂದ್ಯಗಳಿಂದ 34 ಶತಕ ಸೇರಿದಂತೆ 10122 ರನ್​ ಬಾರಿಸಿದ್ದಾರೆ. 108 ಏಕದಿನ ಪಂದ್ಯಗಳಿಂದ ಏಕೈಕ ಶತಕದೊಂದಿಗೆ 3092 ರನ್​ ಕಲೆಹಾಕಿದ್ದಾರೆ. 2021ರ ಮಾರ್ಚ್​ 6ನೇ ತಾರೀಕಿಗೆ ಗಾವಸ್ಕರ್​ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿ 50 ವರ್ಷವಾಗುತ್ತದೆ. ಈ ಸಂದರ್ಭವನ್ನು ವಿಶೇಷವಾಗಿ ಆಚರಿಸಲಾಗುವುದು. ಈ ಕುರಿತು ಆಗಸ್ಟ್​ 18 ರಂದು ನಡೆಯಲಿರುವ ವಾರ್ಷಿಕ ಮಹಾ ಸಭೆಯಲ್ಲಿ ಈ ಕುರಿತು ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ಎಂಸಿಎ ಸದಸ್ಯರೊಬ್ಬರು ತಿಳಿಸಿದ್ದಾರೆ.

ಮುಂಬೈನಲ್ಲಿರುವ ವಾಂಖೆಡೆ ಸ್ಟೇಡಿಯಂನಲ್ಲಿ ಕ್ರಿಕೆಟ್​ ಮ್ಯೂಸಿಯಂ ನಿಮಿರ್ಸಲು ಯೋಜನೆ ರೂಪಿಸುತ್ತಿರುವುದಾಗಿ ಎಂಸಿಎ ಅಪೆಕ್ಸ್​ ಕೌನ್ಸಿಲ್​ ಕೌನ್ಸಿಲ್​ ಸದಸ್ಯರೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net