ಸೌರವ್​ ಗಂಗೂಲಿಗೆ ಕರೊನಾ ಪಾಸಿಟಿವ್​, ನಿನ್ನೆ ರಾತ್ರಿಯೇ ಆಸ್ಪತ್ರೆಗೆ ದಾಖಲು

Sourav Ganguly
Published on

ಕೊಲ್ಕತ್ತಾ: ಬಿಸಿಸಿಐ ಅಧ್ಯಕ್ಷ, ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ಸೌರವ್​ ಗಂಗೂಲಿ ಅವರಿಗೆ ಕರೊನಾ ಸೋಂಕು ತಗುಲಿದ್ದು, ಸೋಮವಾರ ರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

49 ವರ್ಷ ವಯಸ್ಸಿನ ಗಂಗೂಲಿ ಅವರು ಈಗಾಗಲೇ ಕರೊನಾ ವಾಕ್ಸಿನೇಷನ್​ ಪಡೆದಿದ್ದಾರೆ. ಸೋಮವಾರ ಕರೊನಾ ಟೆಸ್ಟ್​ ಮಾಡಿಸಿದಾಗ ವರದಿಯು ಪಾಸಿಟಿವ್ ಬಂದಿದ್ದು, ಮುಂಜಾಗ್ರತಾ ಕ್ರಮವಾಗಿ ಕೊಲ್ಕತ್ತಾ ನಗರದ ವುಡ್​ಲ್ಯಾಂಡ್​ ನರ್ಸಿಂಗ್ ಹೋಂಗೆ ದಾಖಲಿಸಲಾಗಿದೆ ಎಂದು ಬಿಸಿಸಿಐ ಮೂಲಗಳು ಮಂಗಳವಾರ ತಿಳಿವೆ.

ಈ ವರ್ಷದ ಆರಂಭದಲ್ಲಿ ಸೌರವ್​ ಗಂಗೂಲಿ ಅವರಿಗೆ ಲಘು ಹೃದಯಾಘಾತವಾಗಿತ್ತು. ಚಿಕಿತ್ಸೆ ಪಡೆದು ಗುಣಮುಖರಾದ ಗಂಗೂಲಿ, ಆಂಜಿಯೋಪ್ಲಾಸ್ಟಿಗೆ ಒಳಗಾಗುತ್ತಿದ್ದಾರೆ. ಇದೀಗ ಮಹಾಮಾರಿ ಕರೊನಾ ಸೋಂಕು ತಗುಲಿರುವ ವಿಷಯ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಬೇಗ ಗುಣಮುಖವಾಗಿ ಬನ್ನಿ ದಾದಾ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net