

ಬೆಂಗಳೂರು: ಕರೊನಾ ಮತ್ತು ಒಮಿಕ್ರಾನ್ ಸೋಂಕು ಹರಡುವಿಕೆ ನಿಯಂತ್ರಿಸಲು ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಇಂದಿನಿಂದಲೇ ನೈಟ್ ಕರ್ಫ್ಯೂ ಜಾರಿಯಾಗಲಿದೆ. ಒಂದೆಡೆ ಜನರನ್ನು ಸೇರಿಸಿ ಹೊಸ ವರ್ಷಾಚರಣೆಯನ್ನೂ ಮಾಡುವಂತಿಲ್ಲ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ನೈಟ್ ಕರ್ಫ್ಯೂ ನಿಯಮ ಜಾರಿಯಾಗಲಿದ್ದು, ಡಿ.28ರಿಂದ 10 ದಿನಗಳ ಕಾಲ ಟೈಟ್ ರೂಲ್ಸ್ ಇರಲಿದೆ. ಈ ವೇಳೆ ಯಾರಾದರೂ ನಿಯಮ ಉಲ್ಲಂಘಿಸಿದ್ರೆ ಅಂತಹವರ ವಿರುದ್ಧ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ (ಎನ್ಡಿಎಂಎ) ಅಡಿ ಮೊಕದ್ದಮೆ ದಾಖಲಿಸಲಾಗುತ್ತೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಎಚ್ಚರಿಕೆ ನೀಡಿದ್ದಾರೆ.
ಸರ್ಕಾರ ಆದೇಶದಲ್ಲಿ ವಿನಾಯಿತಿ ನೀಡಿರುವವರಿಗೆ ಓಡಾಟ ಮಾಡಲು ಅವಕಾಶವಿರುತ್ತದೆ. ಬಸ್, ಕ್ಯಾಬ್ ಸೇವೆಯೂ ಇರಲಿದೆ. ಆದರೆ, ಎಲ್ಲ ಭಾಗಗಳಲ್ಲೂ ನಾಕಾಬಂದಿ ಮಾಡಲಾಗುತ್ತದೆ. ಪೊಲೀಸರು ಎಲ್ಲೆಡೆ ಗಸ್ತು ತಿರುಗಲಿದ್ದಾರೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕೇಸ್ ದಾಖಲಿಸುತ್ತಾರೆ. ಪಬ್, ಬಾರ್ ಆ್ಯಂಡ್ ರೆಸ್ಟೋರೆಂಟ್ಗಳು ರಾತ್ರಿ 10 ಗಂಟೆಗೆ ಬಂದ್ ಮಾಡಬೇಕು. ಹೊಸ ವರ್ಷದ ಸಂಭ್ರಮಾಚರಣೆಗಾಗಿ ಸಾರ್ವಜನಿಕ ಸ್ಥಳದಲ್ಲಿ ಜನ ಸೇರುವಂತಿಲ್ಲ. ಆಸ್ಪತ್ರೆಗೆ ಹೋಗುವವರು ದಾಖಲೆ ತೋರಿಸಿ ಹೋಗಬಹುದು. ಪ್ರಯಾಣಿಕರು ಟಿಕೆಟ್ ತೋರಿಸಬೇಕು. ಈ ಬಾರಿ ಯಾವುದೇ ಪಾಸ್ ಕೊಡುವುದಿಲ್ಲವಾದರೂ ಕೆಲವರ ಓಡಾಟಕ್ಕೆ ವಿನಾಯಿತಿ ಇದೆ. ಆ ಮಾಹಿತಿ ಇಲ್ಲಿದೆ.
ನೈಟ್ ಕರ್ಫ್ಯೂ ವೇಳೆ ಯಾರಿಗೆಲ್ಲ ವಿನಾಯಿತಿ?