ಮನೆ ಅಂಗಳದಲ್ಲೇ ಅಪ್ಪು ಪುತ್ಥಳಿ ನಿರ್ಮಿಸಿಕೊಂಡ ಅಭಿಮಾನಿ! ಭಾವುಕರಾದ ಗ್ರಾಮಸ್ಥರು

New Project (4)
Published on

ವಿಜಯಪುರ: ಅಭಿಮಾನಿಯೊಬ್ಬರು ತನ್ನ ಮನೆಯಂಗಳದಲ್ಲೇ ನಟ ಪುನೀತ್ ರಾಜ್‍ಕುಮಾರ್ ಅವರ ಪುತ್ಥಳಿ ನಿರ್ಮಿಸಿಕೊಂಡು ಅಭಿಮಾನ ಮೆರೆದಿದ್ದಾರೆ.

ವಿಜಯ ನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಸಿದ್ದಾಪುರ ವಡ್ಡರಟ್ಟಿಯ ಪೂಜಾರಿ ರಾಮಜ್ಜರ ವಂಶದ ಸಮಾಜ ಸೇವಕ ಆರ್.ಟಿ.ನಾಗರಾಜ್ ಹಾಗೂ ಮಲ್ಲಮ್ಮ ದಂಪತಿ ಇಬ್ಬರೂ ಪುನೀತ್​ರ ಕಟ್ಟಾ ಅಭಿಮಾನಿಗಳು. ಅಪ್ಪು ಮೇಲಿನ ಅಭಿಮಾನಕ್ಕೆ ತಮ್ಮ ಮನೆಯಂಗಳದಲ್ಲೇ ಪುತ್ಥಳಿ ಪ್ರತಿಷ್ಠಾಪಿಸಿದ್ದಾರೆ. ಇದನ್ನು ಕಂದ ಗ್ರಾಮಸ್ಥರು ಅಪ್ಪು ನೆನೆದು ಮತ್ತಷ್ಟು ಭಾವುಕರಾದರು.

ಪುನೀತ್ ರಾಜ್​ಕುಮಾರ್​ರ ಪುತ್ಥಳಿಯನ್ನು ಮಾಜಿ ಶಾಸಕ ಕೆ.ವಿ.ರವೀಂದ್ರನಾಥ್ ಬಾಬು, ಕೆಪಿಸಿಸಿ ಸದಸ್ಯ ಲೋಕೇಶ್ ವಿ. ನಾಯಕ ನೇತೃತ್ವದಲ್ಲಿ ಅನಾವರಣ ಮಾಡಲಾಗಿದೆ.

ಕೋಟ್ಯಂತರ ಕನ್ನಡಿಗರ ಮನೆದಲ್ಲಿ ರಾಜಕುಮಾರನಂತೆ ಮೆರೆದ ಪ್ರೀತಿಯ ಅಪ್ಪು ನಮ್ಮೊಂದಿಗೆ ಇಲ್ಲವಾದರು ಅವರ ನೆನಪು ಮಾತ್ರ ಎಂದಿಗೂ ಅಜರಾಮರ. ಪುನೀತ್​ ನೆನಪಲ್ಲಿ ಲೆಕ್ಕವಿಲ್ಲದಷ್ಟು ಅಭಿಮಾನಿಗಳು ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಲೇ ಇದ್ದಾರೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಅಭಿಮಾನ ಮೆರೆಯುತ್ತಲೇ ಇದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net