ಕಾಮನ್ವೆಲ್ತ್ ಗೇಮ್ಸ್​: ಚಿನ್ನದ ಪದಕ ಗೆದ್ದ ಪಿ.ವಿ.ಸಿಂಧು

pv sindhu
Published on

ಬರ್ಮಿಂಗ್​ಹ್ಯಾಂ​: 22ನೇ ಆವೃತ್ತಿಯ ಕಾಮನ್ವೆಲ್ತ್​ ಕ್ರೀಡಾಕೂಟದ ಅಂತಿಮ ದಿನವಾದ ಇಂದು ಕೂಡ ಭಾರತ ಪದಕಗಳ ಬೇಟೆಯಾಡುತ್ತಿದ್ದು, ಬ್ಯಾಡ್ಮಿಂಟನ್​​ ಸಿಂಗಲ್ಸ್​ ಸ್ಪರ್ಧೆಯಲ್ಲಿ ಪಿ.ವಿ.ಸಿಂಧು ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.

ಕೆನಡಾದ ಮಿಶೈಲ್​ ವಿರುದ್ಧ ಸೆಣಸಾಡಿದ ಸಿಂಧು, ಮೊದಲ ಸುತ್ತಿನಲ್ಲಿ 21-15, 2ನೇ ಸುತ್ತಿನಲ್ಲಿ 21-13 ಅಂತರದಲ್ಲಿ ಜಯಭೇರಿ ಬಾರಿಸಿದರು.

22ನೇ ಆವೃತ್ತಿಯ ಕಾಮನ್ವೆಲ್ತ್​ ಗೇಮ್ಸ್​ನ ಸಮಾರೋಪ ಸಮಾರಂಭ ಇಂದು(ಸೋಮವಾರ) ರಾತ್ರಿ ಬರ್ಮಿಂಗ್​​ಹ್ಯಾಂನ ಅಲೆಕ್ಸಾಂಡರ್​ ಸ್ಟೇಡಿಯಂನಲ್ಲಿ ನಡೆಯಲಿದೆ.

ಕಾಮನ್ವೆಲ್ತ್​ ಗೇಮ್ಸ್​ನಲ್ಲಿ ಭಾರತದ ಕ್ರೀಡಾಪಟುಗಳು ಭಾನುವಾರವೂ ಭರ್ಜರಿ ಬಂಗಾರದ ಪದಕಗಳನ್ನು ಬೇಟೆಯಾಡಿದ್ದರು. ಬಾಕ್ಸಿಂಗ್​ನಲ್ಲಿ 3, ಪ್ಯಾರಾ ಟೇಬಲ್​ ಟೆನಿಸ್​ ಮತ್ತು ಅಥ್ಲೆಟಿಕ್ಸ್​ನಲ್ಲಿ ತಲಾ 1 ಚಿನ್ನದ ಸಂಭ್ರಮ ಕಂಡಿತ್ತು. ಜತೆಗೆ 2 ಬೆಳ್ಳಿ, 5 ಕಂಚು ಒಲಿಸಿಕೊಂಡಿತ್ತು. ಇದುವರೆಗೆ ಒಟ್ಟಾರೆ 51 (18 ಚಿನ್ನ, 13 ಬೆಳ್ಳಿ, 20 ಕಂಚು) ಪದಕ ಗೆದ್ದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net