More

    ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ ಮಾಡಂಗಿಲ್ಲ: ಜಮೀರ್​

    ಬೆಂಗಳೂರು: ಚಾಮರಾಜಪೇಟೆ ಆಟದ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅವಕಾಶ ಇಲ್ಲ ಎಂದು ಶಾಸಕ ಜಮೀರ್ ಅಹ್ಮದ್​ ಖಾನ್​ ಹೇಳಿದ್ದು, ಹಿಂದುಪರ ಸಂಘಟನೆಗಳ ಆಕ್ರೋಶ ಭುಗಿಲೆದ್ದಿದೆ. ಜಮೀರ್​ರ ಮಾತು ಚಾಮರಾಜಪೇಟೆ ಮೈದಾನದ ವಿವಾದದ ಬೆಂಕಿಗೆ ತುಪ್ಪ ಸುರಿದಿದೆ.

    ಇದನ್ನು ತೀವ್ರವಾಗಿ ಖಂಡಿಸಿರುವ ವಿಶ್ವ ಸನಾತನ ಪರಿಷತ್​ ಅಧ್ಯಕ್ಷ ಭಾಸ್ಕರ್​, ಜಮೀರ್​ರ ಮದ್ವೆ ಸಂದರ್ಭದಲ್ಲಿ ರಾಜ್ಯ ಸರ್ಕಾರ ಏನಾದರೂ ಇವರಿಗೆ ವರದಕ್ಷಿಣೆಯಾಗಿ ಚಾಮರಾಜಪೇಟೆ ಮೈದಾನವನ್ನು ಕೊಟ್ಟಿತ್ತಾ? ಎಂದು ಪ್ರಶ್ನಿಸಿದ್ದಾರೆ.

    ದಿಗ್ವಿಜಯ ನ್ಯೂಸ್​ ಜತೆ ಮಾತನಾಡಿದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್​ ಮುತಾಲಿಕ್​, ಜಮೀರ್​ ಹೇಳಿಕೆಯನ್ನ ಖಂಡಿಸಿದ್ದಾರೆ. ಜಮೀರ್​ ಮುಸ್ಲಿಮರ ಎಂಎಲ್​ಎ ಅಲ್ಲ. ಅವರು ಇಡೀ ಕ್ಷೇತ್ರದ ಶಾಸಕ. ಚಾಮರಾಜಪೇಟೆ ಮಯದಾನ ಅವರ ಪಿತ್ರಾರ್ಜಿತ ಆಸ್ತಿಯಲ್ಲ, ಅದು ಸರ್ಕಾರದ ಆಸ್ತಿ ಎಂದಿದ್ದಾರೆ. ನೀವು ಈ ಮೈದಾನದಲ್ಲಿ ಪ್ರಾರ್ಥನೆ ಮಾಡಬಹುದು. ಆದರೆ ಗಣೇಶ ಹಬ್ಬವನ್ನು ನಾವು ಆಚರಿಸಬಾರದು ಅನ್ನೋದು ಸರಿಯೇ? ಧಾರ್ಮಿಕ ಆಚರಣೆಗೆ ಅವಕಾಶ ಇಲ್ಲ ಅಂದ್ರೆ, ಅಲ್ಲಿ ನಮಾಜ್​ ಏಕೆ ಮಾಡ್ತೀರಿ? ನಮಾಜ್​ಗೆ ಅವಕಾಶ ಇದೆ ಅಂದ ಮೇಲೆ ಗಣೇಶೋತ್ಸವಕ್ಕೂ ಅವಕಾಶ ಇದೆ. ನಾವು ಗಣೇಶೋತ್ಸವ ಮಾಡೇ ಮಾಡ್ತೀವಿ ಎಂದಿದ್ದಾರೆ.

    ಜಮೀರ್​ ಹೇಳಿದ್ದೇನು?: 75ನೇ ಸ್ವಾತಂತ್ರ್ಯಅಮೃತ ಮಹೋತ್ಸವ ಇದೆ. ಈ ವರ್ಷದಿಂದ ಚಾಮರಾಜಪೇಟೆ ಮೈದಾನದಲ್ಲಿ ಎಲ್ಲರೂ ಸೇರಿಕೊಂಡು ಭಾರತದ ಧ್ವಜಾರೋಹಣ ಮಾಡ್ತೀವಿ. ನವೆಂಬರ್​ 1, ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆಯನ್ನೂ ಇನ್ಮುಂದೆ ಇಲ್ಲಿಯೇ ಮಾಡಲಾಗುತ್ತೆ. ಆದರೆ, ಗಣೇಶೋತ್ಸವ ಮಾಡಂಗಿಲ್ಲ ಎಂದು ಜಮೀರ್​​ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದರು. ನಮಾಜ್​ ಮಾಡಬಹುದು ಅಂದ ಮೇಲೆ ಗಣೇಶೋತ್ಸವಕ್ಕೆ ಏಕೆ ಅವಕಾಶವಿಲ್ಲ ಎಂದು ಹಿಂದುಪರ ಸಂಘಟನೆಗಳು ಗರಂ ಆಗಿವೆ.

    ಅತ್ತ ಚಾಮರಾಜಪೇಟೆ ಆಟದ ಮೈದಾನವನ್ನು ಕಂದಾಯ ಇಲಾಖೆಯ ಸ್ವತ್ತು ಎಂದು ಘೋಷಣೆ ಮಾಡಿರುವ ಬಿಬಿಎಂಪಿ, ಮೈದಾನದ ಸುಪರ್ದಿಯನ್ನು ಪಾಲಿಕೆಗೆ ನೀಡುವಂತೆ ಮನವಿ ಸಲ್ಲಿಸಲು ಸಿದ್ಧತೆ ಮಾಡುತ್ತಿದೆ. ಹಲವು ದಿನಗಳಿಂದ ಚಾಮರಾಜಪೇಟೆ ಮೈದಾನದ ಮಾಲೀಕತ್ವದ ವಿಚಾರ ಮುನ್ನೆಲೆಗೆ ಬಂದಿದ್ದು, ವಕ್ಫ್​ ಮಂಡಳಿಯು ತನ್ನ ಆಸ್ತಿಯೆಂದು ಹೇಳಿಕೊಂಡಿತ್ತು. ಈ ಬಗ್ಗೆ ಸೂಕ್ತ ದಾಖಲೆಗಳನ್ನು ಸಲ್ಲಿಸಿದೆ ವಿಫಲ ಆಗಿದ್ದರಿಂದ ಕಂದಾಯ ಇಲಾಖೆಯ ಆಸ್ತಿಯೆಂದು ಬಿಬಿಎಂಪಿ ಜಂಟಿ ಆಯುಕ್ತರ ಅರೆನ್ಯಾಯಿಕ ಪ್ರಾಧಿಕಾರ ತೀರ್ಮಾನಿಸಿದೆ. ಆದರೆ, ಮೈದಾನದಲ್ಲಿ ಪ್ರಾರ್ಥನೆ ವಿಚಾರವಾಗಿ 1955ರಿಂದ ಕೆಳಹಂತದಲ್ಲಿ ಆರಂಭವಾದ ವ್ಯಾಜ್ಯ ಸುಪ್ರೀಂ ಕೋರ್ಟ್​ಗೆ ತಲುಪಿ 1964ರಲ್ಲಿ ಪ್ರಾರ್ಥನೆ ನಿರ್ಬಂಧಿಸದಂತೆ ತೀರ್ಪು ನೀಡಲಾಗಿದೆ. ಈಗ ಮೈದಾನದಲ್ಲಿ ವಾರ್ಷಕ್ಕೆರಡು ಬಾರಿ ಪ್ರಾರ್ಥನೆ ಮತ್ತು ಮಕ್ಕಳ ಆಟವಾಡುವುದು ಸೇರಿ ವಿವಿಧ ಕಾರ್ಯ ಚಟುವಟಿಕೆಗಳು ನಡೆಯುತ್ತಿದ್ದು, ನಿಯಂತ್ರಣ ಮತ್ತು ನಿರ್ವಹಣೆ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಪಾಲಿಕೆ ಸುಪರ್ದಿಕೆಗೆ ಮೈದಾನ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆಯುವ ಸಾಧ್ಯತೆಯಿದೆ.

    ಖಾಸಗಿ ವಿಡಿಯೋ ಲೀಕ್ ಆಗಿದ್ದು ಹೇಗೆ? ಬಿಗ್​ ಬಾಸ್​ ಮನೆಯಲ್ಲಿ ಕಣ್ಣೀರಿಡುತ್ತಲೇ ವಿವರಿಸಿದ ಸೋನು

    ಬುದ್ಧಿಮಾಂದ್ಯ ಎಂಬ ಕಾರಣಕ್ಕೆ ತನ್ನ ಮಗುವನ್ನೇ ಕೊಂದ ವೈದ್ಯೆ ಪ್ರಕರಣ: ತಂದೆಯ ಹೇಳಿಕೆ ಕೇಳಿದ್ರೆ ಮನಸ್ಸು ಭಾರ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts