More

    ಖಾಸಗಿ ವಿಡಿಯೋ ಲೀಕ್ ಆಗಿದ್ದು ಹೇಗೆ? ಬಿಗ್​ ಬಾಸ್​ ಮನೆಯಲ್ಲಿ ಕಣ್ಣೀರಿಡುತ್ತಲೇ ವಿವರಿಸಿದ ಸೋನು

    ಬೆಂಗಳೂರು: ‘ಬಿಗ್​ ಬಾಸ್​ ಒಟಿಟಿ ಕನ್ನಡ’ದ ಮೊದಲ ಸೀಸನ್​ನಲ್ಲಿ ಸೋನು ಶ್ರೀನಿವಾಸ ಗೌಡ ಕೂಡ ಇದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಫೇಮಸ್​ ಆಗಿರುವ ಹಾಗೂ ಒಂದಲ್ಲ ಒಂದು ವಿವಾದಗಳಿಂದ ಸದಾ ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗುವ ಸೋನು, ಬಿಗ್​ಬಾಸ್​ ಒಟಿಟಿ ಕನ್ನಡದ ಎರಡನೇ ಸ್ಪರ್ಧಿಯಾಗಿ ದೊಡ್ಮನೆಯನ್ನ ಪ್ರವೇಶಿಸಿದ್ದಾರೆ. ಒಟ್ಟು 16 ಸ್ಪರ್ಧಿಗಳಿದ್ದು ಅಸಲಿ ಆಟ ಶುರುವಾಗಿದೆ. ಬಿಗ್​ಬಾಸ್​ಗೆ ಸೋನು ಆಯ್ಕೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ಟಿಕ್​ಟಾಕ್​ ಸ್ಟಾರ್​ ಸೋನು ಅವರ ಖಾಸಗಿ ವಿಡಿಯೋ ವೈರಲ್​ ಆಗಿ ಜಾಲತಾಣದಲ್ಲಿ ಅಲ್ಲೋಲ-ಕಲ್ಲೋಲವನ್ನೇ ಸೃಷ್ಟಿಸಿತ್ತು. ಇದೇ ವಿಚಾರ ಈಗಲೂ ಚರ್ಚೆಯಾಗುತ್ತಲೇ ಇದೆ. ಆ ಘಟನೆ ಕುರಿತು ಬಿಗ್​ ಬಾಸ್​ ಮನೆಯಲ್ಲಿ ಅಳುತ್ತಲೇ ಮಾತನಾಡಿರುವ ಸೋನು, ಹೇಗೆ ಲೀಕ್​ ಆಯ್ತೆಂದು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

    ಬಿಗ್​ಬಾಸ್​ ಮನೆಗೆ ಸೋನು ಆಯ್ಕೆಯಾಗಿದ್ದಾರೆ ಎಂಬ ವಿಷಯ ಕೇಳುತ್ತಿದ್ದಂತೆ ಬಹುತೇಕ ನೆಟ್ಟಿಗರು ಆಕ್ರೋಶ ಹೊರಹಾಕಿದ್ದರು. ಆಯ್ಕೆ ತಂಡಕ್ಕೆ ದೊಡ್ಡ ನಮಸ್ಕಾರ ಎಂದೂ ಮೂದಲಿಸಿದ್ದರು. ಅಶ್ಲೀಲವಾಗಿ ನಡೆದುಕೊಳ್ಳುವ ಸೋನುಳನ್ನು ಬಿಗ್​ಬಾಸ್​ ಮನೆಯೊಳಗೆ ಕಳುಹಿಸಿ ಕಾರ್ಯಕ್ರಮ ಜನಪ್ರಿಯತೆಯನ್ನು ಮಣ್ಣುಪಾಲು ಮಾಡಿಕೊಂಡಿರಿ ಎಂದು ಅಸಮಾಧಾನ ಹೊರಹಾಕಿದ್ದರು. ಬಿಗ್​ಬಾಸ್​ಗೆ ಅವಳು ಅರ್ಹ ಸ್ಪರ್ಧಿಯಲ್ಲ. ನಿಜವಾಗಿಯೂ ತುಂಬಾ ನಿರಾಶದಾಯಕ ಆಯ್ಕೆ ಎಂದು ಕಮೆಂಟ್​ ಮಾಡಿದ್ದರು. ಇನ್ನೊಂದಿಷ್ಟು ಮಂದಿ ಸೋನು ಪರ ಬ್ಯಾಟ್​ ಬೀಸಿದ್ದರು. ಸೋನು ವಿವಾದಗಳು ಏನೇ ಇರಬಹುದು. ಆದರೆ, ಬಿಗ್​ಬಾಸ್​ನಲ್ಲಿ ಒಳ್ಳೆಯ ಮನರಂಜನೆಯನ್ನು ನೀಡುತ್ತಾಳೆ ಎಂಬ ಭರವಸೆ ಇದೆ. ಅವಳಿಗೂ ಒಂದು ವೇದಿಕೆ ಅಥವಾ ಅವಕಾಶ ಕಲ್ಪಿಸಿ ಕೊಡುವುದರಲ್ಲಿ ತಪ್ಪೇನಿಲ್ಲ ಎಂದಿದ್ದರು.

    ಸೋನು ಆಯ್ಕೆ ವಿರುದ್ಧ ನೆಟ್ಟಿಗರು ಗರಂ ಆಗಲು ಕಾರಣ ಆ ವಿಡಿಯೋ ಲೀಕ್​ ಆಗಿದ್ದ ಘಟನೆ. ಕೆಲ ತಿಂಗಳ ಹಿಂದೆ ಸೋನು ಅವರ ಖಾಸಗಿ ವಿಡಿಯೋ ಲೀಕ್​ ಆಗಿತ್ತು. ಇದು ಟ್ರೋಲಿಗರಿಗೆ ಆಹಾರವೂ ಆಗಿತ್ತು. ‘ಇದಕ್ಕೆ ಕಾರಣ ಬಾಯ್​ ಫ್ರೆಂಡ್’. ಇಲ್ಲಿ ಯಾರೂ ಸಾಚಾ ಅಲ್ಲ, ಎಲ್ಲರೂ ಇದನ್ನು ಮಾಡಿಕೊಂಡಿರುತ್ತಾರೆ. ಆದರೆ ನನ್ನದು ಹೊರಗೆ ಬಂತು’ ಎಂದು ಸೋನು ಕಣ್ಣೀರು ಹಾಕಿದ್ದಾರೆ.

    ಕಹಿ ಘಟನೆಯನ್ನು ನೆನಪಿಸಿಕೊಂಡು ಕಣ್ಣೀರು ಹಾಕಿದ ಸೋನು, ನನಗೆ ಒಬ್ಬ ಬಾಯ್​ ಫ್ರೆಂಡ್​ ಇದ್ದ. ಆತ ನಮ್ಮ ಜಾತಿಯವನು. ಆತ ಮೊದಲಿಂದಲೂ ನನಗೆ ಗೊತ್ತಿದ್ದವ. ಮದುವೆ ಆಗಲು ನಿರ್ಧರಿಸಿದ್ದೆವು. ಈ ವಿಚಾರವನ್ನು ನಾನು ನನ್ನ ಅಮ್ಮನಿಗೂ ಹೇಳಿದ್ದೆ. ಒಮ್ಮೆ ವಿಡಿಯೋ ಕಾಲ್​ ಮಾಡು ಅಂದ. ಹೇಗೂ ಮದ್ವೆ ಆಗುವ ಹುಡುಗ ಅಲ್ವಾ ಅಂತ ಕಾಲ್​ ಮಾಡಿ ಹಾಗೆ ಮಾಡಿದೆ. ಅದನ್ನು ಆತ ನನಗೆ ಗೊತ್ತಿಲ್ಲದಂತೆ ರೆಕಾರ್ಡ್​ ಮಾಡಿಕೊಂಡಿದ್ದ. ವಾರದ ಬಳಿಕ ಆತನ ವರ್ತನೆ ಬದಲಾಗಿತ್ತು. ರೂಡ್​ ಆಗಿ ನಡೆದುಕೊಳ್ಳಲು ಶುರು ಮಾಡಿದ್ದ. ಆ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್​ ಮೇಲ್​ ಮಾಡುತ್ತಿದ್ದ. ಕೂಡಲೇ ನಾನು ಅಮ್ಮನ ಬಳಿ ಎಲ್ಲವನ್ನೂ ಹೇಳಿಕೊಂಡು ಕ್ಷಮೆ ಕೇಳಿದ್ದೆ…’ ಎನ್ನುತ್ತಲೇ ಸೋನು ಬಿಕ್ಕಿಬಿಕ್ಕಿ ಅತ್ತಿದ್ದಾರೆ.

    ಅಳುತ್ತಲೇ ಮಾತು ಮುಂದುವರಿಸಿದ ಸೋನು, ‘ಒಂದೂವರೆ ವರ್ಷದ ಬಳಿಕ ಆತ ನನಗೆ ಮೆಸೇಜ್​ ಮಾಡಿ ಹೆದರಿಸಿದ್ದ. ವಿಡಿಯೋ ಲೀಕ್​ ಮಾಡ್ತೀನಿ ಎಂದು ಧಮ್ಕಿ ಹಾಕಿದ್ದ. ನನಗೆ ಆಘಾತವಾಯ್ತು. ಖಿನ್ನತೆಗೆ ಒಳಗಾದೆ. ವಿಡಿಯೋ ಲೀಕ್​ ಆದ ಮೇಲೆ ನಾನು ನಮ್ಮೂರಿಗೆ ಕಾಲಿಟ್ಟಿಲ್ಲ. ನಾನು ಆತನ ಮೇಲಿಟ್ಟಿದ್ದ ನಂಬಿಕೆಗೆ ಮೋಸ ಆಯ್ತು. ನಾನು ಇದುವರೆಗೂ ಯಾವ ಹುಡಗ ಕೈ ಹಿಡಿದೂ ಮಾತನಾಡಿಸಿಲ್ಲ. ಆದರೆ, ಆತನ ಸಹವಾಸ ಮಾಡಿ ಅಮ್ಮನ ಮಾನ-ಮರ್ಯಾದೆ ತೆಗೆದೆ ಎಂಬ ಫೀಲ್​ ಕಾಡುತ್ತಲೇ ಇದೆ’ ಎಂದು ಮಾತು ನಿಲ್ಲಿಸಿದ್ದಾರೆ. ಅಷ್ಟರಲ್ಲಿ ಸೋನು ಅವರನ್ನ ದೊಡ್ಮನೆಯ ಸದಸ್ಯರು ಸಂತೈಸಿದ್ದಾರೆ.

    ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ ಮಾಡಂಗಿಲ್ಲ: ಜಮೀರ್​

    ಬಿಗ್​ಬಾಸ್​ ಮನೆಗೆ ಸೋನು ಶ್ರೀನಿವಾಸ್​ ಗೌಡ ಎಂಟ್ರಿ ಬೆನ್ನಲ್ಲೇ ಜಾಲತಾಣದಲ್ಲಿ ಅಲ್ಲೋಲ-ಕಲ್ಲೋಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts